ಸಾರಾಂಶ
ದೊಡ್ಡಮಗುಡ್ಡೆಯ ಡಾ. ಎ.ವಿ. ಬಾಳಿಗಾ ಮೆಮೋರಿಯಲ್ ಹಾಸ್ಪಿಟಲ್, ಕಾರ್ಕಳದ ಅಯ್ಯಪ್ಪನಗರದ ವಿಜೇತ ವಿಶೇಷ ಶಾಲೆ, ಮುಂಬೈಯ ಕಮಲ್ ಎ. ಬಾಳಿಗಾ ಚಾರಿಟಬಲ್ ಟ್ರಸ್ಟ್, ಆಟಿಸಂ ಸೊಸೈಟಿ ಆಫ್ ಉಡುಪಿ ಸಹಯೋಗದೊಂದಿಗೆ ವಿಶ್ವ ಆಟಿಸಂ ಜಾಗೃತಿಕ ದಿನಾಚರಣೆ ಕಾರ್ಯಕ್ರಮ ವಿಜೇತ ವಿಶೇಷ ಶಾಲೆಯಲ್ಲಿ ನೆರವೇರಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ಇಲ್ಲಿನ ದೊಡ್ಡಮಗುಡ್ಡೆಯ ಡಾ. ಎ.ವಿ. ಬಾಳಿಗಾ ಮೆಮೋರಿಯಲ್ ಹಾಸ್ಪಿಟಲ್, ಕಾರ್ಕಳದ ಅಯ್ಯಪ್ಪನಗರದ ವಿಜೇತ ವಿಶೇಷ ಶಾಲೆ, ಮುಂಬೈಯ ಕಮಲ್ ಎ. ಬಾಳಿಗಾ ಚಾರಿಟಬಲ್ ಟ್ರಸ್ಟ್, ಆಟಿಸಂ ಸೊಸೈಟಿ ಆಫ್ ಉಡುಪಿ ಸಹಯೋಗದೊಂದಿಗೆ ವಿಶ್ವ ಆಟಿಸಂ ಜಾಗೃತಿಕ ದಿನಾಚರಣೆ ಕಾರ್ಯಕ್ರಮ ವಿಜೇತ ವಿಶೇಷ ಶಾಲೆಯಲ್ಲಿ ನೆರವೇರಿತು.ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಡಾ. ಎ.ವಿ. ಬಾಳಿಗಾ ಹಾಸ್ಪಿಟಲ್‌ನ ಸೈಕೋ ಸೋಶಿಯಲ್ ಕನ್ಸಲ್ಟೆಂಟ್ ವಿದ್ಯಾಶ್ರೀ, ಆಟಿಸಂ ಸೊಸೈಟಿ ಪ್ರೊಗ್ರಾಮ್ ಕೋ-ಆರ್ಡಿನೇಟರ್ ಕೀರ್ತೆಶ್, ಡಾ. ಜೈನ್ ಪಿಂಟೋ, ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್ ಉಪಸ್ಥಿತರಿದ್ದರು.ವಿಜೇತ ವಿಶೇಷ ಶಾಲಾ ಮಕ್ಕಳ ಹೆತ್ತವರು ಹಾಗೂ ಶಾಲಾ ಸಿಬ್ಬಂದಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. ಶಾಲೆಯ ವಿಶೇಷ ಶಿಕ್ಷಕಿ ಹರ್ಷಿತಾ ನಿರೂಪಿಸಿದರು. ಸಂಸ್ಥಾಪಕಿ ಡಾ.ಕಾಂತಿ ಹರೀಶ್ ಸ್ವಾಗತಿಸಿದರು. ವಿಶೇಷ ಶಿಕ್ಷಕಿ ಶ್ರೀನಿಧಿ ವಂದಿಸಿದರು.