ಸಾರಾಂಶ
ಪಿಪಿಪಿ ವೈದ್ಯಕೀಯ ಮತ್ತು ಜಿಲ್ಲಾ ಆಸ್ಪತ್ರೆ ಹಸ್ತಾಂತರದ ವಿರುದ್ಧ ರಂಗೋಲಿ ಚಳುವಳಿಯಲ್ಲಿ ನೂರಾರು ಮಹಿಳೆಯರು ಭಾಗವಹಿಸಿದರು.ಪಟ್ಟಣದ ಪುರಸಭೆ ಕಾರ್ಯಲಯ ಎದುರು ಹಾಗೂ ಮಿನಿ ವಿಧಾನ ಸೌಧ ಮುಂಭಾಗದಲ್ಲಿ ಮಹಿಳೆಯರು ಸೇರಿ ಜಿಲ್ಲಾಮಟ್ಟದ ರಂಗೋಲಿ ಚಳುವಳಿಯಲ್ಲಿ ಭಾಗವಹಿಸಿದರು.
ಕನ್ನಡಪ್ರಭ ವಾರ್ತೆ ಇಂಡಿ
ಪಿಪಿಪಿ ವೈದ್ಯಕೀಯ ಮತ್ತು ಜಿಲ್ಲಾ ಆಸ್ಪತ್ರೆ ಹಸ್ತಾಂತರದ ವಿರುದ್ಧ ರಂಗೋಲಿ ಚಳುವಳಿಯಲ್ಲಿ ನೂರಾರು ಮಹಿಳೆಯರು ಭಾಗವಹಿಸಿದರು.ಪಟ್ಟಣದ ಪುರಸಭೆ ಕಾರ್ಯಲಯ ಎದುರು ಹಾಗೂ ಮಿನಿ ವಿಧಾನ ಸೌಧ ಮುಂಭಾಗದಲ್ಲಿ ಮಹಿಳೆಯರು ಸೇರಿ ಜಿಲ್ಲಾಮಟ್ಟದ ರಂಗೋಲಿ ಚಳುವಳಿಯಲ್ಲಿ ಭಾಗವಹಿಸಿದರು.
ವಿಜಯಪುರ ಜಿಲ್ಲೆಯಾದ್ಯಂತ ನಡೆಯುತ್ತಿರುವ ಈ ವಿಶಿಷ್ಟ ಪ್ರತಿಭಟನೆಯನ್ನು ಗಮನಿಸಿ ಸರ್ಕಾರವು ಜಿಲ್ಲಾ ಆಸ್ಪತ್ರೆ ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸುವ ಪ್ರಸ್ತಾವನೆಯನ್ನು ಕೈ ಬಿಡಬೇಕು. ಇಂದಿನ ಹೋರಾಟವು ವಿಶೇಷ ರೀತಿಯಲ್ಲಿ ಮಹಿಳೆಯರು ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿ ತಮ್ಮ ವಿರೋಧ ಮತ್ತು ಒಗ್ಗಟ್ಟು ವ್ಯಕ್ತಪಡಿಸಿದರು.ನಗರದ ಪ್ರತಿಯೊಂದು ವೃತ್ತದಲ್ಲೂ ಕರಪತ್ರಗಳನ್ನು ಹಂಚಿ ಜನ ಸಾಮಾನ್ಯ ರೊಂದಿಗೆ ಸಂವಾದ ನಡೆಸಿ ಖಾಸಗೀಕರಣದ ಅಪಾಯಗಳ ಬಗ್ಗೆ ತಿಳಿ ಹೇಳಲಾಯಿತು. ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯ ಅಭಿಯಾನವು ಸಹಿ ಸಂಗ್ರಹ ಮೂಲಕ ಘೋಷಣೆಗಳನ್ನು ಕೂಗಿ, 60 ದಿನಗಳಿಂದ ನಡೆಯುತ್ತಿರುವ ಈ ಹೋರಾಟಕ್ಕೆ ಸರ್ಕಾರ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿರುವುದು ಬೇಸರದ ಸಂಗತಿಯಾಗಿದೆ. ಪ್ರತಿಭಟನೆಯು ಮಿನಿ ವಿಧಾನ ಸೌಧದ ಮುಂದೆ ಎಲ್ಲ ಮಹಿಳಾ ನಾಯಕರು ಹಾಗೂ ಕಾರ್ಯಕರ್ತರು ಸೇರಿ ಮುಖ್ಯಮಂತ್ರಿಗಳಿಗೆ ಉಪವಿಭಾಗಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಸಿದ್ದರಾಮ ಹಳ್ಳೂರ, ರೇಣುಕಾ ನಾಟೀಕಾರ, ಸರುಭಾಯಿ ದಶವಂತ, ಅಕ್ಷತಾ ಬಬಲಾದ, ಸುನಂದಾ ನಾಟೀಕಾರ, ಮಾಹಾದೇವಿ ಚನ್ನಿರಪ್ಪಗೋಳ, ಸುನಂದ ತದ್ದೆವಾಡಿ, ರಾದಾ ನಿಂಬಾಳಕರ, ಯಲ್ಲವ್ವ ಮಾದರ, ಸಿದ್ದಮ್ಮ ಗುಣಕಿ, ಸುನಂದಾ ಬಬಲಾದ, ಸರುಬಾಯಿ ದಶವಂತ, ಅಕ್ಷತಾ ಬಬಲಾದ, ಸುನಂದಾ ನಾಟೀಕಾರ ಮೊದಲಾದವರು ಪಾಲ್ಗೊಂಡಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))