ಸಾರಾಂಶ
ಸಿಂದಗಿ ಪಟ್ಟಣದಲ್ಲಿ ಮಂಗಳವಾರ ಶ್ರೀ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಅಮ್ಮನವರ ಬೆಳ್ಳಿ ರಥವನ್ನು ನೂರಾರು ಮಹಿಳೆಯರು ಎಳೆಯುವುದರ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು.ಸಾರಂಗಮಠದ ಲಿಂ.ಚೆನ್ನವೀರ ಸ್ವಾಮೀಜಿ ಜಯಂತ್ಯುವ ನಿಮಿತ್ತ ಆಯೋಜಿಸಿರುವ ಪುರಾಣ ಪ್ರವಚನದ ಕೊನೆಯ ದಿನವಾದ ಮಂಗಳವಾರ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಸಿಂದಗಿ
ಪಟ್ಟಣದಲ್ಲಿ ಮಂಗಳವಾರ ಶ್ರೀ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಅಮ್ಮನವರ ಬೆಳ್ಳಿ ರಥವನ್ನು ನೂರಾರು ಮಹಿಳೆಯರು ಎಳೆಯುವುದರ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು.ಸಾರಂಗಮಠದ ಲಿಂ.ಚೆನ್ನವೀರ ಸ್ವಾಮೀಜಿ ಜಯಂತ್ಯುವ ನಿಮಿತ್ತ ಆಯೋಜಿಸಿರುವ ಪುರಾಣ ಪ್ರವಚನದ ಕೊನೆಯ ದಿನವಾದ ಮಂಗಳವಾರ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ನೂರಾರು ಭಕ್ತರಿಂದಲೇ ನಿರ್ಮಾಣಗೊಂಡ ಬೆಳ್ಳಿ ರಥ 6 ವರ್ಷಗಳಿಂದ ರಥೋತ್ಸವ ನಡೆಯುತ್ತ ಬಂದಿದೆ. ಬೆಳ್ಳಿ ರಥದ ಬೆಳ್ಳಿ ಪೀಠದಲ್ಲಿ ವೀರಭದ್ರದೇವರು ಮತ್ತು ಭದ್ರಕಾಳಿ ಅಮ್ಮನವರ ಉತ್ಸವ ಮೂರ್ತಿಗಳು ವಿರಾಜಮಾನವಾಗಿದ್ದವು. ವಿವಿಧ ಪೂಜೆ ಕೈಂಕರ್ಯಗಳು ಜರುಗಿದ ಬಳಿಕ ಬೆಳ್ಳಿ ರಥವನ್ನು ಮಹಿಳೆಯರು ನಾ ಮುಂದೆ ತಾ ಮುಂದೆ ಎಂದು ಎಳೆಯಲು ಪ್ರಾರಂಭಿಸಿದರು.ಬೆಳ್ಳಿ ರಥ ಮತ್ತು ಪಲ್ಲಕ್ಕಿ, ನಗರದ ಸಾರಂಗಮಠದಿಂದ ಆರಂಭಗೊಂಡು, ಸ್ವಾಮಿ ವಿವೇಕಾನಂದ ವೃತ್ತ, ತೋಂಟದ ಡಾ.ಸಿದ್ಧಲಿಂಗ ಮಹಾಸ್ವಾಮಿಗಳ ರಸ್ತೆ ಮಾರ್ಗವಾಗಿ, ಗಚ್ಚಿನಮಠದ ಚೆನ್ನವೀರ ಸ್ವಾಮೀಜಿ ಪ್ರೌಢಶಾಲೆ ಅವರಣದಲ್ಲಿರುವ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಅಮ್ಮನವರ ದೇವಸ್ಥಾನಕ್ಕೆ ತಲುಪಿತು.
ಮಾರ್ಗದುದ್ದಕ್ಕೂ ವೀರಗಾಸೆ ಕುಣಿತ ಗಮನ ಸೆಳೆಯಿತು. ಪುರವಂತರ ಸೇವೆ, ಜಯ ಘೋಷಗಳೊಂದಿಗೆ ಬೆಳ್ಳಿ ರಥ ಹಾಗೂ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಸಾಗಿ ಬಂತು. ನಂತರ ದೇವಸ್ಥಾನದ ಬೆಳ್ಳಿ ಪಲ್ಲಕ್ಕಿಯೊಂದಿಗೆ ಅಗ್ನಿ ಪ್ರವೇಶ ಮಾಡಲಾಯಿತು. ರಥೋತ್ಸವದಲ್ಲಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಕೊಣ್ಣೂರಿನ ಹೊರಗಿನಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಪಾಳಮಠದ ಡಾ.ಗುರುಮೂರ್ತಿ ಶಿವಾಚಾರ್ಯರು, ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು, ಶಾಸಕ ಅಶೋಕ ಮನಗೂಳಿ, ಕೊಕಟನೂರ ಶ್ರೀಗಳು, ದೇವರ ಹಿಪ್ಪರಗಿ ಶ್ರೀಗಳು, ಕುಮಸಗಿ ಶ್ರೀಗಳು, ಕಲಕೇರಿ ಶ್ರೀಗಳು ಸೇರಿದಂತೆ ತಾಲೂಕಿನ ವಿವಿಧ ಮಠದ ಶ್ರೀಗಳು, ನೆಹರು ಪೋರವಾಲ, ಗಂಗಾಧರ ಜೋಗೂರ, ಅಶೋಕ ಮಸಳಿ, ಅಶೋಕ ವಾರದ, ವಿಶ್ವನಾಥ ಜೋಗೂರ, ಸೋಮನಗೌಡ ಬಿರಾದಾರ, ರವಿ ಗೋಲಾ, ಎಸ್.ಎಂ. ಬಿರಾದಾರ, ಡಾ.ಶರಣಬಸವ ಜೋಗೂರ, ವೀರೇಶ ಜೋಗೂರ, ಮುತ್ತು ಮುಂಡೇವಾಡಗಿ, ಶ್ರೀಶೈಲ ನಂದಿಕೋಲ, ಬಸವರಾಜ ಜೋಗೂರ, ಜಿ.ಎಸ್. ಜಂಗಿನಮಠ, ಶಂಕರಲಿಂಗ ಹಿರೇಮಠ, ಪ್ರಾಚಾರ್ಯ ವಿ.ಡಿ. ಪಾಟೀಲ, ಸೋಮು ಜೋಗೂರ, ಡಾ.ಮಹಾಂತೇಶ ಹಿರೇಮಠ, ಮಲ್ಲನಗೌಡ ಪಾಟೀಲ ಬ್ಯಾಕೋಡ, ಚನ್ನು ಕತ್ತಿ ಹಾಗೂ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಸಂಸ್ಥೆಯ ಅಂಗ ಸಂಸ್ಥೆಗಳ ಪ್ರಾಚಾರ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ಮಹಿಳಾ ಭಕ್ತರು, ತಾಲೂಕಿನ ಶ್ರೀಮಠದ ಭಕ್ತರು, ಜಿ.ಪಿ. ಪೋರವಾಲ್ ಮತ್ತು ಆರ್.ಡಿ. ಪಾಟೀಲ ಕಾಲೇಜಿನ ಎನ್.ಸಿ.ಸಿ, ಎನ್ಎಸ್ಎಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.------ಕೋಟ್ಸ್---
ಮಹಿಳೆ ಈ ಜಗದ ಕಣ್ಣು. ಭಾರತ ದೇಶ ಮಹಿಳೆಯರಿಗೆ ಪೂಜ್ಯನಿಯ ಭಾವದಿಂದ ಕಾಣುತ್ತದೆ. ಮಹಿಳೆಯರಿಗೂ ಎಲ್ಲ ಕ್ಷೇತ್ರದಲ್ಲಿ ಮನ್ನಣೆ ಸಿಕ್ಕಂತೆ ಜಾತ್ರೆಯಲ್ಲಿಯೂ ಅವರಿಗೆ ಅವಕಾಶ ನೀಡಬೇಕು ಎಂಬ ಸಂಕಲ್ಪದಿಂದ ಸುಮಾರು ಆರು ವರ್ಷಗಳಿಂದಲೂ ಜಾತ್ರಾ ಮಹೋತ್ಸವದಲ್ಲಿ ಮಹಿಳೆಯರಿಂದಲೇ ರಥ ಎಳೆಯುವ ಕಾರ್ಯ ಮಾಡಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಇದೊಂದು ವಿಶೇಷ ಜಾತ್ರಾ ಮಹೋತ್ಸವವಾಗಿದೆ.- ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಸಾರಂಗಮಠ ಸಿಂದಗಿ-------
ಕೋಟ್ಸ್- ಅನೇಕ ಜಾತ್ರೆಗಳಲ್ಲಿ ಪುರುಷರು ರಥ ಎಳೆಯುತ್ತಿರುವುದನ್ನು ಕಾಣುತ್ತೇವೆ. ಆದರೆ ಸಿಂದಗಿಯ ಸಾರಂಗಮಠದ ಜಾತ್ರಾ ಮಹೋತ್ಸವದಲ್ಲಿ ಮಹಿಳೆಯರಿಂದ ರಥ ಎಳೆಯುತ್ತಿರುವ ಕಾರ್ಯ ಅತ್ಯಂತ ವಿಶಿಷ್ಟವಾಗಿದೆ. ಮಹಿಳೆಯರು ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿಯೂ ಮುಂದಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಈ ಅವಕಾಶ ನೀಡಿದ ಸಾರಂಗ ಶ್ರೀಗಳಿಗೆ ಅನೇಕ ಮಹಿಳೆಯರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಮೊದಲ ಬಾರಿಗೆ ರಥ ಎಳೆಯುತ್ತಿದ್ದೇನೆ. ಬಹಳ ಸಂತಸ ತಂದಿದೆ.-ಭಾಗ್ಯಶ್ರೀ ಪಾಟೀಲ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಿಂದಗಿ
--ಎಚ್19ಎಸ್ಎನ್ಡಿ01: -- ಶ್ರೀ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಅಮ್ಮನವರ ಬೆಳ್ಳಿ ರಥಕ್ಕೆ ಸಾರಂಗಮಠದ ಡಾ.ಪ್ರಭುಸಾರಂಗದೇವ ಆದಿಯಾಗಿ ತಾಲೂಕಿನ ವಿವಿಧ ಮಠಾಧೀಶರು ಚಾಲನೆ ನೀಡಿದರು.