ಸಾರಾಂಶ
ಚಳ್ಳಕೆರೆ ನಗರ ಪ್ರವಾಸಿಮಂದಿರದಲ್ಲಿ ನೂತನವಾಗಿ ತಾಲೂಕು ಅಧ್ಯಕ್ಷರಾಗಿ ಮರು ಆಯ್ಕೆಗೊಂಡ ಪಿ.ತಿಪ್ಪೇಸ್ವಾಮಿಯವರನ್ನು ಕಾರ್ಯಕರ್ತರು ಅಭಿನಂದಿಸಿದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಜಾತ್ಯಾತೀತ ಜನತಾದಳ ದೇಶದಲ್ಲೇ ಅತ್ಯಂತ ಪ್ರಬಲ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮಿದೆ. ಇತ್ತೀಚಿನ ವರ್ಷಗಳಲ್ಲಿ ಜಾತ್ಯಾತೀತ ಜನತಾದಳದ ಜನಪ್ರಿಯತೆ ರಾಷ್ಟ್ರೀಯ ಪಕ್ಷದ ನಾಯಕರಿಗೂ ಸವಾಲಾಗಿ ಪರಿಣಮಿಸಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶ್ರಮವಹಿಸಿ ಚುನಾವಣಾ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದರೆ ಗೆಲುವು ನಮಗೆ ಸುಲಭವಾಗಿ ಒಲಿಯುತ್ತದೆ ಎಂದು ಜೆಡಿಎಸ್ ತಾಲೂಕು ಘಟಕದ ನೂತನ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ತಿಳಿಸಿದರು.ಅವರು, ಪ್ರವಾಸಿಮಂದಿರದಲ್ಲಿ ಪಕ್ಷದ ಸಂಘಟನಾತ್ಮಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಇದೇ ವೇಳೆ ಪಕ್ಷದ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಪಿ.ತಿಪ್ಪೇಸ್ವಾಮಿಯವರನ್ನು ಪಕ್ಷದ ಮುಖಂಡರು, ಕಾರ್ಯಕರ್ತರ ಒಕ್ಕೊರಲಿನ ಅಭಿಪ್ರಾಯದಂತೆ ಅಧ್ಯಕ್ಷರಾಗಿ ಅವಿರೋಧವಾಗಿ ಮರು ಆಯ್ಕೆ ಮಾಡಲಾಯಿತು. ಕಾರ್ಯಕರ್ತರು, ಮುಖಂಡರ ಪ್ರೀತಿ, ವಿಶ್ವಾಸ, ಗೌರವಕಂಡು ನನಗೆ ಹೆಚ್ಚು ಸಂತೋಷವಾಗಿದೆ. ನೀವೆಲ್ಲರೂ ಸಹಕಾರ ನೀಡಿದರೆ ಲೋಕಸಭೆಯೂ ಸೇರಿ ಎಲ್ಲಾ ಚುನಾವಣೆಗಳಲ್ಲೂ ಗೆಲುವು ನಮ್ಮದಾಗುತ್ತದೆ ಎಂದರು.ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ನಗರಂಗೆರೆ ಸಣ್ಣಬೋರಣ್ಣ, ಕಲಮರಹಳ್ಳಿಶಿವಣ್ಣ, ಹೆಗ್ಗೆರೆ ಆನಂದಪ್ಪ, ಹುಲಿಕುಂಟೆವೀರೇಂದ್ರಪ್ಪ, ಬೆಳಗೆರೆಚಂದ್ರಣ್ಣ, ಉದಯಕುಮಾರ್, ರಾಮಣ್ಣ, ಸುನೀಲ್, ದೇವರಾಜಣ್ಣ, ನಗರಸಭಾ ಸದಸ್ಯರಾದ ಸಿ.ಶ್ರೀನಿವಾಸ್, ವಿ.ವೈ.ಪ್ರಮೋದ್, ಕವಿತಾನಾಯಕಿ, ನಾಗಮಣಿ, ನಿರ್ಮಲ, ತಿಪ್ಪಮ್ಮ, ವಿಶುಕುಮಾರ್, ಬಹೀರ್‌ಹಯಾತ್, ಜೆ.ಮಂಜುನಾಥ, ಕುಲುಮೆಭಾಷ ಮುಂತಾದವರಿದ್ದರು.