ಸಾರಾಂಶ
ಸುರಪುರ ನಗರದ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್‌ನಲ್ಲಿ ವಿಶ್ವ ತಾಯಂದಿರ ಹಾಗೂ ದಾದಿಯರ (ನರ್ಸ್)ಗಳ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಸುರಪುರ: ನಗರದ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್‌ನಲ್ಲಿ ಭಾನುವಾರ ವಿಶ್ವ ತಾಯಂದಿರ ಹಾಗೂ ದಾದಿಯರ(ನರ್ಸ್)ಗಳ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಭಾಪಾಲಕ ರೆವರೆಂಡ್ ಪ್ರಕಾಶ್ ಹಂಚಿನಾಳ, ತಾಯಂದಿರ ಹಾಗೂ ನರ್ಸ್ ಗಳ ಪ್ರೀತಿ, ವಾತ್ಸಲ್ಯ, ವಿಶ್ವಾಸ ಮತ್ತು ನಿಸ್ವಾರ್ಥ ಸೇವೆಯ ಕುರಿತು ದೈವ ಸಂದೇಶ ನೀಡಿದರು.ಸಭೆಯಲ್ಲಿರುವ ತಾಯಂದಿರು ಹಾಗೂ ನರ್ಸ್‌ಗಳಿಗೆ ಹೂಗುಚ್ಚ ನೀಡಿ ಸನ್ಮಾನಿಸಲಾಯಿತು. ಇದೇ ವೇಳೆ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಸತ್ಯಮಿತ್ರ ಅವರು ತಾಯಂದಿರು ಹಾಗೂ ನರ್ಸ್ ಗಳಿಗೋಸ್ಕರ ವಿಶೇಷ ಪ್ರಾರ್ಥನೆ ಮಾಡಿದರು.
ಸಾಮುವೇಲ್ ಮ್ಯಾಥ್ಯೂ, ವಸಂತಕುಮಾರ, ಅಮಿತಪಾಲ್, ವಿಜಯಕುಮಾರ, ಥಾಮಸ್ ಮ್ಯಾಥ್ಯೂ, ಜಿಮ್ಮಿ ಜಸ್ಟೀನ್, ರವಿಕುಮಾರ, ಹನೋಕ್, ಸುಕುಮಾರಿ, ಮನೋರಮ್ಮ, ಸುಜಾತ, ಸುನೀಲಾ ಶಾಂತಕುಮಾರ, ಆಲೀಸ್ ಜಾನವೆಸ್ಲಿ, ಪ್ರಭು ಕುಮಾರಿ, ಸುಮತಿ, ಸಾಗರಿಕ, ಸುಜಾತ, ಶಾಲಿನಿ, ಶೋಭಾ, ಸುನೀತಾ, ಸ್ಟೆಲ್ಲಾ, ರೆಬೆಕ್ಕಾ, ರತ್ನಮ್ಮ, ಪವಿತ್ರಾ ಸೇರಿದಂತೆ ಇತರರಿದ್ದರು.