ಅಭಿವೃದ್ಧಿಪರ ಚಿಂತನೆ ಹೊಂದಿರುವ ಯಶವಂತರಾಯಗೌಡರು

| Published : Oct 13 2024, 01:02 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಜನ್ಮದಿನ ಆಚರಣೆ ಮುಖ್ಯವಲ್ಲ, ನಾವು ಸಮಾಜಮುಖಿ ಕಾರ್ಯಗಳು ಮಾಡುವುದು ಮುಖ್ಯ ಎಂದು ಶಾಸಕರು ಹೇಳುತ್ತಾರೆ. ಶಾಸಕರ ಜನ್ಮದಿನದ ಹೆಸರಿನಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಜಾವೀದ್‌ ಮೋಮಿನ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಜನ್ಮದಿನ ಆಚರಣೆ ಮುಖ್ಯವಲ್ಲ, ನಾವು ಸಮಾಜಮುಖಿ ಕಾರ್ಯಗಳು ಮಾಡುವುದು ಮುಖ್ಯ ಎಂದು ಶಾಸಕರು ಹೇಳುತ್ತಾರೆ. ಶಾಸಕರ ಜನ್ಮದಿನದ ಹೆಸರಿನಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಜಾವೀದ್‌ ಮೋಮಿನ್‌ ಹೇಳಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರ 57ನೇ ಜನ್ಮದಿನದ ನಿಮಿತ್ತ ಶಾಸಕರ ಅಭಿಮಾನಿಗಳು ಹಾಗೂ ಕಾಂಗ್ರೆಸ್‌ ಮುಖಂಡರು ಆರೋಗ್ಯ ಉಚಿತ ತಪಾಸಣೆ, ರಕ್ತದಾನ ಶಿಬಿರ, ಉಚಿತ ಸಸಿಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 2 ವರ್ಷಗಳ ಹಿಂದೆ ಶಾಸಕರ ಹುಟ್ಟುಹಬ್ಬದ ನಿಮಿತ್ತ ಆಯೋಜಿಸಿದ್ದ ಆರೋಗ್ಯ ಉಚಿತ ಶಿಬಿರದ ಮೂಲಕ ತಾಲೂಕಿನ 22 ಜನ ಹೃದಯ ರೋಗಿಗಳಿಗೆ ಉಚಿತವಾಗಿ ಹೃದಯ ರೋಗ ಶಸ್ತ್ರಚಿಕಿತ್ಸೆ ಮಾಡಿಸಿದ್ದೇವೆ ಎಂದರು.ಈ ಸಲ ರಕ್ತ ಸಂಗ್ರಹಣೆ ನಮ್ಮ ಉದ್ದೇಶವಾಗಿದ್ದು, ಶಾಸಕರ 57ನೇ ಹುಟ್ಟುಹಬ್ಬಕ್ಕೆ 57 ಜನ ಯುವಕರು ರಕ್ತದಾನ ಮಾಡಲು ಕಾಯುತ್ತಿದ್ದಾರೆ. ನೂರಾರು ಜನ ತಮ್ಮ ರೋಗ ತಪಾಸಣೆಗೆ ಬಂದಿದ್ದಾರೆ. ಅವರೆಲ್ಲರಿಗೂ ಆರೋಗ್ಯ ತಪಾಸಣೆ ಮಾಡಿಸುವುದಲ್ಲದೇ ಅವರಿಗೆ ಅಗತ್ಯ ಔಷಧೋಪಚಾರ ನೀಡಲಾಗುವುದು. ಇದೇ ರೀತಿ ಕಳೆದ 12 ವರ್ಷಗಳಿಂದ ಶಾಸಕ ಹುಟ್ಟುಹಬ್ಬ ಆಚರಣೆ ಮಾಡಿ ಸಮಾಜದ ಬಡವರಿಗಾಗಿ ಒಂದಿಲ್ಲ ಒಂದು ಸೇವೆ ಮಾಡುತ್ತಿದ್ದೇವೆ ಎಂದರು.ಕಾಂಗ್ರೆಸ್ ಹಿರಿಯ ಮುಖಂಡ ಜಟ್ಟೆಪ್ಪ ರವಳಿ ಮಾತನಾಡಿ, ಎಲ್ಲ ಧಾನಕ್ಕಿಮತ ರಕ್ತದಾನ ಶ್ರೇಷ್ಠದಾನವಾಗಿದೆ. ಶಾಸಕರ ಮೇಲಿನ ಪ್ರೀತಿ, ಅಭಿಮಾನದಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದರಿಂದ ಶಾಸಕರ ಜನ್ಮದಿನ ಆಚರಣೆ ಮಾಡಲಾಗುತ್ತಿದೆ. ಬಸವಣ್ಣನವರ ಸಮಾನತೆಯ ತತ್ವದ ದಾರಿಯಲ್ಲಿ ರಾಜಕಾರಣ ಮಾಡುತ್ತಿರುವ ಸಭ್ಯ ರಾಜಕಾರಣಿ ಯಶವಂತರಾಯಗೌಡ ಪಾಟೀಲರು ಎಂದು ಬಣ್ಣಿಸಿದರು.

ಗ್ಯಾರಂಟಿ ಯೋಜನೆಯ ಜಿಲ್ಲಾ ಅಧ್ಯಕ್ಷ ಇಲಿಯಾಸ್‌ ಬೋರಾಮಣಿ, ಡಾ.ಲಕ್ಷ್ಮೀಕಾಂತ ಮೇತ್ರಿ ಮಾತನಾಡಿದರು.

ಶಾಸಕರ 57ನೇ ಹುಟ್ಟುಹಬ್ಬದ ನಿಮಿತ್ತ 58 ಜನ ಯುವಕರು ರಕ್ತದಾನ ಮಾಡಿದರು. 268 ಜನ ತಮ್ಮ ವಿವಿಧ ರೋಗಗಳ ತಪಾಸಣೆ ನಡೆಸಲಾಯಿತು. ಮತ್ತು ವಿವಿಧ ಜಾತಿಯ 500 ಹಣ್ಣಿನ ಸಸಿಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂತೋಷ ವಾಲಿಕಾರ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕುರಿತು ರಚಿಸಿದ ಧ್ವನಿಸುರುಳಿ ಬಿಡುಗಡೆ ಮಾಡಲಾಯಿತು.

ಭೀಮಣ್ಣ ಕವಲಗಿ, ಭೀಮಾಶಂಕರ ಮೂರಮನ, ಜಟ್ಟೆಪ್ಪ ರವಳಿ, ಲಿಂಬಾಜಿ ರಾಠೋಡ, ಶೈಲಜಾ ಜಾಧವ, ಇಲಿಯಾಸ್‌ ಬೊರಾಮಣಿ, ಜಹಾಂಗೀರ್‌ ಸೌದಾಗರ, ಅಪ್ಪು ಕಲ್ಲೂರ, ಸದಾಶಿವ ಪ್ಯಾಟಿ, ಸತ್ತಾರ ಬಾಗವಾನ, ಸೋಮಶೇಖರ್ ಮ್ಯಾಕೇರಿ, ರಷಿದ್‌ ಅರಬ, ಡಾ.ರಾಜಶೇಕರ ಕೊಳೆಕರ, ಹರಿಶ್ಚಂದ್ರ ಪವಾರ, ಪ್ರಶಾಂತ ಅಲಗೊಂಡ, ಡಾ.ಲಕ್ಷ್ಮಿಕಾಂತ ಮೇತ್ರಿ, ಡಾ.ಸುಮಾ ಮಮದಾಪುರ, ಬಸವರಾಜ ಗೊರನಾಳ, ಧರ್ಮು ವಾಲಿಕಾರ, ಮುನ್ನಾ ನಾಟೀಕಾರ, ಹುಚ್ಚಪ್ಪ ತಳವಾರ, ಜೈನುದ್ದಿನ್‌ ಬಾಗವಾನ, ಸಂತೋಷ ಪರಸೆನವರ, ಮಹೇಶ ಹೊನ್ನಬಿಂದಗಿ, ಪ್ರಶಾಂತ ಕಾಳೆ, ಗಂಗಾಧರ ನಾಟೀಕಾರ, ಅವಿನಾಶ ಬಗಲಿ, ಜಾವೀದ್ ಮೋಮಿನ, ಜೆ.ಎಸ್.ನಾಟೀಕಾರ, ಸುಧೀರ ಕರಕಟ್ಟಿ, ಮುನ್ನಾ ಡಾಂಗೆ, ಕಾಶಿನಾಥ ಪವಾರ, ಸಿದ್ದು ಇಮ್ಮನದ, ಸುಗಂದಾ ಬಿರಾದಾರ, ಟಿ.ಎಸ್.ಖಟ್ಟೆ, ಪುಂಡಲೀಕ ಹೂಗಾರ, ಅಶೋಕ ಬಿರಾದಾರ, ಶ್ರೀಕಾಂತ ಚವ್ಹಾಣ, ಮಹೇಶ ಹೊನ್ನಬಿಂದಗಿ, ಮಲ್ಲು ಮಡ್ಡಿಮನಿ, ಅಶೋಕ ಕುದರಿ ಮೊದಲಾದವರು ಇದ್ದರು.