ಜೆಎಸ್‌ಎಸ್- ಎಎಚ್ಇಆರ್‌ ಜೀವವಿಜ್ಞಾನ ವಿಭಾಗ, ಆಹಾರ ಮತ್ತು ಆಹಾರಶಾಸ್ತ್ರದ ವಿಭಾಗವು ಮಂಗಳವಾರ ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಆಹಾರ ಭದ್ರತೆ: ಕ್ರಿಯೆಯಲ್ಲಿ ವಿಜ್ಞಾನ ಎಂಬ ಘೋಷವಾಕ್ಯದೊಂದಿಗೆ ಜಾಗತಿಕ ಆಹಾರ ಭದ್ರತಾ ದಿನವನ್ನು ಆಚರಿಸಿತು.

ಕನ್ನಡಪ್ರಭ ವಾರ್ತೆ ಮೈಸೂರು

ಜೆಎಸ್‌ಎಸ್- ಎಎಚ್ಇಆರ್‌ ಜೀವವಿಜ್ಞಾನ ವಿಭಾಗ, ಆಹಾರ ಮತ್ತು ಆಹಾರಶಾಸ್ತ್ರದ ವಿಭಾಗವು ಮಂಗಳವಾರ ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಆಹಾರ ಭದ್ರತೆ: ಕ್ರಿಯೆಯಲ್ಲಿ ವಿಜ್ಞಾನ ಎಂಬ ಘೋಷವಾಕ್ಯದೊಂದಿಗೆ ಜಾಗತಿಕ ಆಹಾರ ಭದ್ರತಾ ದಿನವನ್ನು ಆಚರಿಸಿತು.

ಈ ಕಾರ್ಯಕ್ರಮ ಉದ್ಘಾಟಿಸಿದ ಜೀವ ವಿಜ್ಞಾನಗಳ ಡೀನ್ ಪ್ರೊ.ಕೆ.ಎ. ರವೀಶ ಅವರು, ಆಹಾರ ಭದ್ರತೆ ಮತ್ತು ಸ್ತ್ರೀಯರ ಆರೋಗ್ಯದ ಮೇಲೆ ಎಂಡೋಕ್ರೈನ್ ಡಿಸ್ರಪ್ಟರ್‌ ಗಳ ಪರಿಣಾಮಗಳ ಬಗ್ಗೆ ತಿಳಿಸಿದರು.

ವಿಭಾಗದ ಡಾ. ಅನೀಸ್ ಫಾತಿಮಾ, ಡಾ.ಪಿ. ವನಿತಾ ರೆಡ್ಡಿ, ಡಾ. ಸೈದಾ ಫರ್ಹಾ, ಡಾ.ಎಂ.ಪಿ. ನವ್ಯಾ ರಾಜ್ ಅವರು, ಆಹಾರದ ಲೇಬಲ್‌ ಗಳು, ಅಡಗಿರುವ ಅಂಶಗಳು ಹಾಗೂ ಸುರಕ್ಷಿತ ಆಹಾರ ಅಭ್ಯಾಸಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.

ಇದೇ ವೇಳೆ ವಿದ್ಯಾರ್ಥಿಗಳಿಗೆ ಪ್ರಶ್ನೋತ್ತರ ಸ್ಪರ್ಧೆ, ಪಿಕ್ ಅಂಡ್ ಸ್ಪೀಕ್ ಹಾಗೂ ಆಹಾರ ಕಲಬೆರಕೆ, ಲೇಬಲಿಂಗ್, ಸ್ವಚ್ಛತೆ ಮತ್ತು ಆಹಾರ ಆಯ್ಕೆಗಳ ಕುರಿತು ಪ್ರದರ್ಶನ ಕೂಡ ಜರುಗಿತು.