ಸಾರಾಂಶ
ನಗರದ ಹೊಸದಾಗಿ ನೋಂದಣಿಯಾದ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಹಕಾರ ಸಂಘದ ಪ್ರಥಮ ಆಡಳಿತ ಮಂಡಳಿಗೆ ಚುನಾವಣೆಯನ್ನು ಏ.19ರಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಪಿ.ಬಿ. ರಸ್ತೆಯ ಜಿಲ್ಲಾಡಳಿತ ಭವನದ ಕೊಠಡಿ ಸಂಖ್ಯೆ 12ರಲ್ಲಿ ಚುನಾವಣೆ ನಡೆಸಲಾಗುವುದು.
ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಹೊಸದಾಗಿ ನೋಂದಣಿಯಾದ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಹಕಾರ ಸಂಘದ ಪ್ರಥಮ ಆಡಳಿತ ಮಂಡಳಿಗೆ ಚುನಾವಣೆಯನ್ನು ಏ.19ರಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಪಿ.ಬಿ. ರಸ್ತೆಯ ಜಿಲ್ಲಾಡಳಿತ ಭವನದ ಕೊಠಡಿ ಸಂಖ್ಯೆ 12ರಲ್ಲಿ ಚುನಾವಣೆ ನಡೆಸಲಾಗುವುದು. ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಪ್ರಕಾರ ಹಾಗೂ ಸಂಘದ ಬೈಲಾ ಅಧ್ಯಾಯ ಸಂ: 7, ಕ್ರ.ಸಂ-59ರ ರೀತ್ಯಾ ಸಂಘದ ಒಟ್ಟು ಆಡಳಿತ ಮಂಡಳಿ ಸದಸ್ಯರ ಸಂಖ್ಯೆ-17 ಇದೆ. ಈ ಪೈಕಿ ನಿರ್ದೇಶಕರ ಒಟ್ಟು 8 ಸ್ಥಾನಗಳಿಗೆ ಚುನಾವಣೆ ನಡೆಸಲಾಗುವುದು.ಕ್ಷೇತ್ರ ವಿಂಗಡಣೆ ಹಾಗೂ ಮೀಸಲಾತಿ ವಿವರ: ಸಾಮಾನ್ಯ-2, ಪರಿಶಿಷ್ಟ ಜಾತಿ-1, ಪರಿಶಿಷ್ಟ ಪಂಗಡ-1, ಹಿಂದುಳಿದ ವರ್ಗ ಎ-2 ಹಾಗೂ ಮಹಿಳಾ ಮೀಸಲು-2 ಸ್ಥಾನಗಳಿಗೆ ಚುನಾವಣೆ ನಡೆಸಲಾಗುವುದು.
ಚುನಾವಣಾ ವೇಳಾಪಟ್ಟಿ:ಏ.4ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸ್ವೀಕರಿಸಲಾಗುವುದು. ಏ.11 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಏ.12 ನಾಮಪತ್ರಗಳ ಪರಿಶೀಲನೆ ನಂತರ ಚುನಾವಣಾಧಿಕಾರಿ ಅವರು ಕ್ರಮಬದ್ಧವಾಗಿ ನಾಮನಿರ್ದೇಶನಗೊಂಡ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು. ಏ.13ರಂದು ನಾಮಪತ್ರ ವಾಪಸ್ ಪಡೆಯುವ ದಿನ, ನಂತರ ಸ್ಪರ್ಧೆಯಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಚುನಾವಣಾಧಿಕಾರಿ ಅವರಿಂದ ಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನೆಗಳನ್ನು ಹಂಚಿಕೆ ಮಾಡಲಾಗುವುದು.
ಏ.14ರಂದು ಸೂಚನಾ ಫಲಕದಲ್ಲಿ ಚಿಹ್ನೆಗಳ ಸಮೇತ ಮಾದರಿ ಮತಪತ್ರದ ಹಂಚಿಕೆ, ಏ.19 ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಸಲಾಗುವುದು. ಅನಂತರ ಅದೇ ದಿನ ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಿಸಲಾಗುವುದೆಂದು ಕಾರ್ಮಿಕರ ಕ್ಷೇಮಾಭಿವೃದ್ಧಿ ಸಹಕಾರ ಸಂಘ ನಿ, ರಿಟರ್ನಿಂಗ್ ಅಧಿಕಾರಿ ಎಲ್.ಸತೀಶ್ ನಾಯ್ಕ ತಿಳಿಸಿದ್ದಾರೆ.