ಕೈವಾರ ತಾತಯ್ಯನವರ ಆರಾಧನೆ

| Published : Mar 14 2025, 12:31 AM IST

ಸಾರಾಂಶ

ತಾಲೂಕಿನ ಮಡಿವಾಳ ಗ್ರಾಪಂನ ಮಾಲೂರು ಹೊಸಕೋಟೆ ರಸ್ತೆಯ ಚೊಕ್ಕಂಡಹಳ್ಳಿ ಗ್ರಾಮದ ವೇಮನ ಆಶ್ರಮದಲ್ಲಿ ಮಹಾಯೋಗಿ ವೇಮನ, ಯೋಗಿನಾರಾಯಣ ಕೈವಾರ ತಾತಯ್ಯನವರ ಆರಾಧನೋತ್ಸವ ಹಾಗೂ ಬ್ರಹ್ಮಶ್ರೀ ಯರಪ್ಪಸ್ವಾಮಿ, ಚಿನ್ನಮ್ಮ ಸ್ವಾಮಿಯವರ ೨೮ನೇ ಆರಾಧನಾ ಗುರುಪೂಜಾ ಬಾಲ ಪೂರ್ಣಿಮೆ ಮಹೋತ್ಸವ ನಡೆಯಿತು. ಆಶ್ರಮದಲ್ಲಿ ಮುಂಜಾನೆಯಿಂದಲೇ ಹೋಮ, ಹವನ, ಪೂಜೆ ಅಲಂಕಾರ ಆಶ್ರಮದ ಅಧ್ಯಕ್ಷರಾದ ಮುನಿಯಮ್ಮ ರಾಮಕೃಷ್ಣಪ್ಪ ಅವರ ನೇತೃತ್ವದಲ್ಲಿ ನಡೆಯಿತು,

ಮಾಲೂರು: ತಾಲೂಕಿನ ಮಡಿವಾಳ ಗ್ರಾಪಂನ ಮಾಲೂರು ಹೊಸಕೋಟೆ ರಸ್ತೆಯ ಚೊಕ್ಕಂಡಹಳ್ಳಿ ಗ್ರಾಮದ ವೇಮನ ಆಶ್ರಮದಲ್ಲಿ ಮಹಾಯೋಗಿ ವೇಮನ, ಯೋಗಿನಾರಾಯಣ ಕೈವಾರ ತಾತಯ್ಯನವರ ಆರಾಧನೋತ್ಸವ ಹಾಗೂ ಬ್ರಹ್ಮಶ್ರೀ ಯರಪ್ಪಸ್ವಾಮಿ, ಚಿನ್ನಮ್ಮ ಸ್ವಾಮಿಯವರ ೨೮ನೇ ಆರಾಧನಾ ಗುರುಪೂಜಾ ಬಾಲ ಪೂರ್ಣಿಮೆ ಮಹೋತ್ಸವ ನಡೆಯಿತು. ಆಶ್ರಮದಲ್ಲಿ ಮುಂಜಾನೆಯಿಂದಲೇ ಹೋಮ, ಹವನ, ಪೂಜೆ ಅಲಂಕಾರ ಆಶ್ರಮದ ಅಧ್ಯಕ್ಷರಾದ ಮುನಿಯಮ್ಮ ರಾಮಕೃಷ್ಣಪ್ಪ ಅವರ ನೇತೃತ್ವದಲ್ಲಿ ನಡೆಯಿತು, ಮುತ್ತೈದೆಯರಿಗೆ ಬಳೆಯನ್ನು ತೊಡಿಸಲಾಯಿತು, ಪಂಡಿ ಭಜನೆ, ಕೋಲಾಟ, ಕೀರ್ತನೆ ಕಾರ್ಯಕ್ರಮಗಳು ನಡೆದವು. ಆಶ್ರಮಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಸೀತಾರಾಮಪುರ ವೆಂಕಟರಮಣಪ್ಪ ಹಾಗೂ ಕಲಾವಿದರಿಂದ ಹರಿಕಥೆ ಕಾಲಕ್ಷೇಪ ನಡೆಯಿತು. ಬಂಡಿ ನಾರಾಯಣಪ್ಪ, ನಾರಾಯಣಮ್ಮ, ನಂಜಕುಮಾರ್ ಜಿ ವಿ, ಸುಮಮ್ಮ, ಚನ್ನಾಚಾರಿ, ನೀಲಮ್ಮ,ಶ್ರೀಧರ್, ನಂಜಪ್ಪ, ಪಟೇಲ್ ವೆಂಕಟರಮಣಪ್ಪ, ಪ್ರದೀಪ್ ಇನ್ನಿತರರು ಭಾಗವಹಿಸಿದ್ದರು.