ಸಾರಾಂಶ
ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮಿ ತುಂಗಳ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಜಮಖಂಡಿ
ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮಿ ತುಂಗಳ ಅಭಿಪ್ರಾಯಪಟ್ಟರು.ನಗರದ ಕುಂಬಾರ ಗಲ್ಲಿಯ ಗೌರಿಶಂಕರ ಕಲ್ಯಾಣ ಮಠದ ಸಭಾಭವನದಲ್ಲಿ ಬಿಜೆಪಿ ಮಹಿಳಾ ಘಟಕದಿಂದ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಅನೇಕ ಯೋಜನೆ ಜಾರಿಗೊಳಿಸಿದೆ. ಮಹಿಳಾ ಸಬಲೀಕರಣ, ಮಹಿಳಾ ಮೀಸಲಾತಿ ಜಾರಿಗೆ ತರುವ ಮೂಲಕ ಮಹಿಳೆಯರ ಬೆಂಬಲಕ್ಕೆ ನಿಂತಿದೆ. ಮುದ್ರಾ ಯೋಜನೆ ಸಾಲ ಪಡೆದು ಮಹಿಳೆಯರು ಆರ್ಥಿಕವಾಗಿ ಸದೃಢವಾಗುತ್ತಿದ್ದಾರೆ. ಸ್ವನಿಧಿ ಯೋಜನೆ ಮೂಲಕ ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡಲಾಗುತ್ತಿದೆ. ಕೇರಳ ಮತ್ತು ಗುಜರಾತ್ ರಾಜ್ಯಗಳಲ್ಲಿ ಪ್ರತಿಯೊಬ್ಬ ಮಹಿಳೆ ಉದ್ಯೋಗ ಮಾಡುತ್ತಾ ಜೀವನ ನಡೆಸುತ್ತಿದ್ದಾರೆಂದರು.
ನೇತ್ರ ತಜ್ಞೆ ಡಾ. ಐಶ್ವರ್ಯ ನ್ಯಾಮಗೌಡ ಮಾತನಾಡಿ, 30,000 ಜನರು ಕರಿಗುಡ್ಡ ಸಮಸ್ಯೆಯಿಂದ ನರಳುತ್ತಿದ್ದಾರೆ. ಆದಕಾರಣ ಪ್ರತಿಯೊಬ್ಬರೂ ನೇತ್ರದಾನ ಮಾಡಬೇಕು. ಮರಣದ ನಂತರ ಆರು ತಾಸಿನೊಳಗೆ ಕಣ್ಣಿನ ಬ್ಯಾಂಕಿಗೆ ಫೋನ್ ಮಾಡಿದರೆ ನೀವಿರುವ ಸ್ಥಳದಲ್ಲಿ ಬಂದು ವೈದ್ಯರು ಕಣ್ಣು ತೆಗೆದುಕೊಂಡು ಹೋಗುತ್ತಾರೆಂದರು. ಬಿಜೆಪಿ ಮುಖಂಡ ಈಶ್ವರ ಆದೆಪನ್ನವರ ಮಾತನಾಡಿದರು. ಗೀತಾ ಸೂರ್ಯವಂಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ವರಿ ಹಿರೇಮಠ, ಸಂಗಮೇಶ ದಳವಾಯಿ, ಸುಜಾತಾ ಭೂತಡಾ, ಮಲ್ಲು ದಾನಗೌಡ, ಪೂಜಾ ವಾಳ್ವೇಕರ, ಅನುಸೂಯಾ ಅಸುಗಡೆ, ಮಹಾದೇವಿ ಮೂಲಿಮನಿ, ಕುಶಾಲ ವಾಗ್ಮೊರೆ, ಶ್ಯಾಮ ಗಣಚಾರಿ, ಸವಿತಾ ಕುಂಚನೂರ, ಸವಿತಾ ಕಲ್ಯಾಣಿ, ವಿಜು ಕಂಬಿ, ರಾಜಶ್ರೀ ವಾಗ್ಮೋರೆ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ನಗರ ಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ, ಸಿದ್ದು ಬಿಳ್ಳೂರ, ಗಣೇಶ ಶಿರಗಣ್ಣವರ ಮಾತನಾಡಿದರು. ವೀಣಾ ಕುಲಕರ್ಣಿ ಪ್ರಾರ್ಥಿಸಿದರು. ಸುನಿತಾ ಬಳಗಾರ ಸ್ವಾಗತಿಸಿದರು. ಮಹಾನಂದ ಪಾಯಗೊಂಡ ನಿರೂಪಿಸಿದರು. ಸಾವಿತ್ರಿ ಗೋರನಾಳ ವಂದಿಸಿದರು.