ಅಯೋಧ್ಯೆಯಲ್ಲಿ ಅನುರಣಿಸಲಿದೆ ಕರಾವಳಿಯ ಯಕ್ಷಗಾನ

| Published : Feb 14 2024, 02:20 AM IST

ಸಾರಾಂಶ

ಸರಳೇಬೆಟ್ಟುವಿನ ಬಾಲಮಿತ್ರ ಯಕ್ಷ ಶಿಕ್ಷಣ ಪ್ರತಿಷ್ಠಾನದ ಕಲಾವಿದರ ತಂಡವು ಫೆ.26ರಂದು ಅಯೋಧ್ಯೆಯ ನೂತನ ಶ್ರೀರಾಮ ಮಂದಿರದಲ್ಲಿ ಕರಾವಳಿಯ ಗಂಡುಕಲೆ ಯಕ್ಷಗಾನವನ್ನು ಪ್ರದರ್ಶನ ನೀಡಲಿದೆ.

ಕನ್ನಡಪ್ರಭ ವಾರ್ತೆ ಉಡುಪಿಮಣಿಪಾಲದ ಸರಳೇಬೆಟ್ಟುವಿನ ಬಾಲಮಿತ್ರ ಯಕ್ಷ ಶಿಕ್ಷಣ ಪ್ರತಿಷ್ಠಾನದ ಕಲಾವಿದರ ತಂಡವು ಫೆ.26ರಂದು ಅಯೋಧ್ಯೆಯ ನೂತನ ಶ್ರೀರಾಮ ಮಂದಿರದಲ್ಲಿ ಕರಾವಳಿಯ ಗಂಡುಕಲೆ ಯಕ್ಷಗಾನವನ್ನು ಪ್ರದರ್ಶನ ನೀಡಲಿದೆ.ಈ ಬಗ್ಗೆ ತಂಡದ ಸಂಚಾಲಕ ಕಮಲಾಕ್ಷ ಪ್ರಭು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಮಮಂದಿರದಲ್ಲಿ 1.30 ಗಂಟೆಯ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ದೊರಕಿದೆ. ಶ್ರೀರಾಮ ದರ್ಶನ ಪ್ರಸಂಗವನ್ನು ಪ್ರದರ್ಶಿಲಿದ್ದೇವೆ. ಒಟ್ಟು 15 ಜನರ ಕಲಾವಿದರ ತಂಡ ತೆರಳಿದ್ದೇವೆ ಎಂದರು.

ಅಲ್ಲದೇ ಫೆ.25ರಂದು ಮಂಗಳೂರಿನ ಹೃದಯವಾಹಿನಿ ಮತ್ತು ಕನ್ನಡ ಸಂಘ ಲಕ್ನೋ ಜಂಟಿಯಾಗಿ ಆಯೋಜಿಸಿದ 18ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶರಸೇತುಬಂಧ ಪ್ರಸಂಗವನ್ನು ಪ್ರದರ್ಶಿಸಲಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಭುವನಪ್ರಸಾದ್ ಹೆಗ್ಡೆ, ದೇವೆಂದ್ರ ನಾಯಕ್ ಮದಗ ಉಪಸ್ಥಿತರಿದ್ದರು.

---

ಹಿಂದುಗಳ ಬಹುವರ್ಷದ ಕನಸಾಗಿದ್ದ ಅಯೋಧ್ಯೆ ಶ್ರೀ ರಾಮ ಮಂದಿರ ಜ.22ರಂದು ಲೋಕಾರ್ಪಣೆಗೊಂಡಿದೆ. ಸದ್ಯ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಮಂಡಲೋತ್ಸವ ನಡೆಯುತ್ತಿದೆ. ಪ್ರತಿ ದಿನ ಲಕ್ಷಾಂತರ ಭಕ್ತರು ಅಯೋಧ್ಯೆಗೆ ಬಂದು ರಾಮ ದೇವರ ದರ್ಶನ ಪಡೆಯುತ್ತಿದ್ದಾರೆ. ಅಂತೆಯೇ ಕರಾವಳಿ ಹಾಗೂ ಕನ್ನಡ ನಾಡಿನ ಹಲವು ಗಣ್ಯರು ರಾಮ ಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ. ಜತೆಗೆ ಹಲವು ಕಲಾ ತಂಡಗಳು ಅಯೋಧ್ಯೆಗೆ ಬಂದು ಪ್ರದರ್ಶನ ನೀಡುತ್ತಿದೆ. ಹಾಗೆಯೇ ಹಲವು ಸಂಘ ಸಂಸ್ಥೆಗಳು ಜನರನ್ನು ರಾಮ ಮಂದಿರಕ್ಕೆ ಕರೆತರುವ ಪ್ರಯತ್ನದಲ್ಲಿದೆ. ಹಾಗೆಯೇ ಹಿಂದು ಸಂಘಟನೆಗಳು ಕರ ಸೇವಕರನ್ನು ವಿಶೇಷವಾಘಿ ಅಯೋಧ್ಯೆಗೆ ಕರೆ ತಂದು ರಾಮ ದೇವರ ದರ್ಶನ ಮಾಡಿಸಲು ಪ್ರಯತ್ನಿಸುತ್ತಿದೆ.

ಈಗ ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧಿ ಪಡೆದ ಯಕ್ಷಗಾನವೂ ಅಯೋಧ್ಯೆಯಲ್ಲಿ ಪ್ರದರ್ಶನಗೊಳ್ಳಲಿದೆ.