ಪಂಚಮಸಾಲಿ ಪೀಠದಲ್ಲಿ ಗೊಂದಲ ಮಾಡಿ, ಛಿದ್ರ ಮಾಡುವ ಉದ್ದೇಶ ನಿಮ್ಮದಿದೆ. ಯಾರು ಯಾರು ಎಷ್ಟು ದುಡ್ಡು ಕೊಟ್ಟಿದ್ದೀರಿ, ನಾಳೆ ಮಠಕ್ಕೆ ನೀವುಗಳು ಬಂದು ಲೆಕ್ಕವನ್ನು ಕೇಳಿ ಎಂದು ಪೀಠದ ಆಹ್ವಾನಿತ ಟ್ರಸ್ಟಿ, ಪಂಚಮಸಾಲಿ ಸಮಾಜದ ಯುವ ಮುಖಂಡ ಎಚ್.ಎಸ್. ನಾಗರಾಜ ತಮ್ಮ ಸಹೋದರ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಹೆಸರನ್ನು ಹೇಳದೇ ಮುಕ್ತ ಆಹ್ವಾನ ನೀಡಿದ್ದಾರೆ.
- ನಿಮ್ಮ ದಬ್ಬಾಳಿಕೆ ನಡೆಯಲ್ಲ, ಗೌರವದಿಂದ ಶ್ರೀಗಳು ಪೀಠ ತೊರೆಯಲಿ: ಎಚ್.ಎಸ್. ನಾಗರಾಜ - - -
ಕನ್ನಡಪ್ರಭ ವಾರ್ತೆ ದಾವಣಗೆರೆಪಂಚಮಸಾಲಿ ಪೀಠದಲ್ಲಿ ಗೊಂದಲ ಮಾಡಿ, ಛಿದ್ರ ಮಾಡುವ ಉದ್ದೇಶ ನಿಮ್ಮದಿದೆ. ಯಾರು ಯಾರು ಎಷ್ಟು ದುಡ್ಡು ಕೊಟ್ಟಿದ್ದೀರಿ, ನಾಳೆ ಮಠಕ್ಕೆ ನೀವುಗಳು ಬಂದು ಲೆಕ್ಕವನ್ನು ಕೇಳಿ ಎಂದು ಪೀಠದ ಆಹ್ವಾನಿತ ಟ್ರಸ್ಟಿ, ಪಂಚಮಸಾಲಿ ಸಮಾಜದ ಯುವ ಮುಖಂಡ ಎಚ್.ಎಸ್. ನಾಗರಾಜ ತಮ್ಮ ಸಹೋದರ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಹೆಸರನ್ನು ಹೇಳದೇ ಮುಕ್ತ ಆಹ್ವಾನ ನೀಡಿದ್ದಾರೆ.
ಹರಿಹರದ ಪಂಚಮಸಾಲಿ ಪೀಠದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರು ಬೇಕಾದರೂ ಮನೆಗೆ ಬಂದು, ಒಳ ಹೊಕ್ಕಲು ಆಗುತ್ತದೆಯೇ? ನಾವು ಎಲ್ಲದಕ್ಕೂ ಸಹಕಾರ ನೀಡುತ್ತಾ ಬಂದಿದ್ದೀವಿ. ನಿಮ್ಮ ದಬ್ಬಾಳಿಕೆಯಲ್ಲಾ ಇಲ್ಲಿ ನಡೆಯುವುದಿಲ್ಲ. ಎಲ್ಲರೂ ನಮ್ಮ ಅಣ್ಣ-ತಮ್ಮಂದಿರೆ. ಎಲ್ಲರೂ ನಮ್ಮ ಊರಿನವರೇ. ನೀವು ಕೇಳಿದ ಲೆಕ್ಕವನ್ನೆಲ್ಲಾ ಕೊಡು ತ್ತೇವೆ. ನಾಳೆ ಬಂದು ನೀವು ಲೆಕ್ಕ ಕೇಳಿ ಎಂದರು.ಜಲ್ಲಿ, ಮರಳು, ಕಂಬ ಇದೆಲ್ಲದರ ಬಗ್ಗೆ ಯಾರಿಗಾದರೂ ಲೆಕ್ಕ ಕೊಡುವುದಕ್ಕೆ ಆಗುತ್ತದಾ? ಇದನ್ನು ಕೆಡಿಸಬೇಕು, ಎನ್‌ಕ್ವೈರಿ ಮಾಡಬೇಕೆಂದು ಬಂದರೆ ನಡೆಯುವುದಿಲ್ಲ. ಕೂಡಲ ಸಂಗಮ ಪೀಠದಲ್ಲಿ ಎಲ್ಲವನ್ನೂ ಮುಗಿಸಿ ಬಂದರು. ಇಂದು ಕೂಡಲ ಸಂಗಮ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಕಥೆ ಏನಾಗಿದೆ ಎಂದು ಅವರು ಬೇಸರ ಹೊರಹಾಕಿದರು.
ಅವಕಾಶ ನೀಡಿದರೂ ನಡೆದುಕೊಳ್ಳದಿದ್ದಾಗ ಹೀಗೆಲ್ಲಾ ಸೃಷ್ಟಿ ಮಾಡಿದರು. ಪೀಠದಿಂದ ಉಚ್ಚಾಟಿತ ಶ್ರೀ ವಚನಾನಂದ ಸ್ವಾಮೀಜಿಗಳನ್ನು ಗೌರವಯುತವಾಗಿ ಕಳಿಸಲು ನಿರ್ಣಯ ಮಾಡಿದ್ದೇವೆ. ಸೋಮವಾರದಂದು ಇಡೀ ಸಮಾಜ ಸೇರುತ್ತದೆ. ಗೌರವಯುತವಾಗಿ ಹರಿಹರ ಪಂಚಮಸಾಲಿ ಮಠವನ್ನು ತೊರೆಯುವಂತೆ ಶ್ರೀಗಳಿಗೆ ಆಗ್ರಹಿಸುತ್ತೇವೆ. ನಿಮ್ಮ ಒಬ್ಬರಿಂದ ಇಡೀ ಸಮಾಜ ಛಿದ್ರವಾಗುತ್ತಿದೆ ಎಂದು ಅವರು ಕಿಡಿಕಾರಿದರು.- - -
(ಕೋಟ್) ವಚನಾನಂದ ಶ್ರೀಗಳೇ ನೀವಾಗಿಯೇ ನೀವು ಗೌರವದಿಂದ ಹರಿಹರ ಪಂಚಮಸಾಲಿ ಪೀಠವನ್ನು ಬಿಟ್ಟು ಹೋದರೆ ದೊಡ್ಡವರಾಗುತ್ತೀರಿ. ನಾಳೆ ಕಾನೂನು ಏನು ಹೇಳುತ್ತದೋ ಅದಕ್ಕೆ ಎಲ್ಲರೂ ತಲೆಬಾಗಲೇಬೇಕು. ಇನ್ನೂ ಕಾಲ ಮಿಂಚಿಲ್ಲ, ವಚನಾನಂದ ಸ್ವಾಮೀಜಿ ಪೀಠ ತೊರೆಯಲಿ.- ಎಚ್.ಎಸ್.ನಾಗರಾಜ, ಯುವ ಮುಖಂಡ.
- - --26ಕೆಡಿವಿಜಿ4-ಹರಿಹರ ಪಂಚಮಸಾಲಿ ಪೀಠದಲ್ಲಿ ಸಮಾಜದ ಯುವ ಮುಖಂಡ ಎಚ್ಚೆಸ್ ನಾಗರಾಜ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.