ರಸ್ತೆ ಹೊಂಡಗಳ ಅಳೆದ ಯಮರಾಜ, ಚಿತ್ರಗುಪ್ತರು!

| Published : Aug 28 2024, 12:51 AM IST

ರಸ್ತೆ ಹೊಂಡಗಳ ಅಳೆದ ಯಮರಾಜ, ಚಿತ್ರಗುಪ್ತರು!
Share this Article
  • FB
  • TW
  • Linkdin
  • Email

ಸಾರಾಂಶ

ಯಮ ಧರ್ಮರಾಯ, ಚಿತ್ರಗುಪ್ತ ಮತ್ತು ಪ್ರೇತಗಳ ವೇಷಗಳನ್ನು ಹಾಕಿದ ಈ ತಂಡವು ಹೆದ್ದಾರಿಯಲ್ಲಿರುವ ಭಾರಿ ಹೊಂಡಗಳನ್ನು ಸಾರ್ವಜನಿರೆದುರು ಟೇಪ್ ಹಿಡಿದು ಅಳೆದು, ಯಾವ್ಯಾವ ಹೊಂಡದಲ್ಲಿ ಬಿದ್ದವರು ಹೇಗೆ ನೇರವಾಗಿ ಯಮಲೋಕಕ್ಕೆ ಹೋಗುತ್ತಾರೆ ಎಂಬುದನ್ನು ತೋರಿಸಿ ವಿಡಂಬನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಆದಿಉಡುಪಿಯಲ್ಲಿ ಯಮರಾಜ ಮತ್ತು ಆತನ ಸೇವಕ ಚಿತ್ರಗುಪ್ತ ರಾಷ್ಟ್ರೀಯ ಹೆದ್ದಾರಿಯ ಗುಂಡಿಗಳ ಆಳ ಅಗಲ ಅಳೆಯುವ ವಿಡಿಯೋ ವೈರಲ್ ಆಗಿದ್ದು, ಭಾರೀ ಜನಮೆಚ್ಚುಗೆ ಪಡೆಯುತ್ತಿದೆ. ಹೆದ್ದಾರಿ ಇಲಾಖೆಯ ಅವ್ಯವಸ್ಥೆಯನ್ನು ಇದು ನಗೆಪಾಡಲಿಗೀಡು ಮಾಡಿದೆ.

ಉಡುಪಿಯ ಕೃಷ್ಣ ಜನ್ಮಾಷ್ಟಮಿ ಎಂದರೆ ವೇಷಗಳದ್ದೇ ಹಬ್ಬ, ಇಲ್ಲಿ ಪ್ರತಿವರ್ಷ ವಿನೂತನ ವೇಷಗಳು ಕಾಣಸಿಗುತ್ತವೆ. ಬಡ ಮಕ್ಕಳ ಚಿಕಿತ್ಸೆಗಾಗಿ ಹಣ ಸಂಗ್ರಹಿಸುವ ಸಮಾಜಸೇವರು ಹಾಕುವ ವೇಷಗಳಂತೂ ಭಾರೀ ಜನರ ಮೆಚ್ಚುಗೆ ಪಡೆದಿವೆ.

ಈ ಬಾರಿಯ ಅಷ್ಟಮಿಯಲ್ಲಿ ನಾಲ್ಕೈದು ಯುವಕರ ತಂಡವೊಂದು ವಿಭಿನ್ನ ವೇಷಗಳ ಮೂಲಕ ಮಲ್ಪೆ - ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಯ ಬಗ್ಗೆ ಜನಜಾಗೃತಿ ಮೂಡಿಸುವ, ಇಲಾಖೆಯ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ವಿಭಿನ್ನ ಪ್ರಯತ್ನ ಮಾಡಿದೆ.

ಯಮ ಧರ್ಮರಾಯ, ಚಿತ್ರಗುಪ್ತ ಮತ್ತು ಪ್ರೇತಗಳ ವೇಷಗಳನ್ನು ಹಾಕಿದ ಈ ತಂಡವು ಹೆದ್ದಾರಿಯಲ್ಲಿರುವ ಭಾರಿ ಹೊಂಡಗಳನ್ನು ಸಾರ್ವಜನಿರೆದುರು ಟೇಪ್ ಹಿಡಿದು ಅಳೆದು, ಯಾವ್ಯಾವ ಹೊಂಡದಲ್ಲಿ ಬಿದ್ದವರು ಹೇಗೆ ನೇರವಾಗಿ ಯಮಲೋಕಕ್ಕೆ ಹೋಗುತ್ತಾರೆ ಎಂಬುದನ್ನು ತೋರಿಸಿ ವಿಡಂಬನೆ ಮಾಡಿದ್ದಾರೆ.

ಈ ದೃಶ್ಯಗಳನ್ನು ಯಾರೋ ವಿಡಿಯೋ ಮಾಡಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗುತ್ತಿದೆ. ಅಷ್ಟರಮಟ್ಟಿಗೆ ಈ ಯುವಕರ ಜನಜಾಗೃತಿಯ ಪ್ರಯತ್ನ ಸಫಲವಾಗಿದೆ, ಆದರೆ ಇಲಾಖೆಯ ಅಧಿಕಾರಿಗಳಿಗೆ ಬಿಸಿ ಮುಟ್ಟಿದ್ದರೆ ಮಾತ್ರ ಸದ್ಯದಲ್ಲಿಯೇ ಹೊಂಡ ಗುಂಡಿ ದುರಸ್ತಿಯಾಗಬಹುದು.