ಇಂದಿನ ನಿಮ್ಮ ಕಠಿಣ ಶ್ರಮವೇ ಭವಿಷ್ಯಕ್ಕೆ ದಾರಿದೀಪ

| Published : Dec 23 2024, 01:04 AM IST

ಇಂದಿನ ನಿಮ್ಮ ಕಠಿಣ ಶ್ರಮವೇ ಭವಿಷ್ಯಕ್ಕೆ ದಾರಿದೀಪ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ನಿಮ್ಮ ಕಠಿಣ ಶ್ರಮವೇ ಮುಂದೆ ಭವಿಷ್ಯಕ್ಕೆ ದಾರಿದೀಪವಾಗಲಿದೆ

ಸಂಡೂರು: ಇಂದಿನ ನಿಮ್ಮ ಕಠಿಣ ಶ್ರಮವೇ ಮುಂದೆ ಭವಿಷ್ಯಕ್ಕೆ ದಾರಿದೀಪವಾಗಲಿದೆ ಎಂದು ಸ್ಮಯೋರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಹಿರ್ಜಿ ಅಜಯ್ ಘೋರ್ಪಡೆ ಅಭಿಪ್ರಾಯಪಟ್ಟರು.ಪಟ್ಟಣದ ಎಸ್.ಆರ್.ಎಸ್ ಶಾಲೆಯ ಡೈಮಂಡ್ ಜುಬಿಲಿ ಹಾಲ್‌ನಲ್ಲಿ ಸಂಡೂರು ವಸತಿ ಶಾಲೆಯ ೬೬ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಶಿಕ್ಷಕರ ಮತ್ತು ಪೋಷಕರ ಪರಿಶ್ರಮವೂ ಕಾರಣವಾಗುತ್ತದೆ. ೬೬ ವರ್ಷಗಳಿಂದ ಈ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಸಂಸ್ಥೆಯ ಸಂಸ್ಥಾಪಕ ಎಂ.ವೈ. ಘೋರ್ಪಡೆ ದೃಷ್ಠಿಕೋನವನ್ನು ಗೌರವಿಸೋಣ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆದು ಈ ಸಂಸ್ಥೆಯನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಸೋಣ ಎಂದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಗೋವಿಂದ ರಾವ್ ಅವರು ಮಾತನಾಡಿದರು.

ಶಾಲೆಯ ವಾರ್ಷಿಕೋತ್ಸವ ಅಂಗವಾಗಿ ಬೆಳಿಗ್ಗೆ ಜೀವ ವಿಜ್ಞಾನ, ಸಮಾಜ ಅಧ್ಯಯನ, ಭೌತಶಾಸ್ತ್ರ, ಕಂಪ್ಯೂಟರ್ ತಂತ್ರಜ್ಞಾನ, ಕರಕುಶಲ ಕಲೆ, ಚಿತ್ರಕಲೆಗಳ ಪ್ರದರ್ಶನಗಳನ್ನು ಶಾಲೆಯ ಬಾಲಭವನದಲ್ಲಿ ವಿದ್ಯಾರ್ಥಿಗಳು ಏರ್ಪಡಿಸಿದ್ದರು. ಡಾ. ಗೋವಿಂದರಾವ್ ಕಾರ್ಯಕ್ರಮ ಉದ್ಘಾಟಿಸಿದರು.

ಸಂಜೆ ಶಾಲಾ ಮಕ್ಕಳಿಂದ “ವಸುಧೈವ ಕುಟುಂಬ” ಎನ್ನುವ ಹಿಂದಿ ರೂಪಕವು ನಡೆಯಿತು. ಈ ರೂಪಕವನ್ನು ಶಾಲೆಯ ಹಿಂದಿ ಶಿಕ್ಷಕಿಯಾದ ಪ್ರೇರಣ ಯಾದವ್ ಅವರು ನಿರ್ದೇಶಿಸಿದ್ದರು. ಅಲ್ಲದೇ ಮಕ್ಕಳಿಂದ ವಿವಿಧ ಶೈಲಿಯ ನೃತ್ಯಗಳು, ಕರಾಟೆ, ಅಲ್ಲದೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಇದೇ ಸಂದರ್ಭದಲ್ಲಿ ಶಿವಪುರ ಶಿಕ್ಷಣ ಸಮಿತಿ ಹಾಗೂ ಸಂಡೂರು ಎಜ್ಯುಕೇಷನ್ ಸೊಸೈಟಿಯ ವಿದ್ಯಾ ಸಂಸ್ಥೆಗಳಲ್ಲಿ ಶೈಕ್ಷಣಿಕ ಉನ್ನತಿ ಸಾಧಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ ವಂಶಸ್ಥರಾದ ಸೂರ್ಯಪ್ರಭ ಅಜಯ್ ರಾಜೇ ಘೋರ್ಪಡೆ, ಯಶೋಧರದೇವಿ ಎಸ್ ಘೋರ್ಪಡೆ, ಏಕಾಂಬರ್ ಅಜಯ್ ಘೋರ್ಪಡೆ, ಸ್ಮಯೋರ್ ಸಂಸ್ಥೆಯ ಚೇರಮನ್‌ರಾದ ಟಿ.ಆರ್. ರಘುನಂದನ್, ಸ್ಮಯೋರ್ ಸಂಸ್ಥೆಯ ಸಿಇಒ ಕೃಷ್ಣೇಂದು ಶ್ಯಾನೆಲ್, ಶಿವಪುರ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಆಶಿಯಾಬಾನು, ಎಸ್ ಇ ಎಸ್ ಎಜ್ಯುಕೇಷನ್ ಸೊಸೈಟಿಯ ಕಾರ್ಯದರ್ಶಿಗಳಾದ ಡಾ. ಜಗದೀಶ ಬಸಾಪುರ, ಸಂಡೂರ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಟಿ. ಎಮ್. ಅಲಿಂ ಅಹಮದ್, ಎಸ್ ಜಿ ಆರ್ ಎಸ್ ಶಾಲೆಯ ಪ್ರಾಂಶುಪಾಲರಾದ ಚಂದ್ರಿಕಾ ಆನಂದ್, ಎಸ್ ಜಿ ಆರ್ ಎಸ್‌ನ ಆಡಳಿತಾಧಿಕಾರಿಗಳಾದ ಜಂಬುನಾಥ, ಡಾ. ಹಾಲಂಬಿ ಅಲ್ಲದೇ ಶಾಲೆಯ ಶಿಕ್ಷಕ ವೃಂದದವರೂ, ವಿದ್ಯಾರ್ಥಿಗಳೂ ಮತ್ತು ವಿದ್ಯಾರ್ಥಿಗಳ ಪೋಷಕರೂ ಬಾಗವಹಿಸಿದ್ದರು.