ಜೆಎಸ್ಎಸ್ ಆಸ್ಪತ್ರೆಯಲ್ಲಿ ವಿಶ್ವ ರಕ್ತದಾನಿಗಳ ದಿನ

| Published : Jun 30 2024, 12:50 AM IST

ಸಾರಾಂಶ

ರಕ್ತದಾನ ಮಾಡುವುದರಿಂದಾಗುವ ಅನುಕೂಲತೆ ಹೇಳಿ, ಯುವ ಸಮೂಹವು ನಿರಂತರವಾಗಿ ರಕ್ತದಾನ ಮಾಡಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಜೆಎಸ್ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ರಕ್ತ ಕೇಂದ್ರ ವಿಭಾಗ, ಪೆಥಾಲಜಿ ವಿಭಾಗ, ಜೆಎಸ್ಎಸ್ ಉನ್ನತ ಶಿಕ್ಷಣ ಅಕಾಡೆಮಿ ಮತ್ತು ಎನ್ಎಸ್ಎಸ್ ಘಟಕ, ಜೆಎಸ್ಎಸ್ ನರ್ಸಿಂಗ್ ಸಹಯೋಗದಲ್ಲಿ ವಿಶ್ವ ರಕ್ತದಾನಿಗಳ ದಿನ ಆಯೋಜಿಸಲಾಗಿತ್ತು.

ನಗರದ ಜೆಎಸ್ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ತ ಕೇಂದ್ರದ ಅಧಿಕಾರಿ ಡಾ.ಪಿ. ಪಲ್ಲವಿ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ರಕ್ತದಾನ ಮಹತ್ವ ತಿಳಿಸಿ ಜಾಗೃತಿ ಮೂಡಿಸಿದರು.

ಮುಖ್ಯ ಅತಿಥಿಯಾಗಿದ್ದ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ರಕ್ತದಾನ ಮಾಡುವುದರಿಂದಾಗುವ ಅನುಕೂಲತೆ ಹೇಳಿ, ಯುವ ಸಮೂಹವು ನಿರಂತರವಾಗಿ ರಕ್ತದಾನ ಮಾಡಬೇಕು ಎಂದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸಿ.ಪಿ. ಮಧು ಮಾತನಾಡಿ, ರಕ್ತದಾನದ ಮಹತ್ವ ತಿಳಿಸಿ, ಪ್ರತಿವರ್ಷ ಜೂನ್14ರಂದು ವಿಶ್ವ ರಕ್ತದಾನದ ದಿನ ಆಚರಿಸಲಾಗುತ್ತಿದೆ. ರಕ್ತದಾನದ ಅಗತ್ಯತೆಗಾಗಿ ಜಾಗೃತಿ ಮೂಡಿಸುವ ಜೊತೆಗೆ ಅಸಂಖ್ಯಾತ ಜೀವಗಳನ್ನು ಉಳಿಸಲು ಸಹಾಯ ಮಾಡಿದ ದಾನಿಗಳಿಗೆ ಧನ್ಯವಾದ ಹೇಳುವ ದಿನವಾಗಿದೆ ಎಂದು ತಿಳಿಸಿದರು.

ಉಪ ಪ್ರಾಂಶುಪಾಲ ಡಾ.ಎಂ. ಮಾಂತಪ್ಪ, ಡಾ. ಅನಿಲ್ ಎಸ್. ಬಿಳಿಮಲೆ, ಸೋನಾಲ್ ಜೈನ್, ದೇವೇಂದ್ರ ಅವರನ್ನು ಸನ್ಮಾನಿಸಲಾಯಿತು.

ಆಸ್ಪತ್ರೆಯ ಪ್ಯಾಥಾಲಜಿ ವಿಭಾಗದ ಮುಖ್ಯಸ್ಥ ಡಾ.ಸಿ.ಎಸ್. ಶೀಲಾದೇವಿ, ವೈದ್ಯಾಧಿಕಾರಿ ಡಾ. ಶಾಂತಮಲ್ಲಪ್ಪ, ಉಪ ವೈದ್ಯಕೀಯ ಅಧೀಕ್ಷಕ ಡಾ.ಎನ್. ನವೀನ್, ಆಡಳಿತಾಧಿಕಾರಿ ಲೋಕೇಶ್ ಮೊದಲಾದವರು ಇದ್ದರು.