ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಪಟ್ಟಣದ ಸರ್ವಾಂಗೀಣ ಅಭಿವೃದ್ದಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾದ ಅವಧಿಯಲ್ಲಿ ಕೋಟ್ಯಂತರ ರು. ಅನುದಾನ ನೀಡಲಾಗಿದ್ದು, ಅಭಿವೃದ್ದಿ ಕಾರ್ಯಗಳು ಸಮರ್ಪಕವಾಗಿ ಬಳಕೆಯಾಗುವ ರೀತಿಯಲ್ಲಿ ಅಧಿಕಾರಿಗಳ ಜತೆ ಸಾರ್ವಜನಿಕರು ಜವಾಬ್ದಾರಿಯುತವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಂಸದ ಬಿ,ವೈ ರಾಘವೇಂದ್ರ ತಿಳಿಸಿದರು.ಪಟ್ಟಣದ ಪುರಸಭೆ ಆವರಣದಲ್ಲಿ ಬುಧವಾರ ವಿವಿಧ ಅನುದಾನಗಳಡಿ ಪುರಸಭಾ ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿಗಳ ಗುದ್ದಲಿಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪುರಸಭೆಯ 5 ವರ್ಷದ ಆಡಳಿತ ಅವಧಿ ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದ್ದು, ಈ ಅವಧಿಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಜನತೆಗೆ ಉತ್ತಮ ಆಡಳಿತ ನೀಡುವ ಪ್ರಯತ್ನವನ್ನು ಶ್ಲಾಘಿಸುವುದಾಗಿ ತಿಳಿಸಿದ ಅವರು ಪಟ್ಟಣದ ಪ್ರಮುಖ ವೃತ್ತದಲ್ಲಿ ಜಗಜ್ಯೋತಿ ಬಸವೇಶ್ವರ, ಅಕ್ಕಮಹಾದೇವಿ, ಸಂಗೊಳ್ಳಿ ರಾಯಣ್ಣ ಸಹಿತ ಡಾ.ಅಂಬೇಡ್ಕರ್ ಪುತ್ಥಳಿಯನ್ನು ಕುಟುಂಬದ ವತಿಯಿಂದ ಪ್ರತಿಷ್ಠಾಪಿಸಲಾಗಿದೆ ಎಂದರು.ಯಡಿಯೂರಪ್ಪ ಮುಖ್ಯಮಂತ್ರಿಯಾದ ಅವಧಿಯಲ್ಲಿ ಪಟ್ಟಣದ ಸೌಂದರ್ಯ ಹೆಚ್ಚಳಕ್ಕೆ ಕೋಟ್ಯಂತರ ರು. ವೆಚ್ಚದಲ್ಲಿ ಕೈಗೊಂಡ ಒಳಚರಂಡಿ ಕಾಮಗಾರಿ ನಂತರದಲ್ಲಿ ರಸ್ತೆ, ಪೈಪ್‌ಲೈನ್, ಚರಂಡಿ ಮತ್ತಿತರ ವ್ಯವಸ್ಥೆಗೆ ಹೆಚ್ಚುವರಿಯಾಗಿ ಅನುದಾನ ನೀಡಲಾಗಿದ್ದು ಪ್ರತಿ ಮನೆಗೆ ಸಂಪರ್ಕಕ್ಕೆ ಕನಿಷ್ಠ 2 ಸಾವಿರ ರು. ಹೊರೆಯಾಗದಂತೆ ಪುನಃ ಪುರಸಭೆ ಮೂಲಕ ಸಂಪರ್ಕ ನೀಡುವಂತೆ ಸೂಚಿಸಲಾಗಿದೆ ಎಂದರು.
ಶಾಸಕ ವಿಜಯೇಂದ್ರ ಮಾತನಾಡಿ, ತಾಲೂಕು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಯಡಿಯೂರಪ್ಪ ಕಾರಣಕರ್ತರಾಗಿದ್ದು,ಅಭಿವೃದ್ದಿ ಹೆಚ್ಚಾಗಿ ಪಟ್ಟಣ ಕಲ್ಪನೆ ಮೀರಿ ಬೆಳೆಯುತ್ತಿದೆ. ಇದರೊಂದಿಗೆ ಸಮಸ್ಯೆ ಸಹ ಉಲ್ಭಣವಾಗುತ್ತಿದೆ ಎಂದರು.ಪುರಸಭಾಧ್ಯಕ್ಷೆ ಸುನಂದಾ ಮಂಜುನಾಥ್ ವಹಿಸಿ ಮಾತನಾಡಿದರು. ಈ ಸಂದರ್ಬದಲ್ಲಿ ಪ್ರಧಾನಮಂತ್ರಿ ಆತ್ಮನಿರ್ಭರ ಯೋಜನೆಯಡಿ ಬೀದಿಬದಿ 950 ವ್ಯಾಪಾರಿಗಳಿಗೆ 50 ಸಾವಿರ ರು. ಕಿರುಸಾಲದ ಚೆಕ್, ಡಿಜಿಟಲೀಕರಣಕ್ಕೆ ಕ್ಯೂಆರ್ ಕೋಡ್, ವೈಜ್ಞಾನಿಕವಾಗಿ ಹಸಿ, ಒಣ ಕಸ ಬೇರ್ಪಡಿಸುವ 10 ಸಾವಿರ ಮನೆಗೆ ಡಸ್ಟ್‌ಬಿನ್‌ಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.
ಉಪಾಧ್ಯಕ್ಷೆ ರೂಪ,ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಸದಸ್ಯ ಉಳ್ಳಿ ದರ್ಶನ್,ಮಹಮ್ಮದ್ ರೋಷನ್, ರೂಪಕಲಾ ಹೆಗ್ಡೆ, ರೇಖಾಬಾಯಿ, ಪಾಲಾಕ್ಷಪ್ಪ, ಶೈಲಾ ಮಡ್ಡಿ, ಪ್ರಶಾಂತ್, ರೇಣುಕಸ್ವಾಮಿ, ಉಮಾವತಿ, ಜಯಶ್ರೀ, ಶಕುಂತಲಮ್ಮ, ಸುರೇಶ್ ಧಾರವಾಡದ, ನಗರದ ರವಿಕಿರಣ್, ಮುಖ್ಯಾಧಿಕಾರಿ ಭರತ್, ಸುರೇಶ್, ರಾಜಕುಮಾರ್ ಮತ್ತಿತರರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))