ಯಲ್ಲಾಪುರವನ್ನು ಜಿಲ್ಲಾ ಕೇಂದ್ರ ಮಾಡಲಿ

| Published : Sep 17 2025, 01:07 AM IST

ಸಾರಾಂಶ

ಸಿದ್ದಾಪುರ ಭಾಗವನ್ನು ಜಿಲ್ಲೆಯಿಂದ ಪ್ರತ್ಯೇಕಿಸಿ ಸಾಗರಕ್ಕೆ ಸೇರಿಸುವ ಪ್ರಸ್ತಾಪವನ್ನು ನಾಗರಿಕ ವೇದಿಕೆ ಖಂಡಿಸಿದೆ.

ಯಲ್ಲಾಪುರ: ಜಿಲ್ಲೆಯ ಸಿದ್ದಾಪುರ ಭಾಗವನ್ನು ಜಿಲ್ಲೆಯಿಂದ ಪ್ರತ್ಯೇಕಿಸಿ ಸಾಗರಕ್ಕೆ ಸೇರಿಸುವ ಪ್ರಸ್ತಾಪವನ್ನು ನಾಗರಿಕ ವೇದಿಕೆ ಖಂಡಿಸಿದೆ.

ಈ ಕುರಿತು ಸೋಮವಾರ ಪಟ್ಟಣದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಮಾತನಾಡಿದ ಅವರು, ಘಟ್ಟದ ಮೇಲಿನ ತಾಲೂಕುಗಳ ಪ್ರತ್ಯೇಕ ಜಿಲ್ಲೆ ಆಗುವುದಾದಲ್ಲಿ ಭೌಗೋಳಿಕವಾಗಿ ವಿಸ್ತಾರವಾದ ಯಲ್ಲಾಪುರವನ್ನು ಜಿಲ್ಲಾ ಕೇಂದ್ರವಾಗಿ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ಗಡಿ ಪ್ರದೇಶದ ತಾಲೂಕುಗಳ ಅಭಿವೃದ್ಧಿಗೆ ಸರ್ಕಾರ ಲಕ್ಷ್ಯ ವಹಿಸಬೇಕು. ಪಕ್ಕದ ಜಿಲ್ಲೆಯ ಗಡಿಗಳಿಗೆ ಹೊಂದಿರುವ ತಾಲೂಕುಗಳು ಆ ಜಿಲ್ಲೆಗೆ ಸೇರುತ್ತಾ ಹೋದರೆ, ಉತ್ತರ ಕನ್ನಡದ ಅಸ್ತಿತ್ವವೇ ಇರುವುದಿಲ್ಲ. ಈ ವಿಷಯವಾಗಿ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.

ಮುಂದಿನ ದಿನಗಳಲ್ಲಿ ಜಿಲ್ಲೆಯ ಹೋರಾಟದ ಬಗ್ಗೆ ಪ್ರತ್ಯೇಕ ಸಮಿತಿ ರಚಿಸಲು ನಿರ್ಧರಿಸಲಾಯಿತು.

ಪ್ರಮುಖರಾದ ಬೀರಣ್ಣ ನಾಯಕ ಮೊಗಟಾ, ವೇಣುಗೋಪಾಲ ಮದ್ಗುಣಿ, ಡಿ.ಜಿ ಹೆಗಡೆ, ನಾಗೇಶ ಯಲ್ಲಾಪುರಕರ್, ಗಜಾನನ ನಾಯ್ಕ ತಳ್ಳಿಕೇರಿ, ತುಳಸಿದಾಸ ನಾಯ್ಕ, ಜಗನ್ನಾಥ ರೇವಣಕರ, ಅನು ಕಾಮತ್, ದಾಸಿಂತ ಫರ್ನಾಂಡೀಸ್, ಮಾದೇವಚಂದ್ರ ಪಂಡರಾಪುರ ಭಾಗವಹಿಸಿದ್ದರು.