ಯಾದಗಿರಿ: ಕುಂದುಕೊರತೆ ಎಳೆಯಾಗಿ ಬಿಚ್ಚಿಟ್ಟ ವಸತಿಶಾಲೆ ವಿದ್ಯಾರ್ಥಿಗಳು

| Published : Jan 31 2024, 02:15 AM IST

ಯಾದಗಿರಿ: ಕುಂದುಕೊರತೆ ಎಳೆಯಾಗಿ ಬಿಚ್ಚಿಟ್ಟ ವಸತಿಶಾಲೆ ವಿದ್ಯಾರ್ಥಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಬೇವಿನಹಳ್ಳಿ ವಸತಿ ಶಾಲೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್‌ ಕೋಸಂಬೆ ಹಾಗೂ ಜಿಲ್ಲಾ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದರ್ಶಿ ರವೀಂದ್ರ ಹೊನೋಲೆ ಭೇಟಿ ನೀಡಿದ್ದರು. ಈ ವೇಳೆ ವಸತಿ ಶಾಲೆ ಮಕ್ಕಳು ಅವರೆದುರು ನೋವು ತೋಡಿಕೊಂಡರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಶಹಾಪುರ ತಾಲೂಕಿನ ಬೇವಿನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ (ಪರಿಶಿಷ್ಟ ಜಾತಿ) ಹತ್ತಾರು ಸಮಸ್ಯೆಗಳ ಕುರಿತಾಗಿ ಪತ್ರಿಕೆಗಳಲ್ಲಿ ವರದಿಯಾದ ಬೆನ್ನಲ್ಲೇ, ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ್ ಕೋಸಂಭೆ ಹಾಗೂ ಜಿಲ್ಲಾ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದರ್ಶಿ ರವೀಂದ್ರ ಹೊನೋಲೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಕ್ಕಳ ಕುರಿತಾಗಿ ವಿಚಾರಣೆ ನಡೆಸಿದರು.

ಮೆನ್ಯು ಚಾರ್ಟ್ ಪ್ರಕಾರ ಆಹಾರ ನೀಡುವುದಿಲ್ಲ, ಶುದ್ಧ ಕುಡಿಯುವ ನೀರು ಮತ್ತು ಬಿಸಿ ನೀರಿನ ವ್ಯವಸ್ಥೆ, ಬೆಡ್, ಸೊಳ್ಳೆ ಪರದೆಗಳಿಲ್ಲ, ಮಕ್ಕಳ ರಕ್ಷಣಾ ದೃಷ್ಟಿಯಿಂದ ಮಕ್ಕಳೊಂದಿಗೆ ಯಾವ ಸ್ಟಾಫ್‌ ನರ್ಸ್ ಕೂಡ ಇರಲ್ಲ, ಸಿಸಿಟಿವಿ ಕ್ಯಾಮರಗಳಿಲ್ಲ ಎಂದು ಹೀಗೆ ಹತ್ತಾರು ಸಮಸ್ಯೆಗಳನ್ನು ಮಕ್ಕಳು ಆಯೋಗದ ಸದಸ್ಯರಿಗೆ ಹಾಗೂ ನ್ಯಾಯಾಧೀಶರಿಗೆ ಎಳೆಎಳೆಯಾಗಿ ಬಿಚ್ಚಿಟ್ಟರು.

ಜೊತೆಗೆ ಮನಸ್ಸಿಗೆ ಬಂದಾಗ ತರಗತಿಗೆ ಬರುವ ಶಿಕ್ಷಕರಿಂದ ಮಕ್ಕಳು ಮುಂದಿನ ಪರೀಕ್ಷಾ ತಯಾರಿಗೆ ಹೆದರಿಕೆಯಾಗತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಪತ್ರಿಕೆಯ ವರದಿಗಳು, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಕಣ್ಣಾರೆ ಕಂಡು ಅರಿತು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯರು ಹಾಗೂ ಜಿಲ್ಲಾ ನ್ಯಾಯದೀಶರು ಪರಿಶೀಲಿಸಿ ಆಯೋಗದಿಂದ ಸ್ವಯಂ ಪ್ರೇರಿತ ಕ್ರೇಸ್ ದಾಖಲಿಸಲಾಗುವುದು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದ ಅವರು, ಮಕ್ಕಳು ನಿಮ್ಮ ರಕ್ಷಣೆಗಾಗಿ 1098 ಸಂಖ್ಯೆಯೇ ಕರೆಮಾಡಿ ಮಾಹಿತಿ ತಿಳಿಸಿ ಯಾರದ್ದೇ ಭಯ ಭೀತಿಪಡುವ ಅವಶ್ಯಕತೆ ಇಲ್ಲ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.