ಪೆರ್ಡೂರು ಮೇಳ ಯಜಮಾನ ಕರುಣಾಕರ ಶೆಟ್ಟಿಗೆ ಯಕ್ಷಗಾನ ಸಾಹಿತ್ಯ ಜಾನಪದ ಪ್ರಶಸ್ತಿ

| Published : Mar 11 2024, 01:15 AM IST

ಪೆರ್ಡೂರು ಮೇಳ ಯಜಮಾನ ಕರುಣಾಕರ ಶೆಟ್ಟಿಗೆ ಯಕ್ಷಗಾನ ಸಾಹಿತ್ಯ ಜಾನಪದ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಬೈಂದೂರಿನ ಶ್ರೀ ಸೇನೇಶ್ವರ ದೇವಳದಲ್ಲಿ ನಡೆದ ಲಾವಣ್ಯ ಬೈಂದೂರು ಇದರ 47ನೇ ವಾರ್ಷಿಕೋತ್ಸವದಲ್ಲಿ ಪೆರ್ಡೂರು ಮೇಳದ ಯಜಮಾನ ಕರುಣಾಕರ ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ವತಿಯಿಂದ ಲಾವಣ್ಯ ಬೈಂದೂರು ಹಾಗೂ ಕರ್ನಾಟಕ ಜಾನಪದ ಪರಿಷತ್ತು ಸಹಯೋಗದಲ್ಲಿ ಪೆರ್ಡೂರು ಮೇಳದ ಯಜಮಾನ ಕರುಣಾಕರ ಶೆಟ್ಟಿ ಅವರಿಗೆ ‘ಯಕ್ಷಗಾನ ಸಾಹಿತ್ಯ ಜಾನಪದ ಪ್ರಶಸ್ತಿ’ಯನ್ನು ಬೈಂದೂರಿನ ಶ್ರೀ ಸೇನೇಶ್ವರ ದೇವಳದಲ್ಲಿ ನಡೆದ ಲಾವಣ್ಯ ಬೈಂದೂರು ಇದರ 47ನೇ ವಾರ್ಷಿಕೋತ್ಸವದಲ್ಲಿ ಪ್ರದಾನ ಮಾಡಲಾಯಿತು.ಪ್ರಶಸ್ತಿ ಪ್ರದಾನ ಮಾಡಿದ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಡಾ. ಶಿವರಾಮ ಶೆಟ್ಟಿ ತಲ್ಲೂರು ಮಾತನಾಡಿ, ಕಳೆದ 39 ವರ್ಷಗಳಿಂದ ಪೆರ್ಡೂರು ಮೇಳವನ್ನು ಯಶಸ್ವಿಯಾಗಿ ಮುನ್ನಡೆಸಿ ಈ ಮೂಲಕ ಯಕ್ಷಗಾನ ಸೇವೆಯನ್ನು ಮಾಡಿರುವ ಕರುಣಾಕರ ಶೆಟ್ಟಿ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲು ತುಂಬಾ ಸಂತೋಷವಾಗುತ್ತದೆ. ಇಂದು ಯಕ್ಷಗಾನ ಕ್ಷೇತ್ರದ ವಿವಿಧ ಸವಾಲುಗಳನ್ನು ಎದುರಿಸಿಕೊಂಡು ಯಕ್ಷಗಾನ ಮೇಳವನ್ನು ಕಟ್ಟಿ ಬೆಳೆಸುವುದು ತುಂಬಾ ಸವಾಲಿನ ಕೆಲಸವಾಗಿದ್ದು, ಇದನ್ನು ಯಶಸ್ವಿಯಾಗಿ ಎದುರಿಸಿ ಯಕ್ಷಗಾನ ಸೇವೆಯನ್ನು ಹಾಗೂ ನೂರಾರು ಕಲಾವಿದರಿಗೆ ಬದುಕನ್ನು ಕಟ್ಟಿಕೊಟ್ಟ ಕರುಣಾಕರ ಶೆಟ್ಟಿ ಅವರ ಕಾರ್ಯ ಮಾದರಿ ಎಂದರು.

ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಇದರ ಕಾರ್ಯದರ್ಶಿ ರವಿರಾಜ ನಾಯಕ್, ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಟ್ರಸ್ಟಿ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಬೈಂದೂರು ಜನ ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ, ಕ. ಜಾ. ಪರಿಷತ್ ಉಡುಪಿ ಸಂಘಟನಾ ಕಾರ್ಯದರ್ಶಿ ಬಿ.ಅರುಣ್ ಕುಮಾರ್ ಹೆಗ್ಡೆ, ಲೋಕೋಪಯೋಗಿ ಗುತ್ತಿಗೆದಾರ ಗೋಕುಲ್ ಶೆಟ್ಟಿ ಉಪ್ಪಂದ, ಲಾವಣ್ಯ ಬೈಂದೂರು ಅಧ್ಯಕ್ಷ ನರಸಿಂಹ ನಾಯಕ್, ಕಾರ್ಯದರ್ಶಿ ವಿಶ್ವನಾಥ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಲಾವಣ್ಯದ ಹಿರಿಯ ಸದಸ್ಯ ಗಣಪತಿ ಸ್ವಾಗತಿಸಿ, ಶ್ರೀಧರ್ ನಿರೂಪಿಸಿದರು.