ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ ೧೬೪ ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದ್ದು, ಈಗ ಮುಖ್ಯಮಂತ್ರಿ ನಿಧಿಯಿಂದ ೫೦ ಕೋಟಿ ಅನುದಾನ ಬಂದಿದ್ದು, ಇನ್ನೂ ಸಾಕಷ್ಟು ಅನುದಾನ ತಂದು ಕೊರಟಗೆರೆ ಅಭಿವೃದ್ಧಿ ಮಾಡುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ ೧೬೪ ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದ್ದು, ಈಗ ಮುಖ್ಯಮಂತ್ರಿ ನಿಧಿಯಿಂದ ೫೦ ಕೋಟಿ ಅನುದಾನ ಬಂದಿದ್ದು, ಇನ್ನೂ ಸಾಕಷ್ಟು ಅನುದಾನ ತಂದು ಕೊರಟಗೆರೆ ಅಭಿವೃದ್ಧಿ ಮಾಡುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.ತಾಲೂಕಿನ ಸಿ.ಎನ್.ದುರ್ಗ ಹೋಬಳಿಯ ಜಟ್ಟಿ ಅಗ್ರಹಾರ ಗ್ರಾಮದಲ್ಲಿ ನಡೆದ ಎತ್ತಿನಹೊಳೆ ಯೋಜನೆಗೆ ಭೂ ಸ್ವಾಧೀನ ಪಡಿಸಿಕೊಂಡ ಜಮೀನಿನ ರೈತಗೆ ಭೂ ಪರಿಹಾರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.೨೦೨೬ರ ಜೂನ್‌ನಲ್ಲಿ ಎತ್ತಿನಹೊಳೆ ನೀರು ನಮ್ಮ ಜಿಲ್ಲೆಗೆ ಹರಿಯಲಿದೆ. ನಮ್ಮ ತಾಲೂಕಿನ ಬೈರಗೊಂಡ್ಲು ಸಮೀಪ ಎತ್ತಿನಹೊಳೆ ಯೋಜನೆಯ ಬಫರ್ ಡ್ಯಾಂ ನಿರ್ಮಾಣ ಮಾಡಲು ಸಾಕಷ್ಟು ಪ್ರಯತ್ನ ಮಾಡಿದೆ. ಆದರೆ ಅದರಲ್ಲೂ ರಾಜಕಾರಣ ಮಾಡಲು ಬಂದರೂ ನಮ್ಮ ರೈತರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಯೋಜನೆ ಬದಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಎರಡು ಬಫರ್ ಡ್ಯಾಂ ಮಾಡಿ ನೀರು ಶೇಖರಣೆ ಮಾಡಲಿದ್ದಾರೆ. ಇದೆ ಡ್ಯಾಂ ನಮ್ಮ ತಾಲೂಕಿನಲ್ಲಿ ನಿರ್ಮಾಣ ಮಾಡಿದರೆ ತಾಲೂಕಿನ ೩ ಹೋಬಳಿಗಳಲ್ಲಿ ಅಂತರ್ಜಲ ವೃದ್ಧಿಯಾಗಲಿದೆ. ಅದಕ್ಕೆ ೭೦ ಕೆರಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ದೇನೆ.

ಇತ್ತೀಚಿಗೆ ಕಬ್ಬಿನ ಬೆಳೆ ಹೆಚ್ಚಳಕ್ಕೆ ರೈತರು ಹೋರಾಟ ಮಾಡಿದರು. ಕೇಂದ್ರ ಸರ್ಕಾರ ಮಾಡಬೇಕಾದ ಹೆಚ್ಚಳ ಅದು, ೩೩೦೦ ಟನ್ ೩೩೦೦ ರೂ ನಿಗದಿ ಮಾಡಬೇಕಿತ್ತು. ಅದರೆ ನಮ್ಮ ರೈತರು ಉಳಿಬೇಕು ಎಂದು ಅವರ ನೆರವಿಗೆ ಹೋಗಿದ್ದೇವೆ. ಅದರಂತೆ ೧೫೦ ರೂ ಹೆಚ್ಚು ನಮ್ಮ ಸರ್ಕಾರ ನೀಡಲಾಗುತ್ತಿದೆ. ಮೆಕ್ಕೆಜೋಳದ ಬೆಂಬಲ ಬೆಲೆ ನೀಡಬೇಕು ಎಂದು ರೈತರು ಒತ್ತಾಯ ಮಾಡಿದರು ಅದಕ್ಕೂ ನಮ್ಮ ಸರ್ಕಾರ ಸ್ಪಂದಿಸಿದ್ದೇವೆ ಎಂದರು.ಇದೆ ಸಂದರ್ಭದಲ್ಲಿ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಪ್ರಭು, ಎಸ್ಪಿ ಆಶೋಕ್, ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ನಾಗಣ್ಣ, ಎಸಿ ಕೊಟ್ಟೂರು ಶಿವಪ್ಪ, ತಹಸೀಲ್ದಾರ್ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆಶ್ವಥ್‌ನಾರಾಯಣ್, ಅರಕೆರೆಶಂಕರ್, ಜಯಮ್ಮ ಗ್ರಾಪಂ ಅಧ್ಯಕ್ಷ ಪ್ರಭಾಕರ್ ಕೆಪಿಸಿಸಿ ಸದಸ್ಯರಾದ ಎ.ಡಿ.ಬಲರಾಮಯ್ಯ, ದಿನೇಶ್, ಮುಖಂಡರಾದ, ಮಹಾಲಿಂಗಪ್ಪ, ಕವಿತಮ್ಮ, ವೆಂಕಟೇಶ್, ಹನುಮಾನ್, ಓಬಳರಾಜು, ನಂದೀಶ್, ಲಕ್ಷ್ಮೀನಾರಾಯಣ್, ಪುಟ್ಟನರಸಪ್ಪ, ಎಲ್.ರಾಜಣ್ಣ, ಮಹೇಶ್, ವಿನಯ್‌ಕುಮಾರ್, ಎಂಎನ್‌ಜೆ ಮಂಜುನಾಥ್‌ ಸೇರಿದಂತೆ ಇತರರು ಇದ್ದರು.

ಕೋಟ್ ...............

ನಮ್ಮ ಜಿಲ್ಲೆ ೩ ಸಾವಿರ ಎಕರೆ ಭೂಮಿ ಏತ್ತಿನಹೊಳೆ ಯೋಜನೆಗೆ ತೆಗೆದುಕೊಳ್ಳಲಾಗಿದೆ. ೧ ಸಾವಿರ ಕೋಟಿ ಹಣ ರೈತರಿಗೆ ನೀಡಬೇಕಾಗಿದೆ. ಇದರಲ್ಲಿ ೮೪೦ ಕೋಟಿ ನೀಡಲಾಗಿದೆ ಇನ್ನೂ ೮೦ ಕೋಟಿ ಬಾಕಿ ಇದೆ. ಇಂದು ೫೮ ಜನ ರೈತರಿಗೆ ೨೨ ಎಕರೆ ಭೂಮಿಗೆ ೫ ಕೋಟಿ ೫೩ ಲಕ್ಷ ಹಣದ ಚೆಕ್ ನಮ್ಮ ರೈತರಿಗೆ ನೀಡಲಾಗಿದೆ.ಡಾ.ಜಿ.ಪರಮೇಶ್ವರ್ ಗೃಹ ಸಚಿವ ಕರ್ನಾಟಕ ಸರ್ಕಾರ.