ಪ್ರಾಮಾಣಿಕ ಸೇವೆಯಿಂದ ಮಹಿಳಾ ಸಂಸ್ಥೆಗಳು ಮುಂಚೂಣಿಯಲ್ಲಿ

| Published : Sep 28 2024, 01:18 AM IST

ಪ್ರಾಮಾಣಿಕ ಸೇವೆಯಿಂದ ಮಹಿಳಾ ಸಂಸ್ಥೆಗಳು ಮುಂಚೂಣಿಯಲ್ಲಿ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲ ರಂಗಗಳಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಸೊಸೈಟಿ, ಪೆಂಟ್ರೋಲ್ ಪಂಪ್‌, ಹೋಟೆಲ್‌, ಪ್ರತಿಯೊಂದು ಕಾಮಗಾರಿಗಳಲ್ಲಿ ಹೆಣ್ಮಕ್ಕಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಮಹಿಳಾ ಸಂಸ್ಥೆಗಳು ಮುಂಚೂಣಿಯಲ್ಲಿವೆ ಹಾಗೂ ಹಣಕಾಸು ಸಂಸ್ಥೆಗಳು ಲಾಭದಲ್ಲಿವೆ ಎಂದು ಎಚ್.ಬಿ.ಅಸೂಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುನವಳ್ಳಿ

ಎಲ್ಲ ರಂಗಗಳಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಸೊಸೈಟಿ, ಪೆಂಟ್ರೋಲ್ ಪಂಪ್‌, ಹೋಟೆಲ್‌, ಪ್ರತಿಯೊಂದು ಕಾಮಗಾರಿಗಳಲ್ಲಿ ಹೆಣ್ಮಕ್ಕಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಮಹಿಳಾ ಸಂಸ್ಥೆಗಳು ಮುಂಚೂಣಿಯಲ್ಲಿವೆ ಹಾಗೂ ಹಣಕಾಸು ಸಂಸ್ಥೆಗಳು ಲಾಭದಲ್ಲಿವೆ ಎಂದು ಎಚ್.ಬಿ.ಅಸೂಟಿ ಹೇಳಿದರು.

ಪಟ್ಟಣದ ಶ್ರೀ ಮಹಾಲಕ್ಷ್ಮೀ ಮಹಿಳಾ ಕೋ-ಆಪ್ ಕ್ರೆಡಿಟ್ ಸೊಸೈಟಿಯ 24ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

ಸಂಘದ ಅಧ್ಯಕ್ಷೆ ಶಾರದಾ ಪಂಚನಗೌಡ ದ್ಯಾಮನಗೌಡ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರ ಆರ್ಥಿಕ ಸ್ವಾವಲಂಬನೆ ಉದ್ದೇಶದಿಂದ ಪ್ರಾರಂಭವಾದ ಸಹಕಾರಿ ಸಂಘ ಪ್ರಗತಿಪಥದಲ್ಲಿ ಸಾಗುತ್ತಿದೆ. ಮಹಿಳೆಯರಿಗಾಗಿ ಹಲವಾರು ಯೋಜನೆಗಳಿವೆ. ಇದರ ಸದುಪಯೋಗವನ್ನು ಹೆಣ್ಮಕ್ಕಳು ಪಡೆದು ತಮ್ಮ ಬೆಳವಣಿಗೆ ಜೊತೆಗೆ ಸಂಘವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ಸಂಘದ ಮುಖ್ಯ ಕಾರ್ಯನಿವಾಹಕಿ ಮಂಜುಳಾ ಮುರನಾಳ ಮಾತನಾಡಿ, ಸಂಘ 2504 ಸದಸ್ಯರನ್ನು ಹೊಂದಿದ್ದು, ₹2.96 ಕೋಟಿ ಠೇವಣಿ ಹೊಂದಿದ್ದು, ಸದಸ್ಯರಿಗೆ ₹3.61 ಕೋಟಿ ಸಾಲ ಹಂಚಿದೆ. ಪ್ರಸಕ್ತ ಸಾಲಿನಲ್ಲಿ ₹6.57 ಕೋಟಿ ಲಾಭ ಗಳಿಸಿದ್ದು, ಶೇ.5 ಲಾಭಾಂಶ ನೀಡಲಾಗುತ್ತಿದೆ ಎಂದು ಹೇಳಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಚನಗೌಡ ದ್ಯಾಮನಗೌಡ್ರ, ಸಾನ್ನಿಧ್ಯ ವಹಿಸಿದ್ದ ಎಂ.ಕೆ.ಹಿರೇಮಠ ಹಾಗೂ ಚಂದ್ರಯ್ಯಸ್ವಾಮೀಜಿ ಮಾತನಾಡಿದರು. ಉಪಾಧ್ಯಕ್ಷೆ ಲಕ್ಷ್ಮವ್ವ ಹೂಲಿ, ನಿರ್ದೇಶಕರಾದ ಪವಿತ್ರಾ ದ್ಯಾಮನಗೌಡರ, ಕಸ್ತೂರಿ ನಲವಡೆ, ಮುಕ್ತಾ ಪಶುಪತಿಮಠ, ನೇತ್ರಾ ಲಂಬೂನವರ, ರಾಧಿಕಾ ಹಿಂಬರಕಿ, ಹೇಮಾ ಗೀದಿಗೌಡ್ರ, ಇಮಾಂಬಿ ಭೈರಕದಾರ, ಖಲೀದಾ ಅಂಬಿನಾಯ್ಕ, ಪಂಕಜಾ ಸುಣಗಾರ, ಶಿಲ್ಪಾ ಕೆಳಗಡೆ, ಬಸವ್ವ ದೊಡಮನಿ, ಪಂಚಪ್ಪ ಗಂಡ್ಲೂರ, ಹಣಮಂತ ಕರೀಕಟ್ಟಿ, ಸುವರ್ಣಾ ಅಂಕಲಗಿ ಇತರರು ಇದ್ದರು. ಪ್ರಶಾಂತ ಅಳಗವಾಡಿ ಸ್ವಾಗತಿಸಿ ನಿರೂಪಿಸಿದರು.