ಪಾಂಡುರಂಗನ ಪಾದಪೂಜೆ ಮಾಡಿ ಏಕಾದಶಿ ಆಚರಣೆ

| Published : Jul 06 2025, 11:48 PM IST

ಸಾರಾಂಶ

ಶ್ರೀ ರುಕ್ಮಿಣಿ ಪಾಂಡುರಂಗ ಸ್ವಾಮಿ ದೇಗುಲದಲ್ಲಿ ಆಷಾಢ ಪ್ರಥಮ ಏಕಾದಶಿ ಪ್ರಯುಕ್ತ ವಿಶೇಷ ಪಾದಪೂಜೆಯನ್ನು ಏರ್ಪಡಿಸಿದ್ದು ಭಕ್ತರು ಸರದಿ ಸಾಲಿನಲ್ಲಿ ನಿಂತು ಶ್ರೀ ಪಾಂಡುರಂಗನ ಪಾದ ಸ್ಪರ್ಶ ಮಾಡುವ ಮೂಲಕ ಏಕಾದಶಿ ಆಚರಿಸಿದರು. ಕ್ತರು ಉಪವಾಸ ವ್ರತ ಕೈಗೊಂಡು ರಾತ್ರಿ ಇಡಿ ಭಜನೆ, ಕೀರ್ತನೆ, ಜಾಗರಣೆ ಮಾಡುತ್ತಾರೆ. ಇದರಿಂದ ಪಾಪಗಳು ನಿವಾರಣೆಯಾಗುತ್ತದೆ ಸುಖ ಸಮೃದ್ಧಿ ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಇದೆ. ಅದರಂತೆ ಶ್ರೀರುಕ್ಮಿಣಿ ವಿಠಲ ದೇಗುಲದಲ್ಲೂ ದೇವಶಯನಿ ಏಕಾದಶಿ ಯಂದು ವಿಶೇಷ ಪೂಜೆ ಹಾಗೂ ಆರಾಧನೆಯನ್ನು ನಡೆಸಲಾಗುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರುಪಟ್ಟಣದ ಹಳೆ ಅಂಚೆ ಕಚೇರಿ ರಸ್ತೆಯ ಶ್ರೀ ರುಕ್ಮಿಣಿ ಪಾಂಡುರಂಗ ಸ್ವಾಮಿ ದೇಗುಲದಲ್ಲಿ ಆಷಾಢ ಪ್ರಥಮ ಏಕಾದಶಿ ಪ್ರಯುಕ್ತ ವಿಶೇಷ ಪಾದಪೂಜೆಯನ್ನು ಏರ್ಪಡಿಸಿದ್ದು ಭಕ್ತರು ಸರದಿ ಸಾಲಿನಲ್ಲಿ ನಿಂತು ಶ್ರೀ ಪಾಂಡುರಂಗನ ಪಾದ ಸ್ಪರ್ಶ ಮಾಡುವ ಮೂಲಕ ಏಕಾದಶಿ ಆಚರಿಸಿದರು.ಮುಂಜಾನೆ ಇಂದಲೆ ೮ ಗಂಟೆಯಿಂದ ಪೂಜಾ ಕೈಂಕರ್ಯ, ಮಹಾಮಂಗಳಾರತಿಯೊಂದಿಗೆ ಬೆಳಗ್ಗೆ ೯ರಿಂದ ೧೨ರವರೆಗೆ ಸರ್ವ ಭಕ್ತಾದಿಗಳಿಗೆ ದೇವರ ಪಾದಸ್ಪರ್ಶ ಹಾಗೂ ದರ್ಶನ ಪಡೆಯಲು ಸಂಘದ ವತಿಯಿಂದ ಅನುವು ಮಾಡಿಕೊಡಲಾಗಿತ್ತು. ದೇಗುಲಕ್ಕೆ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು.ಈ ವೇಳೆ ಭಾವಸಾರ ಕ್ಷತ್ರಿಯ ಸಮಾಜದ ಭಗವಂತ್ ರಾವ್ ಮಾತನಾಡಿ, ಆಷಾಢ ಮಾಸದ ಪ್ರಥಮ ಏಕಾದಶಿ ಹಿಂದೂ ಧರ್ಮದಲ್ಲಿ ಅತ್ಯಂತ ಮಹತ್ವದ ದಿನವಾಗಿದೆ. ಪಟ್ಟಣದ ಪ್ರಮುಖ ದೇಗುಲವಾದ ಶ್ರೀ ರುಕ್ಮಿಣಿ ಪಾಂಡುರಂಗ ದೇಗುಲದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಆಷಾಢ ಪ್ರಥಮ ಏಕಾದಶಿ ಆಚರಿಸುತ್ತಿದ್ದು ಈ ದಿನ ಭಕ್ತರು ಉಪವಾಸ ವ್ರತ ಕೈಗೊಂಡು ರಾತ್ರಿ ಇಡಿ ಭಜನೆ, ಕೀರ್ತನೆ, ಜಾಗರಣೆ ಮಾಡುತ್ತಾರೆ. ಇದರಿಂದ ಪಾಪಗಳು ನಿವಾರಣೆಯಾಗುತ್ತದೆ ಸುಖ ಸಮೃದ್ಧಿ ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಇದೆ. ಅದರಂತೆ ಶ್ರೀರುಕ್ಮಿಣಿ ವಿಠಲ ದೇಗುಲದಲ್ಲೂ ದೇವಶಯನಿ ಏಕಾದಶಿ ಯಂದು ವಿಶೇಷ ಪೂಜೆ ಹಾಗೂ ಆರಾಧನೆಯನ್ನು ನಡೆಸಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಆನಂದ್ ಚಿಂಬಲ್ಕರ್‌, ಉಪಾಧ್ಯಕ್ಷ ಬೇಕರಿ ಮಂಜುನಾಥ್ ಇರೊಸ್ಕಾರ್‌, ಕಾರ್ಯದರ್ಶಿ ಗಣೇಶ್ ರಾವ್ ಪೂಕಾಳೆ, ಸಹ ಕಾರ್ಯದರ್ಶಿ ವಿಶ್ವನಾಥ್ ಜಿ ಎನ್ ಗುಜ್ಜರ್‌, ಖಜಾಂಚಿ ಗಣೇಶ್ ಬಿ ಬಿ ಚಿಂಬಳ್ಕರ್‌, ಕಾನೂನು ಸಲಹೆಗಾರ ಹರೀಶ್ ಚಿಂಬಳ್ಕರ್‌, ಮುಖ್ಯ ಅರ್ಚಕರಾದ ರಾಘವೇಂದ್ರ ಭಟ್, ಹಾಗೂ ವೇದಬ್ರಹ್ಮ ಕೆ ಆರ್‌ ಮಂಜುನಾಥ್ ಮತ್ತು ಸಂಗಡಿಗರು, ಶೇಷಾದ್ರಿ ಭಟ್, ಮಹಿಳಾ ಮಂಡಳಿ ಅಧ್ಯಕ್ಷೆ ಜ್ಯೋತಿ ಗಣೇಶ್, ಉಪಾಧ್ಯಕ್ಷೆ ರೇಖಾ ದೀಪಕ್, ವಿ.ಕೆ ಕೃಷ್ಣಮೂರ್ತಿ ಇತರರು ಇದ್ದರು.