ಹರಿಹರ: ಯುವಕ ಸಾವು- ಡೆಂಘೀ ಶಂಕೆ

| Published : Jul 10 2024, 12:31 AM IST

ಸಾರಾಂಶ

ಹರಿಹರ ಪಟ್ಟಣ ಕೇಶವ ನಗರದ ಯುವಕನೊಬ್ಬ ಮರಣ ಹೊಂದಿದ ಘಟನೆ ಭಾನುವಾರ ನಡೆದಿದ್ದು, ಯುವಕ ಡೆಂಘೀಜ್ವರದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

- ಜ್ವರ ಹಿನ್ನೆಲೆ 10 ದಿನಗಳ ಹಿಂದೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದ ಅರುಣ

- ಚಿಕಿತ್ಸೆ ಫಲಕಾರಿಯಾಗದೇ ಜು.೭ರಂದು ಆಟೋ ಡ್ರೈವರ್‌ ಅರುಣ ಸಾವು

- ಸ್ಥಳೀಯ ಪ್ರಯೋಗಾಲಯಗಳಲ್ಲಿ ಮಾಡಿದ ರಕ್ತ ಪರೀಕ್ಷೆಯಲ್ಲಿ ಡೆಂಘೀ ಖಚಿತವಾಗಿಲ್ಲ

- ಪೂನಾದ ಪ್ರಯೋಗಾಲಯಕ್ಕೂ ಮೃತ ಯುವಕನ ರಕ್ತ ಮಾದರಿ ರವಾನೆ, ವರದಿ ನಿರೀಕ್ಷೆ - - -

ಹರಿಹರ: ಡೆಂಘೀಜ್ವರ ಶಂಕೆಯಿಂದ ಕೇಶವ ನಗರದ ಯುವಕನೊಬ್ಬ ಮರಣ ಹೊಂದಿದ ಘಟನೆ ಭಾನುವಾರ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಅರುಣ (೨೨) ಮೃತ ಯುವಕ. ಆಟೋ ಚಾಲಕನಾಗಿದ್ದ ಅರುಣ ಹತ್ತು ದಿನಗಳ ಹಿಂದೆ ಜ್ವರ ಎಂದು ನಗರದ ಖಾಸಗಿ ಕ್ಲಿನಿಕ್‌, ನಂತರ ನಗರದ ಸಾರ್ವಜನಿಕ ಆಸ್ಪತ್ರೆ, ದಾವಣಗೆರೆಯ ಚಿಗಟೇರಿ ನಂತರ ಎಸ್.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಜು.೭ರಂದು ಸಂಜೆ ಮೃತಪಟ್ಟಿದ್ದಾರೆ.

ಸ್ಥಳೀಯ ಪ್ರಯೋಗಾಲಯಗಳಲ್ಲಿ ಮಾಡಿದ ರಕ್ತ ಪರೀಕ್ಷೆಯಲ್ಲಿ ಡೆಂಘೀ ಕಾಯಿಲೆ ಖಚಿತವಾಗಿಲ್ಲ. ಪೂನಾದ ಪ್ರಯೋಗಾಲಯಕ್ಕೂ ಈ ಯುವಕನ ರಕ್ತ ಮಾದರಿಯನ್ನು ರಕ್ತಪರೀಕ್ಷೆಗೆ ಕಳಿಸಿದ್ದು, ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದು ತಿಳಿದುಬಂದಿದೆ.

- - - -೯ಎಚ್‌ಆರ್‌ಆರ್೧: ಅರುಣ