ಸಾರಾಂಶ
ಗದಗ: ಸ್ವಾವಲಂಬಿ ಜೀವನ ನಡೆಸಿ ಯುವತಿಯರು ಶಿಕ್ಷಣದಲ್ಲಿ ಮುಂದೆ ಬರಬೇಕು, ಯುವತಿಯರ ಬೇರೆ ಯಾವುದೇ ವಿಷಯದಲ್ಲಿ ತಲೆಕೆಡಿಸಿಕೊಳ್ಳದೆ ಯುವತಿಯರ ಗುರಿ ಕೇವಲ ಶಿಕ್ಷಣದ ಸಾಧನೆ ಕಡೆ ಇರಬೇಕು, ಕುಟುಂಬ ಹಾಗೂ ಸಮಾಜ ಮೆಚ್ಚುವಂತಹ ಶಿಕ್ಷಣ ಕಲೆತು ಇನ್ನೊಬ್ಬರಿಗೆ ಮಾದರಿಯಾಗುವಂತೆ ಬದುಕಬೇಕು ಎಂದು ರಾಜರಾಜೇಶ್ವರಿ ಮಹಿಳಾ ಮಂಡಲದ ಅಧ್ಯಕ್ಷೆ ರೇಣುಕಾಬಾಯಿ ಕಬಾಡಿ ಹೇಳಿದರು.
ನಗರದ ಗಂಗಾಪುರ ಪೇಟೆ ಖಾನತೋಟ ಓಣಿಯಲ್ಲಿ ರಾಜರಾಜೇಶ್ವರಿ ಮಹಿಳಾ ಮಂಡಲದಿಂದ ಇತ್ತೀಚೆಗೆ ನಡೆದ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದರು.ಎಸ್.ಎಸ್.ಕೆ ಸಮಾಜದ ಮಹಿಳಾ ಮಂಡಳದ ಅಧ್ಯಕ್ಷೆ ಉಮಾ ಬೇವಿನಕಟ್ಟಿ, ನಿವೃತ್ತಿ ಪ್ರಿನ್ಸಿಪಾಲ ಚಂದ್ರಭಾಗ ಕಾಟಿಗರ, ಗೌರವಾಧ್ಯಕ್ಷೆ ಸರೋಜಾಬಾಯಿ ಟೀಕಂದಾರ ಮಾತನಾಡಿ, ಮಹಿಳೆಯರು ಕೇವಲ ಮನೆಗೆ ಮಾತ್ರ ಸೀಮಿತವಾಗಬಾರದು ಹೊರಗೆ ಬಂದು ಸಾಮಾಜಿಕ ಸೇವೆಯಲ್ಲಿ ಪಾಲ್ಗೊಳ್ಳಬೇಕು. ಸಮಾಜದಲ್ಲಿ ಮಹಿಳೆಯರಿಗೆ ತೊಂದರೆಯಾದಾಗ ಅವರಿಗೆ ಅನ್ಯಾಯವಾದಾಗ ಅದರ ವಿರುದ್ಧ ಪ್ರತಿಭಟಿಸುವಂತಹ ಸಾಮರ್ಥ್ಯ ಹೊಂದಬೇಕು. ಇತರ ಮಹಿಳೆಯರಿಗೆ ನಾವು ಧೈರ್ಯ ತುಂಬುವಂತ ಕೆಲಸ ಮಾಡಬೇಕು ಹಾಗೂ ನಮ್ಮ ಮಕ್ಕಳಿಗೆ ಒಳ್ಳೆ ಶಿಕ್ಷಣದ ಜತೆಗೆ ಹಿಂದೂ ಸನಾತನ ಧರ್ಮದ ಸಂಸ್ಕಾರ ಸಂಸ್ಕೃತಿ ಕಲಿಸಬೇಕು ವಿಶೇಷವಾಗಿ ನಮ್ಮ ಮನೆಯಲ್ಲಿರುವಂತ ಹೆಣ್ಣು ಮಕ್ಕಳಿಗೆ ಮೈತುಂಬ ಬಟ್ಟೆ ಕೈ ತುಂಬಾ ಬಳೆ ಹಣೆ ಮೇಲೆ ಕುಂಕುಮ ತಲೆ ಮೇಲೆ ಹೂವು ದೇವರಿಗೆ ಪೂಜೆ ಪುನಸ್ಕಾರದ ಬಗ್ಗೆ ಜಾಗೃತಿ ಮೂಡಿಸುವಂತ ಕೆಲಸ ಮಾಡಬೇಕು ಎಂದರು.
ಈ ವೇಳೆ ವೀಣಾ ಬದಿ, ಕಸ್ತೂರಿ ಕಬಾಡಿ, ವಿಜಯ ಕಬಾಡಿ, ಗೋದಾವರಿ ಕಬಾಡಿ, ಗಂಗಾ ಪವಾರ, ತುಳಸಾ ಹಬೀಬ, ಲಕ್ಷ್ಮಿ ಕಬಾಡಿ ಹಾಗೂ ಇನ್ನು ಅನೇಕರು ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಶ್ರೀದೇವಿ ಕಬಾಡಿ ನಿರೂಪಿಸಿದರು. ಕಾರ್ಯದರ್ಶಿ ಗಂಗಾ ಸಿದ್ದಲಿಂಗ, ಖಜಾಂಚಿ ಅಕ್ಷತಾ ಪವಾರ ಪರಿಚಯಿಸಿದರು.