ಯುವತಿ ಕೊಲೆ ಪ್ರಕರಣ: ಪೊಲೀಸ್‌ ಅಧಿಕಾರಿ ಅಮಾನತ್ತು ರದ್ದತಿಗೆ ಒತ್ತಾಯ

| Published : May 26 2024, 01:36 AM IST

ಯುವತಿ ಕೊಲೆ ಪ್ರಕರಣ: ಪೊಲೀಸ್‌ ಅಧಿಕಾರಿ ಅಮಾನತ್ತು ರದ್ದತಿಗೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕೊಲೆ ಪ್ರಕರಣದಲ್ಲಿ ದಲಿತ ಅಧಿಕಾರಿಯನ್ನು ಬಲಿಪಶು ಮಾಡಿರುವುದು ಖಂಡನೀಯ. ದಕ್ಷ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ರಾಜೀವ ಎಂ. ಅವರ ಅಮಾನತು ಆದೇಶವನ್ನು ಸರ್ಕಾರ ಕೂಡಲೆ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ದಾಂಡೇಲಿ

ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಅಂಬಿಗೇರ ಯುವತಿ ಕೊಲೆ ಪ್ರಕರಣದಲ್ಲಿ ದಲಿತ ಸಮುದಾಯದ ಪೊಲೀಸ್‌ ಅಧಿಕಾರಿ ರಾಜೀವ ಎಂ. ಅವರನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡಿ ಕಾಣದ ಕೈಗಳು ಅವರ ಅಮಾನತಿಗೆ ಕಾರಣಿಕರ್ತರಾಗಿದ್ದಾರೆ ಎಂದು ಆದಿ ಜಾಂಬವಂತ ಸಂಘ ಮತ್ತು ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್‌ ಸೇನೆ ಆಪಾದಿಸಿದೆ.

ಕೊಲೆ ಪ್ರಕರಣದಲ್ಲಿ ದಲಿತ ಅಧಿಕಾರಿಯನ್ನು ಬಲಿಪಶು ಮಾಡಿರುವುದು ಖಂಡನೀಯ. ದಕ್ಷ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ರಾಜೀವ ಎಂ. ಅವರ ಅಮಾನತು ಆದೇಶವನ್ನು ಸರ್ಕಾರ ಕೂಡಲೆ ಹಿಂಪಡೆದುಕೊಂಡು ಅವರನ್ನು ಸೇವೆಗೆ ಮರು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಆದಿ ಜಾಂಬವಂತ ಸಂಘ ಮತ್ತು ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ ಸೇನೆಯ ಪದಾಧಿಕಾರಿಗಳು ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಸೀಲ್ದಾರರಿಗೆ ಸಲ್ಲಿಸಿದರು.

ಕೊಲೆಯಾದ ಅಂಜಲಿ ಕುಟುಂಬಕ್ಕೆ ₹೨೫ ಲಕ್ಷ ಪರಿಹರ, ನಾಲ್ಕು ಎಕರೆ ಭೂಮಿ ಹಾಗೂ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು ಮತ್ತು ನೇಹಾ ಹಿರೇಮಠ ಹಾಗೂ ಅಂಜಲಿ ಕೊಲೆ ಆರೋಪಿಗಳನ್ನು ಗಲ್ಲಿಗೆರಿಸಬೇಕು ಎಂದು ಮನವಿಯಲ್ಲಿ ತಿಳಿಸಿಲಾಗಿದೆ.

ಈ ಸಂದರ್ಭದಲ್ಲಿ ಆದಿ ಜಾಂಬವಂತ ಸಂಘ ಅಧ್ಯಕ್ಷ ಹಾಗೂ ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ ಸೇನೆಯ ರಾಜ್ಯ ಉಪಾಧ್ಯಕ್ಷ ಚಂದ್ರಕಾಂತ ನಡಿಗೇರ, ಸಂಘಟನೆಯ ಪ್ರಮುಖರಾದ ವನ್ನೂರಪ್ಪ ಜರಿ, ರಾಜೇಶ ಕಾಂಬಳೆ, ಬಸವರಾಜ ಹರಿಜನ, ದತ್ತು ಮಾಳಗೆ, ಸತೀಶ ಚವ್ಹಾಣ, ಸರಸ್ವತಿ ಚವ್ಹಾಣ, ಆಯಿಆ ಮೊಕಾಶಿ, ಹುಸೇನಮಿಯಾ ಸವಣೂರು, ಜ್ಯೋತಿಬಾ ಕೇದಾರಿ, ಯಾಸಿನ ಖಾಜಿ, ರವಿಶಂಕರ ಕೊಳ್ಳುರ, ಗಣಪತಿ ನವಲೆ, ಧರ್ಮಣ್ಣ ಭಜಂತ್ರಿ, ಶಿವಾಜಿ ಕಾಂಬಳೆ ಮೊದಲಾದವರು ಇದ್ದರು.