ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪ್ರಸ್ತುತ ಸಮಾಜದ ಪರಿಸ್ಥಿತಿಯಲ್ಲಿ ಆತ್ಮ ರಕ್ಷಣೆ ಮತ್ತು ಆರೋಗ್ಯದ ಕಡೆ ಹೆಚ್ಚು ಮಹತ್ವ ನೀಡಬೇಕಾಗಿದೆ ಎಂದು ಹಿರಿಯ ಪತ್ರಕರ್ತ ಪುಟ್ಟಣ್ಣ ಗೋಕಾಕ್ ಮಾತನಾಡಿದರು.ಅವರು ಪಟ್ಟಣದ ಒಕಿನೋವ ನ್ಯಾಷನಲ್ ಮತ್ತು ಇಂಟರ್‌ನ್ಯಾಷನಲ್ ಮಾರ್ಷಲ್ ಆರ್ಟ್ಸ್ ಕರಾಟೆ ಶಾಲೆ ಮಕ್ಕಳಿಗೆ ಬೆಲ್ಟ್ ವಿತರಿಸಿ ಮಾತನಾಡಿದರು. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯೆಗೆ ಸಮಯಕ್ಕೆ ಗಮನಹರಿಸಿ ಕಲಿಕೆ ಸಮಯದಲ್ಲಿ ಸೋಮಾರಿತನ ಅಥವಾ ತಾತ್ಸಾರ ವರ್ತನೆ ಮಾಡದೆ ಮುಂದಾಲೋಚನೆಯಿಂದ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದು ಮಕ್ಕಳ ಕೈಯಲ್ಲಿದೆ. ಕರಾಟೆ ತಮ್ಮ ಆತ್ಮರಕ್ಷಣೆಗೆ ಸಹಕಾರಿಯಾಗಲಿದ್ದು ಇಂದಿನ ಪೀಳಿಗೆಯಲ್ಲಿ ಹೆಣ್ಣುಮಕ್ಕಳು ತಮ್ಮ ರಕ್ಷಣೆಗೆ ಕಡ್ಡಾಯವಾಗಿ ಕರಾಟೆ ಕಲಿಯಬೇಕು ಇದಕ್ಕೆ ಪೋಷಕರ ಪ್ರೋತ್ಸಾಹ ಹಾಗೂ ಆಲೋಚನೆ ಮುಖ್ಯವಾಗಿದೆ ಎಂದರು.
ಸಮಾಜ ಸೇವಕ ನವೀನ್ ಮಾತನಾಡಿ, ವಿದ್ಯಾರ್ಥಿಗಳ ದಿಸೆಯಲ್ಲಿಯೇ ಕರಾಟೆ ಅಭ್ಯಾಸ ಮುಂದಿನ ಭವಿಷ್ಯಕ್ಕೆ ಒಳ್ಳೆಯದಾಗುತ್ತದೆ. ರಾಷ್ಟ್ರಪ್ರೇಮ ಬೆಳೆಸಿಕೊಂಡು ಮಹಾತ್ಮರ ಆದರ್ಶ ಪಾಲಿಸಿ ಭವಿಷ್ಯ ರೂಪಿಸಿಕೊಂಡು ಇಚ್ಛಾಶಕ್ತಿಯಿಂದ ಕಲಿಯಿರಿ ಎಂದರು.ಗ್ರ್ಯಾಂಡ್ ಮಾಸ್ಟರ್ ಹರೀಶ್ ರಾವತ್ ಮಾತನಾಡಿ, ಪಟ್ಟಣದ ಅತ್ಯಂತ ಹಿರಿಯ ಶಾಲೆ ನಮ್ಮ ಶಾಲೆಯಾಗಿದ್ದು ಸಾವಿರಾರು ಮಕ್ಕಳು ಕರಾಟೆಯನ್ನು ಕಲಿಸಿದ್ದು ಸೈನಿಕರಾಗಿ, ಪೊಲೀಸ್ ಇಲಾಖೆ ಇತರೆ ಇಲಾಖೆಗಳಲ್ಲಿ ಇದ್ದಾರೆ. ನಮ್ಮ ಶಾಲೆಯಲ್ಲಿ ಸುಲಭ ದರದಲ್ಲಿ ಮಾದರಿ ಶಾಲೆಯಾಗಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿ ವಿವಿಧ ಗುರುತರ ಸಾರ್ವಜನಿಕ ಪ್ರದರ್ಶನ ನೀಡಿದ್ದೇವೆ. ಇದರ ಸದೂಪಯೋಗ ಪಡೆದುಕೊಳ್ಳಬೇಕು ಎಂದರು. ಹಿರಿಯ ವಿದ್ಯಾರ್ಥಿ ಜಿ.ಎಲ್. ರಘು ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಕಾಶ್ ಸ್ವಾಗತಿಸಿದರೆ ಲೇಖನ ವಂದಿಸಿದರು.
;Resize=(128,128))
;Resize=(128,128))
;Resize=(128,128))