ಮಿಲಾಗ್ರಿಸ್ ಕಾಲೇಜಿನಲ್ಲಿ ಸೈಬರ್‌ ಕ್ರೈಮ್‌, ಪೋಕ್ಸೋ ಕಾಯ್ದೆ ಕಾರ್ಯಾಗಾರ

| Published : Sep 01 2024, 01:47 AM IST

ಸಾರಾಂಶ

ಮಹಿಳೆಯರ ಮೇಲೆ ಹಾಗೂ ಪುರುಷರ ಮೇಲಿನ ದೌರ್ಜನ್ಯ, ಲೈಂಗಿಕ ಕಿರುಕುಳ ಇವೆಲ್ಲವನ್ನು ಹೇಗೆ ತಡೆಗಟ್ಟಬಹುದು ಹಾಗೂ ಯಾವ ರೀತಿಯ ಕಾನೂನು ವ್ಯವಸ್ಥೆ ಇದಕ್ಕೆ ಸಹಾಯ ಮಾಡುತ್ತದೆ ಎಂಬುದರ ಬಗ್ಗೆ . ಮಲ್ಪೆ ಠಾಣೆಯ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ ಮುಕ್ತಾ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಕಲ್ಯಾಣಪುರಇಲ್ಲಿನ ಮಿಲಾಗ್ರಿಸ್‌ ಕಾಲೇಜಿನ ಮಹಿಳಾ ಸಂಘ ಹಾಗೂ ಲೈಂಗಿಕ ಕಿರುಕುಳ ತಡೆಯುವ ಸಂಘ ವತಿಯಿಂದ ಸೈಬರ್‌ ಕ್ರೈಮ್‌ ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ವಿದ್ಯಾರ್ಥಿನಿಯರಿಗೆ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಮಲ್ಪೆ ಠಾಣೆಯ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ ಮುಕ್ತಾ ಮಾಹಿತಿ ನೀಡಿದರು.ಮಹಿಳೆಯರ ಮೇಲೆ ಹಾಗೂ ಪುರುಷರ ಮೇಲಿನ ದೌರ್ಜನ್ಯ, ಲೈಂಗಿಕ ಕಿರುಕುಳ ಇವೆಲ್ಲವನ್ನು ಹೇಗೆ ತಡೆಗಟ್ಟಬಹುದು ಹಾಗೂ ಯಾವ ರೀತಿಯ ಕಾನೂನು ವ್ಯವಸ್ಥೆ ಇದಕ್ಕೆ ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ಅವರು ಬಹಳ ಸವಿಸ್ತಾರವಾದ ಮಾಹಿತಿ ನೀಡಿದರು.ಅಷ್ಟೇ ಅಲ್ಲದೇ ಸೈಬರ್‌ ಕಾನೂನು, ತಂತ್ರಜ್ಞಾನ, ಕಾನೂನು ಬಾಹಿರ ಕೃತ್ಯದ ಬಗ್ಗೆ ಹಾಗೂ ಅದರ ವಿವಿಧ ಬಗೆಗಳ ಬಗ್ಗೆ ವಿಸ್ತಾರವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್‌ ಆಳ್ವ, ಇಂದಿನ ಮಕ್ಕಳು ಸೈಬರ್ ಕ್ರೈಮ್ ಮತ್ತು ಫೋಕ್ಸೋ ಕಾಯ್ದೆ ಬಗ್ಗೆ ಸವಿವರವಾಗಿ ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಆದ್ದರಿಂದ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳುವಂತೆ ವಿನಂತಿಸಿದರು.ಮಹಿಳಾ ಸಂಘದ ನಿರ್ದೇಶಕರಾದ ರಾಧಿಕಾ ಪಾಟ್ಕರ್‌, ಐಕ್ಯೂಎಸಿ ಸಂಚಾಲಕರಾದ ಶಾಲೆಟ್‌ ಮಥಾಯಸ್‌ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರೊವಿನಾ ಕಾರ್ಯಕ್ರಮ ನಿರ್ವಹಿಸಿದರು. ಅಮೃತ ಪ್ರಥಮ ಬಿ.ಕಾಂ. ವಂದಿಸಿದರು.