ಸಾರಾಂಶ
ಎಲ್.ಎಸ್.ಶ್ರೀಕಾಂತ್
ಕನ್ನಡಪ್ರಭ ವಾರ್ತೆ ಮೈಸೂರುದಸರಾ ಮಹೋತ್ಸವದ ಅಂಗವಾಗಿ ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿನ ಪಿ. ಕಾಳಿಂಗರಾವ್ ಸಭಾಂಗಣದಲ್ಲಿ ಯೋಗ ದಸರಾ ಉಪ ಸಮಿತಿ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ದಸರಾ ಯೋಗಾಸನ ಸ್ಪರ್ಧೆಯನ್ನು ಶಾಸಕ ಟಿ.ಎಸ್. ಶ್ರೀವತ್ಸ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ರಾಜ್ಯಮಟ್ಟ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೈಸೂರು ಯೋಗದಲ್ಲಿ ಹೆಸರು ಮಾಡಿದೆ. ಮೈಸೂರಿನ ಯೋಗಕ್ಕೆ ವಿಶ್ವ ಪರಂಪರೆ ಇದೆ. ಯೋಗ ವಿಶ್ವ ಪ್ರಸಿದ್ಧಿಯನ್ನು ಪಡೆದಿದ್ದು, ಎಲ್ಲ ವಯೋಮಾನದವರು ಯೋಗದಲ್ಲಿ ತೊಡಗಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.ಆರೋಗ್ಯದ ಕಡೆಗೆ ಗಮನ ಕೊಡಬೇಕು ಎಂಬುವುದರ ಸಲುವಾಗಿ ಮೈಸೂರಿನಲ್ಲಿ ಯೋಗ ದಸರಾವನ್ನು ಪ್ರಾರಂಭ ಮಾಡಿರುವುದು. ಯೋಗ ದಸರಾವನ್ನು ಗಿನ್ನಿಸ್ ದಾಖಲೆಗೆ ತೆಗೆದುಕೊಂಡು ಹೋಗಲು ಪ್ರಯತ್ನಿಸಲಾಗಿತ್ತು, ಆದರೆ, ಕಾರಣಾಂತರಗಳಿಂದ ಅದು ಆಗಲಿಲ್ಲ ಎಂದರು.
ದಸರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಲಾವಿದರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಿ ಕಲಾವಿದರ ಪ್ರತಿಭೆಗೆ ಪ್ರೋತ್ಸಾಹ ನೀಡಲಾಗುತ್ತದೆ. ಯೋಗಾಸನ ಸ್ಪರ್ಧೆಯಲ್ಲಿ ಎರಡು ಸಾವಿರಕ್ಕೂ ಅಧಿಕ ಯೋಗಪಟುಗಳು ಭಾಗವಹಿಸಿದ್ದರು. ಹಾಗೆಯೇ ವಿಶೇಷ ಚೇತನ ಮಕ್ಕಳು, ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ಆಸನಗಳನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು.ಯೋಗ ದಸರಾ ಉಪ ಸಮಿತಿಯ ಅಧ್ಯಕ್ಷ ಎಂ. ಮಹೇಶ್, ಉಪಾಧ್ಯಕ್ಷ ಜಮೀರ್ ಅಹ್ಮದ್, ಪ್ರಕಾಶ್, ಸಿದ್ದರಾಜು, ಚಿಕ್ಕಸ್ವಾಮಿ, ಸದಸ್ಯರಾದ ಕೆ.ವಿ. ಭರತ್ ರಾಜ್, ಎಚ್. ಯೋಗೇಶ್, ಪ್ರಭು, ಹರೀಶ್, ಎಂ.ಬಿ. ವಿಕೇಶ್ ಶರ್ಮ, ಪುಟ್ಟಸ್ವಾಮಿ, ಶ್ರೀಕಂಠ, ಜಗದೀಶ್, ಸಮಿತಿಯ ಉಪ ವಿಶೇಷಾಧಿಕಾರಿ ರಮ್ಯ, ಸಮಿತಿಯ ಅಧಿಕಾರಿಗಳಾದ ಡಾ. ಪುಷ್ಪ ಇದ್ದರು.
8 ರಂದು ರಾಜ್ಯಮಟ್ಟದ ದಸರಾ ಕರಾಟೆ ಪಂದ್ಯಾವಳಿಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ಕರಾಟೆ ಅಸೋಸಿಯೇಷನ್ ವತಿಯಿಂದ ಅ. 8ರಂದುಯುವರಾಜ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ 14ನೇ ರಾಜ್ಯಮಟ್ಟದ ದಸರಾ ಕರಾಟೆ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಕರಾಟೆ ಅಸೋಸಿಯೇಷನ್ ಖಜಾಂಚಿ ಸೋಸಲೆ ಸಿದ್ದರಾಜು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಕರಾಟೆ ಅಸೋಸಿಯೇಷನ್ ಸಂಸ್ಥೆಯು ದಸರಾ ಕ್ರೀಡಾ ಸಮಿತಿ ವತಿಯಿಂದ ನಡೆಯುವ ದಸರಾ ಕ್ರೀಡೆಯಲ್ಲಿ 14 ವರ್ಷಗಳಿಂದ ಜಿಲ್ಲಾ , ವಿಭಾಗ ಮತ್ತು ರಾಜ್ಯಮಟ್ಟದ ಪಂದ್ಯಾವಳಿಯನ್ನು ನಡೆಸುತ್ತಾ ಬಂದಿದೆ. ಈ ವರ್ಷವೂ ಕರಾಟೆ ಪಂದ್ಯಾವಳಿ ನಡೆಸಲು 1 ತಿಂಗಳಿಂದ ಹಿಂದೆಯೇ ಸಹಾಯಕ ನಿರ್ದೇಶಕರಿಗೆ ಮನವಿ ಕೊಟ್ಟಿದ್ದೇವೆ. ಆದರೆ ಸಹಾಯಕ ನಿರ್ದೇಶಕರು ಯಾವುದೇ ಅನುದಾನ ಬಿಡುಗಡೆ ಆಗದ ಕಾರಣ ನಮ್ಮ ಬಳಿ ಹಣ ಇಲ್ಲ ಎಂದು ಹೇಳುತ್ತಾರೆ. ಇದರಿಂದ ನಮಗೆ ಬೇಸರ ಉಂಟಾಗಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸಂಸ್ಥೆ ಅಧ್ಯಕ್ಷ ಎನ್.ಜಿ. ಶಿವದಾಸ್ ಪೈ, ಉಪಾಧ್ಯಕ್ಷ ಎನ್. ಶಂಕರ್, ಕಾರ್ಯದರ್ಶಿ ದೀಪಕ್ ಕುಮಾರ್, ಸಹ ಕಾರ್ಯದರ್ಶಿ ಮಹದೇವಸ್ವಾಮಿ, ನಿರ್ದೇಶಕರಾದ ಭಾರತಿ ಆನಂದ್, ಸದಾನಂದ ಇದ್ದರು.