ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಶೈಕ್ಷಣಿಕವಾಗಿ ದೇಶದ ಪ್ರಗತಿಗೆ ಶಿಕ್ಷಕರಿಗೆ ವೃತ್ತಿಪರ ಕೌಶಲ್ಯಗಳನ್ನು ಹೆಚ್ಚಿಸುವ ವಿವಿಧ ತಂತ್ರಗಳು ಮತ್ತು ಸಾಧನಗಳನ್ನು ಒದಗಿಸಲು ಕಾರ್ಯಾಗಾರಗಳು ನಿರಂತರವಾಗಿ ನಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ, ಭಾರತೀ ವಿದ್ಯಾ ಸಂಸ್ಥೆ ಅಧ್ಯಕ್ಷ ಮಧು ಜಿ.ಮಾದೇಗೌಡ ಅಭಿಪ್ರಾಯಪಟ್ಟರು.ಭಾರತೀ ವಿದ್ಯಾ ಸಂಸ್ಥೆಯ ಡೈಮಂಡ್ ಜುಬಿಲಿ ಬ್ಲಾಕ್ ಆವರಣದಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್ ಮತ್ತು ಭಾರತೀ ಶಿಕ್ಷಣ ಮಹಾವಿದ್ಯಾಲಯ ಸಹಯೋಗದೊಂದಿಗೆ ಸಮಗ್ರ ನಾವೀನ್ಯತೆ ಮತ್ತು ತರಗತಿ ನಿರ್ವಹಣೆಯಲ್ಲಿ ಶಿಕ್ಷಕರನ್ನು ರೂಪಿಸುವುದು ಎಂಬ ಶೀರ್ಷಿಕೆಯ ೨ ದಿನಗಳ ಆಯೋಜಿಸಿದ್ದ ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಕರ ನಿರಂತರ ಬೆಳವಣಿಗೆ, ಆಧುನಿಕ ಶಿಕ್ಷಣದ ನಿರಂತರವಾಗಿ ಬದಲಾಗುತ್ತಿರುವ ಬೇಡಿಕೆಗಳಿಗೆ ಅನುಗುಣವಾಗಿ ಪರಿಣಾಮಕಾರಿ ಬೋಧನೆ ಮತ್ತು ಯಶಸ್ಸಿಗೆ ವಿದ್ಯಾರ್ಥಿಗಳನ್ನು ಕಲಿಕೆಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು, ಬೆಳವಣಿಗೆ ಮತ್ತು ಯಶಸ್ಸಿಗೆ ಇಂತಹ ಕಾರ್ಯಾಗರಗಳು ಸಹಕಾರಿಯಾಗಿದೆ ಎಂದರು.ಶಿಕ್ಷಕರ ವೃತ್ತಿಪರ ಕೌಶಲ್ಯ ಹೆಚ್ಚಿಸುವ ವಿವಿಧ ತಂತ್ರಗಳು ಮತ್ತು ಸಾಧನ ಒದಗಿಸಲು ಅಧ್ಯಾಪಕರ ಕೆಲಸದ ಕಾರ್ಯಕ್ಷಮತೆ ಸುಧಾರಣೆ, ಬೋಧನಾ ವಿನ್ಯಾಸಗಳನ್ನು ಅಳವಡಿಸಿಕೊಳ್ಳಲು ವೃತ್ತಿಪರ ಅಭಿವೃದ್ಧಿ ತರಬೇತಿ ಆಯೋಜಿಸಲಾಗಿದೆ. ಇದನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಬೆಂಗಳೂರಿನ ಇನ್ನೋವೇಟಿವ್ ಟೆಕ್ ಎಲ್ಜಿ ಸೋಲ್ಯೂಷನ್ ಲಿಮಿಟೆಡ್ ನಿರ್ದೇಶಕ ವಿ.ವೆಂಕಟ ಸುಬ್ಬಾರಾವ್ ಅವರು, ಸಮಗ್ರತೆ ಮತ್ತು ನಿಷ್ಠೆ ಮತ್ತು ಮ್ಯಾನೇಜಿಂಗ್ ಎಮೋಷನಲ್ ಅಂಡ್ ಎಥಿಕ್ ಎನ್ ಟೀಚಿಂಗ್ ಎಂಬ ವಿಷಯ ಕುರಿತು ಮಾತನಾಡಿದರು.ಮತ್ತೊರ್ವ ಸಂಪನ್ಮೂಲ ವ್ಯಕ್ತಿ, ಬೆಂಗಳೂರಿನ ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ (ಎಸಿಟಿ) ರೇವತಿ ಲೈಯರ್ ರಾಜಾರಾಮ್ ಅವರು, ಎಫೆಕ್ಟಿವ್ ಕ್ಲಾಸ್ ರೂಮ್ ಮ್ಯಾನೇಜ್ ಮೆಂಟ್ ವಿಷಯದಲ್ಲಿ ಪರಿಣಾಮಕಾರಿ ತರಗತಿ ಸಂವಹನ ಕೌಶಲ್ಯ, ತರಗತಿಯಲ್ಲಿ ಶಿಕ್ಷಕನಿಗೆ ಇರಬೇಕಾದ ಕೌಶಲ್ಯಗಳು ಸೇರಿದಂತೆ ಇತರೆ ವಿಷಯಗಳ ಬಗ್ಗೆ ತಿಳಿಸಿದರು.
ಬೆಂಗಳೂರು ಸಿಎಂಆರ್ ವಿವಿ ಡಾ.ಬಿ.ಆರ್.ಬಾಲಾಜಿ ಅವರು ಎಫೆಕ್ಟಿವ್ ಕ್ಲಾಸ್ ರೂಮ್ ಕಮ್ಯುನಿಕೇಷನ್ ಸ್ಕಿಲ್, ಕೌಶಲ್ಯಗಳ ಏಕೀಕರಣ ವಿಷಯ ಕುರಿತು ಮಾತನಾಡಿದರು. ಬೆಂಗಳೂರು ಎಂಇಎಸ್ ಶಿಕ್ಷಕರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಗಣೇಶ್ ಭಟ್ಟ ಅವರು ನವೀನ ಬೋಧನೆ ಎಂಬ ವಿಷಯ ಕುರಿತು ಮಾತನಾಡಿದರು.ಕಾರ್ಯಾಗಾರದಲ್ಲಿ ಎಫ್‌ಡಿಪಿ ಮುಖ್ಯ ಸಂಯೋಜಕ ಡಾ.ಎಸ್.ಎಲ್.ಸುರೇಶ್, ಭಾರತೀ ಹೆಲ್ತ್ ಸೈನ್ಸ್ ನಿರ್ದೇಶಕ ಡಾ. ತಮಿಜ್ ಮಣಿ, ಭಾರತಿ ಪಿಯು ಕಾಲೇಜಿನ ಆಡಳಿತಾಧಿಕಾರಿ ಜವರೇಗೌಡ, ಅಂಗ ಸಂಸ್ಥೆಯ ಪ್ರಾಂಶುಪಾಲರಾದ ಜಿ.ಬಿ.ಪಲ್ಲವಿ, ಸಿ.ವಿ.ಮಲ್ಲಿಕಾರ್ಜುನ್, ಪುಟ್ಟಸ್ವಾಮಿ, ಡಾ.ಜಿ.ಶಾಂತ ಕುಮಾರ್, ಡಾ.ಮಂಜು ಎಂ ಜಾಕೋಬ್, ಎನ್. ರಾಚಪ್ಪಾಜಿ, ಡಾ.ಮಹೇಶ್ ಕುಮಾರ್ ಜಿ ಲೋನಿ, ರಾಜೇಂದ್ರ ರಾಜೇ ಅರಸ್, ಸಿ.ರಮ್ಯ, ಡಾ.ಪೂರ್ಣಿಮಾ, ಎಫ್‌ಡಿಪಿ ಸಂಯೋಜಕ ಬಿ.ಎನ್.ಕಿರಣ್, ಕೆ.ಪಿ. ಅಪರ್ಣಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.