ಸಾರಾಂಶ
ಕ್ಷುಲ್ಲಕ ಕಾರಣಕ್ಕಾಗಿ ಹಾಡಹಗಲೇ ಯುವಕನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ತಲ್ಲೂರ ರಸ್ತೆಯ ಬಾಜು ಗವಿಯ ಹತ್ತಿರದ ಜಮಾದಾರ ಮಡ್ಡಿಯ ಜಮೀನಿನಲ್ಲಿ ಶನಿವಾರ ನಡೆದಿದೆ.
ಕನ್ನಡಪ್ರ ವಾರ್ತೆ ಬೈಲಹೊಂಗಲ
ಕ್ಷುಲ್ಲಕ ಕಾರಣಕ್ಕಾಗಿ ಹಾಡಹಗಲೇ ಯುವಕನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ತಲ್ಲೂರ ರಸ್ತೆಯ ಬಾಜು ಗವಿಯ ಹತ್ತಿರದ ಜಮಾದಾರ ಮಡ್ಡಿಯ ಜಮೀನಿನಲ್ಲಿ ಶನಿವಾರ ನಡೆದಿದೆ.ಮೊಹಮ್ಮದ ಸೋಹಿಲ್ ನಿಯಾಜ್ ಅಹ್ಮದ್ ಕಿತ್ತೂರ (17) ಹತ್ಯೆಯಾದ ಯುವಕ. ಯುವಕ ಗ್ರಾಮದಲ್ಲಿ ಎಗ್ ರೈಸ್ ಅಂಗಡಿ ಇಟ್ಟುಕೊಂಡಿದ್ದ. ಆರೋಪಿಯನ್ನು ಆದಿತ್ಯಾ ಮಹಾಂತೇಶ ಬಾಳಿಕಾಯಿ (20) ಹತ್ಯೆ ಮಾಡಿ ಪರಾರಿಯಾಗಿದ್ದು, ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಈ ಹಿಂದೆಯೂ ಕೆಲವು ಯುವಕರಿಂದ ಮೃತನಿಗೆ ಕೊಲೆ ಬೆದರಿಕೆ ಬಂದಿತ್ತು ಎಂಬುದು ತಿಳಿದು ಬಂದಿದೆ. ಸ್ಥಳಕ್ಕೆ ಮುರಗೋಡ ಠಾಣೆಯ ಸಿಪಿಐ ಐ.ಎಂ. ಮಠಪತಿ ಹಾಗೂ, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕನ ಹತ್ಯೆ ಖಂಡಿಸಿ ಮುರಗೋಡ ಪೊಲೀಸ್ ಠಾಣೆ ಮುಂದೆ ಯುವಕನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ನಂತರ ಪೊಲೀಸರು ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು.