ಸಾರಾಂಶ
ಸೂಲಿಬೆಲೆ: ಸಾಮಾಜಿಕ ಸಮತೋಲನಕ್ಕೆ ಮಹಿಳಾ ಸಬಲೀಕರಣವಾಗಬೇಕು. ಮಹಿಳೆಯರಿಗೆ ಸರ್ಕಾರದ ಮೀಸಲಾತಿಗಳು ಕಡ್ಡಾಯವಾಗಿ ಜಾರಿಯಾಗಬೇಕು ಎಂದು ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ ಹೇಳಿದರು.
ಸೂಲಿಬೆಲೆ: ಸಾಮಾಜಿಕ ಸಮತೋಲನಕ್ಕೆ ಮಹಿಳಾ ಸಬಲೀಕರಣವಾಗಬೇಕು. ಮಹಿಳೆಯರಿಗೆ ಸರ್ಕಾರದ ಮೀಸಲಾತಿಗಳು ಕಡ್ಡಾಯವಾಗಿ ಜಾರಿಯಾಗಬೇಕು ಎಂದು ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ ಹೇಳಿದರು.
ಗ್ರಾಪಂ ಸಭಾಂಗಣದಲ್ಲಿ ಜೇನುಗೂಡು ರೂರಲ್ ಡೆವಲ್ಪಮೆಂಟ್ ಅಂಡ್ ಕಲ್ಚರಲ್ ಟ್ರಸ್ಟ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆಶ್ರಯ ಸಂಜೀವಿನಿ ಮಹಿಳಾ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜೇನುಗೂಡು ಟ್ರಸ್ಟ್ ನಿರ್ದೇಶಕ ದೇವಿದಾಸ್ ಸುಬ್ರಾಯ್ ಶೇಠ್ ಮಾತನಾಡಿ, ಸ್ವಾಭಿಮಾನದ ಜೀವನ ಕಟ್ಟಿಕೊಳ್ಳಬೇಕು. ಪುರುಷರಿಗೆ ಸಮಾನವಾದ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಿಕೊಂಡು ಸಾಮಾಜಿಕವಾಗಿ, ಅರ್ಥಿಕವಾಗಿ ರಾಜಕೀಯವಾಗಿ ಮುನ್ನುಗ್ಗಬೇಕು ಎಂದರು.
ಇದೇ ವೇಳೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಗುಂಪಿನ ಯಶೋಧ, ಆಶ್ರಯ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಅನುರಾಧ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಭಾರತಿ, ಆಶಾ ಕಾರ್ಯಕರ್ತೆ ಅನಿತಾ ಅವರನ್ನು ಸನ್ಮಾನಿಸಲಾಯಿತು.ರಂಗೋಲಿ, ಮೆಹಂದಿ, ಲೆಮನ್ ಅಂಡ್ ಸ್ಪೂನ್, ಮ್ಯೂಜಿಕಲ್ ಚೇರ್ ಕ್ರೀಡೆಗಳನ್ನು ನಡೆಸಿ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು.
ಗ್ರಾಪಂ ಅಧ್ಯಕ್ಷ ಜನಾರ್ದನರೆಡ್ಡಿ, ಉಪಾಧ್ಯಕ್ಷೆ ಷಾಜಿಯಾಖಾನಂ, ನಿರ್ದೇಶಕ ಸೈಯದ್ ಮಹಬೂಬ್, ಕೆ.ವಿ.ವಿಜಯಲಕ್ಷ್ಮೀ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ಎಂ.ಆರ್.ಉಮೇಶ್, ಮಾಜಿ ಉಪಾಧ್ಯಕ್ಷ ಶಿವರುದ್ರಪ್ಪ, ಸದಸ್ಯ ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್, ಚೇತನ್‌ಗೌಡ ಇತರರಿದ್ದರು.