ಯಡಾಡಿ ಮತ್ಯಾಡಿ ವಿದ್ಯಾರಣ್ಯ ಶಾಲೆ: 3ನೇ ರ‍್ಯಾಂಕ್‌ ಪಡೆದ ಪ್ರಾವ್ಯ ಶೆಟ್ಟಿಗೆ ವೈದ್ಯೆಯಾಗುವ ಆಸೆ

| Published : May 05 2025, 12:48 AM IST

ಯಡಾಡಿ ಮತ್ಯಾಡಿ ವಿದ್ಯಾರಣ್ಯ ಶಾಲೆ: 3ನೇ ರ‍್ಯಾಂಕ್‌ ಪಡೆದ ಪ್ರಾವ್ಯ ಶೆಟ್ಟಿಗೆ ವೈದ್ಯೆಯಾಗುವ ಆಸೆ
Share this Article
  • FB
  • TW
  • Linkdin
  • Email

ಸಾರಾಂಶ

ಯಡಾಡಿ-ಮತ್ಯಾಡಿಯ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್‌ನಿಂದ ನಡೆಸಲ್ಪಡುವ ವಿದ್ಯಾರಣ್ಯ ಶಾಲೆಯ 6 ವಿದ್ಯಾರ್ಥಿಗಳು ಈ ಬಾರಿಯ ಎಸ್‌ಎಲ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ರಾಜ್ಯಕ್ಕೆ 10ರೊಳಗಿನ ರ‍್ಯಾಂಕ್‌ ಗಳಿಸಿ ಅಮೋಘ ಸಾಧನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕುಂದಾಪುರಇಲ್ಲಿನ ಯಡಾಡಿ-ಮತ್ಯಾಡಿಯ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್‌ನಿಂದ ನಡೆಸಲ್ಪಡುವ ವಿದ್ಯಾರಣ್ಯ ಶಾಲೆಯ 6 ವಿದ್ಯಾರ್ಥಿಗಳು ಈ ಬಾರಿಯ ಎಸ್‌ಎಲ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ರಾಜ್ಯಕ್ಕೆ 10ರೊಳಗಿನ ರ‍್ಯಾಂಕ್‌ ಗಳಿಸಿ ಅಮೋಘ ಸಾಧನೆ ಮಾಡಿದ್ದಾರೆ.ಪ್ರಾವ್ಯ ಪಿ. ಶೆಟ್ಟಿ 625ಕ್ಕೆ 623 ಅಂಕಗಳಿಸಿ ರಾಜ್ಯಕ್ಕೆ 3ನೇ ರ್‍ಯಾಂಕ್ ಪಡೆದಿದ್ದಾಳೆ. ಅಲ್ಲದೇ ಆಯುಷ್ ಯು. ಶೆಟ್ಟಿ (4ನೇ), ಅನುಶ್ರೀ (6ನೇ), ಅಪೇಕ್ಷಾ ಶೆಟ್ಟಿ (7ನೇ), ಸುಖಿ ಎಸ್. ಶೆಟ್ಟಿ (8ನೇ), ದರ್ಶನ್ ಕೆ.ಯು. (10ನೇ) ರ್‍ಯಾಂಕ್ ಪಡೆದಿದ್ದಾರೆ.ಶಿಕ್ಷಕರ ಸಹಕಾರವೇ ಕಾರಣ:

ರಾಜ್ಯಕ್ಕೆ 3ನೇ ರ‍್ಯಾಂಕ್‌ ಪಡೆದಿರುವ ಪ್ರಾವ್ಯ ಪಿ. ಶೆಟ್ಟಿ ತನ್ನ ಈ ಸಾಧನೆಯಿಂದ ಪುಳಕಿತರಾಗಿದ್ದು, ಮುಂದೆ ವೈದ್ಯೆಯಾಗುವ ಕನಸನ್ನು ವ್ಯಕ್ತಪಡಿಸಿದ್ದಾರೆ.

ಈ ಉತ್ಕೃಷ್ಟವಾದ ಫಲಿತಾಂಶವನ್ನು ಮೊದಲೇ ನಿರೀಕ್ಷಿಸಿದ್ದೆ. ತನ್ನ ಸಾಧನೆಗೆ ಶಾಲಾ ಶಿಕ್ಷಕರು, ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಯ ಸಹಕಾರವೇ ಕಾರಣ. ಶಾಲೆಯಲ್ಲಿ ಅತ್ಯುತ್ತಮ ಬೋಧನೆ, ನಿರಂತರ ಪೂರ್ವತಯಾರಿ ಪರೀಕ್ಷೆಗಳು, ಪರೀಕ್ಷಾ ಸಮಯದಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಾಗಾರಗಳು, ಸಹಪಠ್ಯ ಚಟುವಟಿಕೆಗಳು ತಮಗೆ ಬಹಳ ಸಹಾಯಕವಾದವು. ನಾನು ಹಾಸ್ಟೆಲ್‌ ವಿದ್ಯಾರ್ಥಿಯಾಗಿದ್ದು, ಹಾಸ್ಟೆಲ್‌ನ ಸ್ಟಡಿ ಅವರ್ಸ್ ತುಂಬಾ ಉಪಯುಕ್ತವಾಗಿತ್ತು. ವಿಶೇಷವಾಗಿ ನಮ್ಮ ಶಾಲೆಯಲ್ಲಿ 6ನೇ ತರಗತಿಯಿಂದಲೇ ಬೋಧಿಸುತ್ತಿರುವ ಐಐಟಿ/ನೀಟ್ ಫೌಂಡೇಶನ್ ಕೋರ್ಸಿನ ಮಾಸಿಕ ಪರೀಕ್ಷೆಗಳು ಜಟಿಲವಾದ ಪ್ರಶ್ನೆಗಳನ್ನು ಸರಳವಾಗಿ ಉತ್ತರಿಸಲು ನೆರವಾಯಿತು. ಪಿಯುಸಿ ಶಿಕ್ಷಣವನ್ನು ನಮ್ಮದೇ ಸುಜ್ಞಾನ ಪಿಯು ಕಾಲೇಜಿನಲ್ಲಿ ಮುಂದುವರಿಸುತ್ತೇನೆ ಎಂದು ತಿಳಿಸಿದ್ದಾರೆ.