ಯೋಗದಿಂದ ದೈಹಿಕ ಆರೋಗ್ಯ ಸದೃಢ: ಬೆಂಕಿ ಶೇಖರಪ್ಪ

| Published : May 22 2024, 12:50 AM IST

ಸಾರಾಂಶ

ಕಡೂರು, ಭಾರತ ವಿಶ್ವಕ್ಕೆ ನೀಡಿರುವ ಯೋಗ ವಿದ್ಯೆಯನ್ನು ಪ್ರತಿಯೊಬ್ಬರೂ ಅಭ್ಯಾಸ ಮಾಡುವುದರಿಂದ ದೈಹಿಕ ಆರೋಗ್ಯ ಸದೃಢವಾಗಿರುತ್ತದೆ ಎಂದು ಜಿಲ್ಲಾ ಯೋಗ ಅಸೋಸಿಯೇಷನ್ ಅಧ್ಯಕ್ಷ ಬೆಂಕಿ ಶೇಖರಪ್ಪ ಹೇಳಿದರು.

ಶ್ರೀ ರಾಘವೇಂದ್ರ ಯೋಗ ಶಿಕ್ಷಣ ಕೇಂದ್ರದ ತೀರ್ಪುಗಾರರ ಪುನಶ್ಚೇತನ ಶಿಬಿರ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಕಡೂರು

ಭಾರತ ವಿಶ್ವಕ್ಕೆ ನೀಡಿರುವ ಯೋಗ ವಿದ್ಯೆಯನ್ನು ಪ್ರತಿಯೊಬ್ಬರೂ ಅಭ್ಯಾಸ ಮಾಡುವುದರಿಂದ ದೈಹಿಕ ಆರೋಗ್ಯ ಸದೃಢವಾಗಿರುತ್ತದೆ ಎಂದು ಜಿಲ್ಲಾ ಯೋಗ ಅಸೋಸಿಯೇಷನ್ ಅಧ್ಯಕ್ಷ ಬೆಂಕಿ ಶೇಖರಪ್ಪ ಹೇಳಿದರು.

ತಾಲೂಕಿನ ಮಚ್ಚೇರಿಯ ಬೆಂಕಿ ಲಕ್ಷ್ಮಯ್ಯ ಸಭಾಂಗಣದಲ್ಲಿ ಶ್ರೀ ರಾಘವೇಂದ್ರ ಯೋಗ ಶಿಕ್ಷಣ ಕೇಂದ್ರದಿಂದ ನಡೆದ ತೀರ್ಪುಗಾರರ ಪುನಶ್ಚೇತನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಯೋಗ ವಿದ್ಯೆಗೆ ಇಂದು ಅಂತಾರಾಷ್ಟ್ರೀಯ ಮಾನ್ಯತೆ ದೊರೆತಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಪೂರಕವಾಗಿದೆ. ಭಾರತ ವಿಶ್ವಕ್ಕೆ ನೀಡಿರುವ ಯೋಗ ಕ್ರೀಡೆ ಯೆಂದೂ ಮಾನ್ಯತೆ ಪಡೆದಿದೆ. ಈ ಹಿನ್ನೆಲೆಯಲ್ಲಿ ಯೋಗ ಸ್ಪರ್ಧೆಗಳಿಗೆ ತರಬೇತಿ ಪಡೆದ ತೀರ್ಪುಗಾರರು ಬಹುಮುಖ್ಯ.ಈ ತರಬೇತಿ ನೀಡಲು ರಾಘವೇಂದ್ರ ಯೋಗ ಕೇಂದ್ರ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಕ್ರೀಡಾ ಅಸೋಸಿಯೇಷನ್ ಉಪಾಧ್ಯಕ್ಷ ಬಿ.ಎಂ.ಗಿರೀಶ್ ಮಾತನಾಡಿ, 25 ವರ್ಷ ಗಳಿಂದ ಯೋಗ ತರಬೇತಿ ನೀಡುತ್ತಿರುವ ಕೇಂದ್ರದಲ್ಲಿ ತಯಾರಾದ ಪ್ರತಿಭೆಗಳು ಅಂತಾರಾಷ್ಟ್ರೀಯ ಖ್ಯಾತಿ ಪಡೆದಿವೆ. ಜಾಗತಿಕ ಮಟ್ಟದಲ್ಲಿ ನಡೆಯುವ ಯೋಗ ಸ್ಪರ್ಧೆಗಳಿಗೆ ತೀರ್ಪು ನೀಡುವ ತೀರ್ಪುಗಾರರಿಗೆ ಯೋಗ ವಿದ್ಯೆಯ ಸೂಕ್ಷ್ಮತೆ ತಿಳಿಸಲು ಈ ಶಿಬಿರ ಏರ್ಪಡಿಸಲಾಗಿದೆ. 120 ಶಿಬಿರಾರ್ಥಿಗಳಿದ್ದು 60 ರೆಫ್ರಿಗಳು ಪರೀಕ್ಷೆ ಎದುರಿಸಲಿದ್ದಾರೆ, ಆದರಲ್ಲಿ ತೇರ್ಗಡೆ ಯಾದವರಿಗೆ ಕೆಎಸ್ಎವೈಎಸ್ಎ ಪ್ರಮಾಣ ಪತ್ರ ನೀಡಲಿದೆ ಎಂದು ವಿವರಿಸಿದರು. ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಕ್ರೀಡಾ ಅಸೋಸಿಯೇಷನ್ ( ಕೆಎಸ್ಎವೈಎಸ್ಎ) ಅಧ್ಯಕ್ಷ ಜಿ.ಎನ್.ಕೃಷ್ಣಮೂರ್ತಿ, ಕಾರ್ಯದರ್ಶಿ ಕೆ.ಪ್ರಭು, ಜಂಟಿ ಕಾರ್ಯದರ್ಶಿ ಎ.ನಟರಾಜ್, ಖಜಾಂಚಿ ಪಿ.ಆರ್.ಕೃಷ್ಣಮೂರ್ತಿ, ಸಂಜೀವ್ ಕುಮಾರ್ ಹಡಗಲಿ, ವಿಜಯಲಕ್ಷ್ಮಿಶೇಖರಪ್ಪ, ಯೋಗ ಕೇಂದ್ರದ ಶಿಕ್ಷಕಿ ವಿಜಯಾ ಗಿರೀಶ್ ಮತ್ತಿತರರು ಇದ್ದರು. 21ಕೆಕೆಡಿಯು2.

ಕಡೂರು ತಾಲೂಕಿನ ಮಚ್ಚೇರಿಯ ಬೆಂಕಿ ಲಕ್ಷ್ಮಯ್ಯ ಸಭಾಂಗಣದಲ್ಲಿ ಶ್ರೀ ರಾಘವೇಂದ್ರ ಯೋಗ ಶಿಕ್ಷಣ ಕೇಂದ್ರದಿಂದ ನಡೆದ ತೀರ್ಪುಗಾರರ ಪುನಶ್ಚೇತನ ಶಿಬಿರ ನಡೆಯಿತು.