ಭಾರತೀಯ ಯೋಗ ಪರಂಪರೆಗೆ ವಿಶ್ವ ಮಾನ್ಯತೆ: ದಿವ್ಯ ಜ್ಞಾನಾನಂದ ಸ್ವಾಮೀಜಿ

| Published : Jun 23 2024, 02:01 AM IST

ಭಾರತೀಯ ಯೋಗ ಪರಂಪರೆಗೆ ವಿಶ್ವ ಮಾನ್ಯತೆ: ದಿವ್ಯ ಜ್ಞಾನಾನಂದ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದಿಂದ ಯೋಗ ಇಂದು ಜಾಗತಿಕ ಮನ್ನಣೆ ಪಡೆದಿದೆ. ಸದೃಢ ಆರೋಗ್ಯ ಹಾಗೂ ಸೂಕ್ಷ್ಮ ಸಂವೇದನೆಯ ವೃದ್ದಿಗೆ ಯೋಗ ಸಹಕಾರಿ. ಎಲ್ಲ ವಯೋಮಾನದ ಜನರೂ ಯೋಗಾಭ್ಯಾಸವನ್ನು ರೂಢಿಸಿಕೊಳ್ಳುವುದು ಅಗತ್ಯ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಭಾರತೀಯ ಪರಂಪರೆಯ ಮರು ಹುಟ್ಟಿಗೆ ಯೋಗ ದಿನಾಚರಣೆ ಕಾರಣವಾಗಿದೆ. ಆತ್ಮಶುದ್ಧಿ, ಚಿತ್ತಶುದ್ಧಿ ಮತ್ತು ದೇಹಶುದ್ಧಿಯನ್ನು ಸಾಧಿಸಿದ ವ್ಯಕ್ತಿ ಮಹತ್ವವಾದದನ್ನು ಸಾಧಿಸುತ್ತಾನೆ. ಇದಕ್ಕೆ ಯೋಗ ಪೂರಕವಾಗಿದೆ ಎಂದು ಪುಷ್ಪಾಂಡಜ ಆಶ್ರಮದ ದಿವ್ಯ ಜ್ಞಾನಾನಂದ ಸ್ವಾಮೀಜಿ ಹೇಳಿದರು.

ಇಲ್ಲಿನ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಮಿತಿಯ ನೇತೃತ್ವದಲ್ಲಿ ಶುಕ್ರವಾರ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದ ಯೋಗ ದಿನಾಚರಣೆ ಹಾಗೂ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಮಾರ್ಗದರ್ಶಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದು ವಿಶ್ವಾದ್ಯಂತ ಜನ ಭಾರತೀಯ ಯೋಗ ಪರಂಪರೆಯ ಬಗ್ಗೆ ಮಾತನಾಡುತ್ತಿದ್ದಾರೆ. ಪತಂಜಲಿ ಮಹರ್ಷಿಗಳಿಂದ ಪರಿಚಯಿಸಲ್ಪಟ್ಟ ಯೋಗ ಒಂದು ವೈಜ್ಞಾನಿಕ ಕಲೆ. ಮಾಲಿನ್ಯಗೊಂಡಿರುವ ಜಗತ್ತಿನಲ್ಲಿ ಕಾಣುತ್ತಿರುವ ಅನೇಕ ಬಗೆಯ ಮಾನಸಿಕ ಮತ್ತು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ. ಇದಕ್ಕೆ ಧರ್ಮ-ಲಿಂಗಗಳ ಮಿತಿಗಳಿಲ್ಲ ಎಂದರು.

ಶಾಸಕ ಧೀರಜ್‌ ಮುನಿರಾಜ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದಿಂದ ಯೋಗ ಇಂದು ಜಾಗತಿಕ ಮನ್ನಣೆ ಪಡೆದಿದೆ. ಸದೃಢ ಆರೋಗ್ಯ ಹಾಗೂ ಸೂಕ್ಷ್ಮ ಸಂವೇದನೆಯ ವೃದ್ದಿಗೆ ಯೋಗ ಸಹಕಾರಿ. ಎಲ್ಲ ವಯೋಮಾನದ ಜನರೂ ಯೋಗಾಭ್ಯಾಸವನ್ನು ರೂಢಿಸಿಕೊಳ್ಳುವುದು ಅಗತ್ಯ ಎಂದರು.

ವಿಶ್ವ ಯೋಗ ದಿನಾಚರಣಾ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಹನುಂತರಾಯಪ್ಪ, ಮುಖಂಡರಾದ ಟಿ.ಎನ್.ಪ್ರಭುದೇವ ಸೇರಿದಂತೆ ವಿಶ್ವ ಯೋಗ ದಿನಾಚರಣೆ ಟ್ರಸ್ಟ್‌ನ ಪದಾಧಿಕಾರಿಗಳು, ಕೆಲ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡರು.