ಅಕ್ರಮ ಮದ್ಯ ಮಾರಾಟದ ವಿರುದ್ಧ ಬೀದಿಗಿಳಿದ ಮಹಿಳೆಯರು

| Published : Sep 21 2024, 01:55 AM IST

ಸಾರಾಂಶ

ಅಕ್ರಮ ಮದ್ಯ ಮಾರಾಟದ ವಿರುದ್ಧ ಸಿಡಿದೆದ್ದ ಹಾನಗಲ್ಲ ತಾಲೂಕಿನ ಕಂಚಿನೆಗಳೂರು ಗ್ರಾಮದ ಮಹಿಳೆಯರು, ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಹಾನಗಲ್ಲ: ಅಕ್ರಮ ಮದ್ಯ ಮಾರಾಟದ ವಿರುದ್ಧ ಸಿಡಿದೆದ್ದ ಹಾನಗಲ್ಲ ತಾಲೂಕಿನ ಕಂಚಿನೆಗಳೂರು ಗ್ರಾಮದ ಮಹಿಳೆಯರು, ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.ಶುಕ್ರವಾರ ಹಾನಗಲ್ಲ ತಾಲೂಕಿನ ಕಂಚಿನೆಗಳೂರು ಗ್ರಾಮದ ಗ್ರಾಮ ಪಂಚಾಯತ್‌ಗೆ ತೆರಳಿ ಕೂಡಲೇ ಸಾರಾಯಿ ಮಾರಾಟ ಬಂದ ಮಾಡದಿದ್ದರೆ ಗ್ರಾಪಂಗೆ ಕಾಯಂ ಕೀಲಿ ಹಾಕಲಾಗುವುದು. ಯುವಕರು, ಮಕ್ಕಳು ಸಾರಾಯಿ ಹವ್ಯಾಸಕ್ಕೆ ಹಾಳಾಗುತ್ತಿದ್ದಾರೆ. ಎಲ್ಲೆಂದರಲ್ಲಿ ಸಾರಾಯಿ ಮಾರಾಟ ನಿರಾತಂಕವಾಗಿ ನಡೆಯುತ್ತಿದೆ. ಈ ಹಿಂದೆ ನಮ್ಮ ಮನವಿಗೆ ಮನ್ನಿಸಿ ಸಾರಾಯಿ ಮಾರಾಟ ಬಂದ ಮಾಡಲಾಗಿತ್ತು. ಈಗ ಮತ್ತೆ ಆರಂಭವಾಗಿರುವುದು ಗ್ರಾಮದ ಹಿತಕ್ಕೆ ಧಕ್ಕೆ ತಂದಿದೆಯಲ್ಲದೆ, ಯುವಕರು ದಾರಿ ತಪ್ಪಿ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿಳಂಬವಿಲ್ಲದೆ ಸಾರಾಯಿ ಮಾರಾಟ ಬಂದ ಮಾಡಿ ಸಾರಾಯಿ ಮಾರಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಎಂದು ಸಂಜೀನಿವಿ ಮಹಿಳಾ ಒಕ್ಕೂಟದ ಪ್ರತಿನಿಧಿ ಜ್ಯೋತಿ ಮಲಗುಂದ ಆಗ್ರಹಿಸಿದರು.ಕಂಚಿನೆಗಳೂರು ಗ್ರಾಪಂ ಅಭಿವೃದ್ಧಿ ಆಧಿಕಾರಿ ಮಲ್ಲಿಕಾರ್ಜುನ ಹಿರೇಮಠ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರಲ್ಲದೆ, ಸ್ಥಳಕ್ಕೆ ಆಡೂರು ಪಿಎಸ್‌ಐ ಶರಣಪ್ಪ ಹಾಗೂ ಅಬಕಾರಿ ಇಲಾಖೆ ಅಧಿಕಾರಿ ಬಿ.ಕೆ. ರೇಷ್ಮಾ ಅವರನ್ನು ಕರೆಸಿ ಅಕ್ರಮ ಸಾರಾಯಿ ಮಾರಾಟ ತಡೆಯಲು ಸಹಕರಿಸುವಂತೆ ಮನವಿ ಮಾಡಿದರು. ಸಂಜೀವಿನಿ ಮಹಿಳಾ ಒಕ್ಕೂಟದ ಅಕ್ಕಮ್ಮ ಕಲ್ಲೆಗೌಡರ, ಧರ್ಮಾವತಿ ಮಲಗುಂದ, ವೀಣಾ ಪಾಟೀಲ, ಲೀಲಾವತಿ ಹರವಿ, ಮಂಗಳಾ ಹಳ್ಳಿಬೈಲ್, ರೇಣುಕಾ ಬಾರ್ಕಿ, ಜ್ಯೋತಿ ಬೈರಕ್ಕನವರ, ಚನ್ನಮ್ಮ ಗಿರಿನಾಯಕರ, ರೂಪಾ ಬೈರಕ್ಕನವರ, ಚನ್ನಮ್ಮ ಹಿರೇಮಠ, ವೀಣಾ ಕಠಾರಿ, ಪವಿತ್ರ ಗಿರಿಯಣ್ಣನವರ, ವಿಶಾಲ ಹೊಂಬಳಿ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.