ಸಾರಾಂಶ
ಮೂಲ್ಕಿ: ಯಕ್ಷ ಮಿತ್ರರು ಸುರತ್ಕಲ್ ವತಿಯಿಂದ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ವೇದಿಕೆಯಲ್ಲಿ 20ನೇ ವಾರ್ಷಿಕೋತ್ಸವ ಇತ್ತೀಚೆಗೆ ನೆರವೇರಿತು.ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಯಕ್ಷಗಾನ ಕ್ಷೇತ್ರದ ವಿಶೇಷ ಸಾಧಕ ಕಲಾವಿದರಿಗೆ ಸನ್ಮಾನ ಮತ್ತು ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ಸಂಸ್ಕರಣೆ ಕಾರ್ಯಕ್ರಮ ಹಾಗೂ ಇತ್ತೀಚೆಗೆ ನಿಧನರಾದ ವೇಷಧಾರಿ ಸದಾಶಿವ ಶೆಟ್ಟಿಗಾರ್, ಭಾಗವತರಾದ ದಿನೇಶ್ ಅಮ್ಮಣ್ಣಾಯ, ಕಲಾ ಪೋಷಕರಾದ ಗುರುರಾಜ ಆಚಾರ್ಯರಿಗೆ ನುಡಿನಮನ ಸಲ್ಲಿಸಲಾಯಿತು. 20 ನೇ ವರ್ಷದ ಸಾಧಕ ಸನ್ಮಾನವನ್ನು ಹಿರಿಯ ಕಲಾವಿದ ಸರಪಾಡಿ ವಿಠಲ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು. ಸಂಸ್ಥೆಯ ಗೌರವಾಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ ಅಧ್ಯಕ್ಷತೆ ವಹಿಸಿದ್ದರು.ಉಳ್ಳಾಲ ಪೊಲೀಸ್ ಠಾಣೆಯ ಎ.ಎಸ್‌ಐ ಕುಶಲ ಮಣಿಯಾಣಿ, ಇಡ್ಯಾ ದೇವಸ್ಥಾನದ ಅರ್ಚಕ ಸೂರ್ಯ ನಾರಾಯಣ ಭಟ್, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ತಡಂಬೈಲ್, ಕಲಾ ಪೋಷಕ ಪ್ರೇಮ್ ಶೆಟ್ಟಿ ಮುಂಬೈ, ಸಮಾಜ ಸೇವಕ ಮನೋಹರ ಶೆಟ್ಟಿ ಸೂರಿಂಜೆ, ಮೂಲ್ಕಿ ಪೊಲೀಸ್ ಠಾಣೆಯ ಎ.ಎಸ್‌ಐ ಹರಿಶೇಖರ ಸೆರ್ಕಳ, ಯಕ್ಷದ್ರುವ ಪಟ್ಲ ಪೌಂಡೇಷನ್ ಸುರತ್ಕಲ್ ಘಟಕದ ಪ್ರಧಾನ ಕಾರ್ಯದರ್ಶಿ ಗಂಗಾಧರ ಪೂಜಾರಿ ಬಾಳ, ಯಕ್ಷ ಮಿತ್ರರು ಸುರತ್ಕಲ್ ಅಧ್ಯಕ್ಷ ಕೆ.ರಾಜೇಶ್ ಕುಮಾರ್, ಯಕ್ಷಗಾನ ಅರ್ಥದಾರಿ ಜಬ್ಬರ್ ಸಮೋ ಮತ್ತಿತರರು ಉಪಸ್ಥಿತರಿದ್ದರು. ಮಹೇಶ್ ಮೂರ್ತಿ ಸುರತ್ಕಲ್ ಸ್ವಾಗತಿಸಿದರು, ಕಿರಣ್ ಆಚಾರ್ಯ ವಂದಿಸಿದರು.
;Resize=(128,128))
;Resize=(128,128))
;Resize=(128,128))