ಸಾರಾಂಶ
ಮಹಿಳೆಯರು ಪ್ರೋತ್ಸಾಹಕ್ಕೆ ಕಾಯುತ್ತಾ ಕೂರದೆ ತನ್ನ ಗುರಿಯನ್ನು ನೆನೆದು ಅನುಷ್ಠಾನಕ್ಕಾಗಿ ಪ್ರಯತ್ನಿಸಬೇಕು. ಮಹಿಳಾ ಸಾಧನೆಗೆ ಪೂರಕವಾಗಿ ಪ್ರತಿಯೊಬ್ಬರು ಪ್ರಯತ್ನಿಸಬೇಕು,ಯೋಜನೆಗಳನ್ನು ರೂಪಿಸಬೇಕು. ಆಗ ಮಾತ್ರ ಸಬಲೀಕರಣ ಸಾಧ್ಯ ಎಂದು ಜ್ಞಾನದೀಪ ಆಂಗ್ಲ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕಿ ಅನಿತಾ ಪ್ರಕಾಶ್ ಭದ್ರಾವತಿಯಲ್ಲಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ, ಭದ್ರಾವತಿ
ಮಹಿಳೆಯರು ಪ್ರೋತ್ಸಾಹಕ್ಕೆ ಕಾಯುತ್ತಾ ಕೂರದೆ ತನ್ನ ಗುರಿಯನ್ನು ನೆನೆದು ಅನುಷ್ಠಾನಕ್ಕಾಗಿ ಪ್ರಯತ್ನಿಸಬೇಕು. ಮಹಿಳಾ ಸಾಧನೆಗೆ ಪೂರಕವಾಗಿ ಪ್ರತಿಯೊಬ್ಬರು ಪ್ರಯತ್ನಿಸಬೇಕು,ಯೋಜನೆಗಳನ್ನು ರೂಪಿಸಬೇಕು. ಆಗ ಮಾತ್ರ ಸಬಲೀಕರಣ ಸಾಧ್ಯ ಎಂದು ಜ್ಞಾನದೀಪ ಆಂಗ್ಲ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕಿ ಅನಿತಾ ಪ್ರಕಾಶ್ ಹೇಳಿದರು. ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಿರ್ಮಲ ಮಹಿಳಾ ಸೇವಾ ಕೇಂದ್ರದಿಂದ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.ಭಾರತದ ಏಳಿಗೆಯಲ್ಲಿ ಅನೇಕ ಮಹಿಳಾ ಸಾಧಕಿಯರ ಶ್ರಮವಿದೆ. ಮಹಿಳೆಯರಿಗೆ ಸಮಸ್ಯೆಗಳು ಸಹಜ. ಆದರೂ, ಅನೇಕ ಸಾಧನೆಗೆ ಮಹಿಳೆಯರೆ ಪ್ರೇರಣೆಯಾಗಿದ್ದಾರೆ. ಮನೆಗಳಲ್ಲಿ ಹೆಣ್ಣುಮಕ್ಕಳನ್ನು ತಾರತಮ್ಯ ಮಾಡದೇ ಗಂಡುಮಕ್ಕಳಂತೆಯೇ ಸಮಾನತೆಯಿಂದ ಬೆಳೆಸುವುದು ಮುಖ್ಯ. ಮಹಿಳೆಯರ ಸಾಧನೆಗೆ ಪ್ರೋತ್ಸಾಹ ನೀಡುವ ಪುರುಷರಿಗೆ ಮಹಿಳೆಯರು ಧನ್ಯವಾದ ತಿಳಿಸಬೇಕು ಎಂದ ಅವರು, ಪ್ರತಿ ಮಹಿಳೆ ವಿಶ್ವ ಮಹಿಳಾ ದಿನಾಚರಣೆಗೆ ತನ್ನಿಂದ ಏನಾದರೂ ಕೊಡುಗೆ ನೀಡಬೇಕೆಂದು ನಿರ್ಧರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂತ ಚಾರ್ಲ್ಸ್ ಸಭೆಯ ಪ್ರಾಂತೀಯ ಅಧಿಕಾರಿ ಸಿಸ್ಟರ್ ರೀಟ ವರ್ಗೀಸ್ ಅಧ್ಯಕ್ಷತೆ ವಹಿಸಿದ್ದರು.ನಗರದ ನ್ಯೂಟೌನ್ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮಾಲ ಬಿ.ಕೆ., ಶಿಕ್ಷಕಿ ಮುಬೀನುನ್ನೀಸ, ಮುಖಂಡರಾದ ಸುಂದರ್ ಬಾಬು, ಎಚ್. ಮಂಜುನಾಥ್, ಹಲವರು ಹಾಜರಿದ್ದರು.
- - - -ಡಿ10-ಬಿಡಿವಿಟಿ2:ಭದ್ರಾವತಿ ವೀರಶೈವ ಸಭಾಭವನದಲ್ಲಿ ನಿರ್ಮಲ ಮಹಿಳಾ ಸೇವಾ ಕೇಂದ್ರದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸಂತ ಚಾರ್ಲ್ಸ್ ಸಭೆಯ ಪ್ರಾಂತೀಯ ಅಧಿಕಾರಿ ಸಿಸ್ಟರ್ ರೀಟ ವರ್ಗೀಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.