ಸಾರಾಂಶ
ಹೆಣ್ಣುಮಕ್ಕಳಿಗೆ ರಕ್ಷಣೆಗಾಗಿ ಸಂವಿಧಾನದ ೧೪ರಿಂದ ೧೭ ವಿಧಿಗಳನ್ನು ಜಾರಿಗೆ ತಂದಿದ್ದರೂ ಕಾನೂನುಗಳ ಅರಿವು ಮಹಿಳೆಯರಿಗೆ ಬೇಕಿದೆ ಎಂದು ಅಪರ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಕಾಂತಮ್ಮ ಎ.ಎನ್ ಹೇಳಿದರು. ಗುಂಡ್ಲುಪೇಟೆಯಲ್ಲಿ ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಹೆಣ್ಣುಮಕ್ಕಳಿಗೆ ರಕ್ಷಣೆಗಾಗಿ ಸಂವಿಧಾನದ ೧೪ರಿಂದ ೧೭ ವಿಧಿಗಳನ್ನು ಜಾರಿಗೆ ತಂದಿದ್ದರೂ ಕಾನೂನುಗಳ ಅರಿವು ಮಹಿಳೆಯರಿಗೆ ಬೇಕಿದೆ ಎಂದು ಅಪರ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಕಾಂತಮ್ಮ ಎ.ಎನ್ ಹೇಳಿದರು.ಪಟ್ಟಣದ ಮದ್ದಾನೇಶ್ವರ ವಿದ್ಯಾ ಸಂಸ್ಥೆಯಲ್ಲಿ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಜಲ್ಯಾಣ ಇಲಾಖೆ, ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ, ಕೈಲಾಸ್ ಸತ್ಯಾರ್ಥಿ ಚಿಲ್ಡ್ರನ್ ಫೌಂಡೇಶನ್ ಮತ್ತು ಮದ್ದಾನೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹೆಣ್ಣು ಮಕ್ಕಳ ವಿರುದ್ಧ ಶೋಷಣೆ ತಡೆಯಲು, ಕೌಟುಂಬಿಕ ದೌರ್ಜನ್ಯ ತಡೆ ಮತ್ತು ವರದಕ್ಷಿಣೆ ಹಾಗೂ ಬಾಲ ವಿವಾಹ ನಿಷೇಧ, ವರದಕ್ಷಿಣೆ ಸೇರಿದಂತೆ ಇನ್ನಿತರ ಕಾಯ್ದೆಗಳಿವೆ ಎಂದರು.
ಮಹಿಳೆಯರಿಗಾಗಿ ಇರುವ ಕಾನೂನಗಳು ಅನೇಕ ಜನರಿಗೆ ತಿಳಿದಿಲ್ಲ. ಆದ ಕಾರಣ ವಿದ್ಯಾರ್ಥಿಗಳು ಕಾನೂನುಗಳ ಬಗ್ಗೆ ತಿಳಿದುಕೊಂಡರೆ ಮಹಿಳೆಯರ ರಕ್ಷಣೆಗಾಗಿ ಹೋರಾಟ ನಡಸಲು ಸಾಧ್ಯ ಎಂದರು. ಸಮಾರಂಭದಲ್ಲಿ ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಎಂ.ಬೀರೇಗೌಡ, ವಕೀಲ ಅರವಿಂದ್, ಮುಖ್ಯ ಶಿಕ್ಷಕ ಪ್ರಕಾಶ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಸರಸ್ವತಿ, ಶಿಶು ಅಭಿವೃದ್ಧಿ ಯೋಜನೆ ಇಲಾಖೆಯ ಮೇಲ್ವಿಚಾರಕಿ ರುದ್ರವ್ವ, ಕೈಲಾಸ್ ಸತ್ಯಾರ್ಥಿ ಫೌಂಡೇಶನ್ ಜಿಲ್ಲಾ ಸಂಯೋಜಕಿ ಜಿ.ಸಿ.ನಾರಾಯಣಸ್ವಾಮಿ, ನಿರ್ಮಲ ಸೇವಾ ಕೇಂದ್ರದ ಸಂಯೋಜಕಿ ಎಡ್ವಿನಾ ಸೇರಿದಂತೆ ವಿದ್ಯಾರ್ಥಿಗಳಿದ್ದರು.