ಸಾರಾಂಶ
ಸಾಕ್ಷರತೆಯ ಮೂಲಕ, ಮಹಿಳೆಯರು ತಮ್ಮ ವ್ಯಕ್ತಿತ್ವ ಸುಧಾರಿಸಬಹುದು
ಗದಗ: ಮಹಿಳಾ ಸಾಕ್ಷರತೆ ಅತಿ ಮುಖ್ಯ ಮತ್ತು ಸಮಾಜದ ಪ್ರಗತಿಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕವಿತಾ ಬೇಲೇರಿ ಹೇಳಿದರು.
ಇನ್ನರ್ ವ್ಹೀಲ್ ಸಂಸ್ಥೆ ಗದಗ-ಬೆಟಗೇರಿ ಹಾಗೂ ಗದಗ ತಾಪಂ ಸಹಯೋಗದಲ್ಲಿ ಶಿಕ್ಷಕರಿಗಾಗಿ ಕ್ರಿಯಾತ್ಮಕ ಸಾಕ್ಷರತಾ ಕಾರ್ಯಕ್ರಮದ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಸಾಕ್ಷರತೆಯ ಮೂಲಕ, ಮಹಿಳೆಯರು ತಮ್ಮ ವ್ಯಕ್ತಿತ್ವ ಸುಧಾರಿಸಬಹುದು ಮತ್ತು ಹೆಚ್ಚಿಸಬಹುದು, ಸಾಕ್ಷರತೆ ಅವರ ಜೀವನದಲ್ಲಿ ಆರ್ಥಿಕ ಸ್ಥಿರತೆ,ಸಬಲೀಕರಣ, ಲಿಂಗ ಸಮಾನತೆ ಮತ್ತು ಸಮಾಜದ ಪ್ರಗತಿಗೆ ಕೊಡುಗೆ ನೀಡಬಹುದಾಗಿದೆ ಎಂದ ಅವರು, ಮಹಿಳಾ ಸಾಕ್ಷರತೆಯ ಪ್ರಾಮುಖ್ಯತೆ ತಿಳಿಸಿದರು.
ಪಿ.ಡಿ. ಮಂಗಳೂರು ಮಾತನಾಡಿ, ಮಹಿಳೆ ಸಹಜವಾಗಿಯೆ ತ್ಯಾಗ ಹಾಗೂ ನಾಯಕತ್ವ ಗುಣ ತನ್ನಲ್ಲಿ ಹೊಂದಿರುತ್ತಾಳೆ. ವಿದ್ಯೆ ಮಹಿಳೆಯಲ್ಲಿ ವಿಶ್ವಾಸ ಹೆಚ್ಚಿಸುತ್ತದೆಯೆಂದರು.ಸಂಸ್ಥೆಯ ಅಧ್ಯಕ್ಷೆ ನಾಗರತ್ನಾ ಮಾರನಬಸರಿ, ಜಿ.ಎಸ್. ಕಿಲಬಣ್ಣವರ ಮುಂತಾದವರು ಮಾತನಾಡಿದರು. ತರಬೇತಿ ಕಾರ್ಯಕ್ರಮಲ್ಲಿ 58 ತರಬೇತಿ ಪಡೆದರು. ಈ ಸಂದರ್ಭದಲ್ಲಿ ಸುಮಾ ಪಾಟೀಲ, ಪುಷ್ಪಾ ಭಂಡಾರಿ, ಕಾರ್ಯದರ್ಶಿ ವೀಣಾ ತಿರ್ಲಾಪೂರ ಉಪಸ್ಥಿತರಿದ್ದರು.