ಕೈಗಾರಿಗಳಿಂದ ಯುವಕರಿಗೆ ಉದ್ಯೋಗ: ಸಣ್ಣ ಕೈಗಾರಿಕೆ ಸಂಘದ ಎ.ಜಯಸಿಂಹ

| Published : Aug 05 2024, 12:37 AM IST

ಕೈಗಾರಿಗಳಿಂದ ಯುವಕರಿಗೆ ಉದ್ಯೋಗ: ಸಣ್ಣ ಕೈಗಾರಿಕೆ ಸಂಘದ ಎ.ಜಯಸಿಂಹ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಅಭಿವೃದ್ಧಿಗೆ ಹಲವು ಮಹಾಶಯರ ಪಾತ್ರಗಳು ಬಹಳಷ್ಟಿದೆ. ಜಿಲ್ಲೆಗೆ ಹೆಸರಾಂತ ಕೈಗಾರಿಕೆಗಳು ಬರುತ್ತಿರುವುದರಿಂದ ಯುವಕರಿಗೆ ಉದ್ಯೋಗ ಭಾಗ್ಯ ದೊರಕುತ್ತಿದೆ ಎಂದು ಚಾಮರಾಜನಗರ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಎ. ಜಯಸಿಂಹ ತಿಳಿಸಿದರು. ಚಾಮರಾಜನಗರ ಸಣ್ಣ ಕೈಗಾರಿಕೆಗಳ ಸಂಘದ (ಚಾಸಿಯ) ವಾರ್ಷಿಕೋತ್ಸವದ ಸಮಾರಂಭದಲ್ಲಿ ಮಾತನಾಡಿದರು.

ಸಂಘದ ವಾರ್ಷಿಕೋತ್ಸವ

ಚಾಮರಾಜನಗರ: ಜಿಲ್ಲೆಯ ಅಭಿವೃದ್ಧಿಗೆ ಹಲವು ಮಹಾಶಯರ ಪಾತ್ರಗಳು ಬಹಳಷ್ಟಿದೆ. ಜಿಲ್ಲೆಗೆ ಹೆಸರಾಂತ ಕೈಗಾರಿಕೆಗಳು ಬರುತ್ತಿರುವುದರಿಂದ ಯುವಕರಿಗೆ ಉದ್ಯೋಗ ಭಾಗ್ಯ ದೊರಕುತ್ತಿದೆ ಎಂದು ಚಾಮರಾಜನಗರ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಎ. ಜಯಸಿಂಹ ತಿಳಿಸಿದರು.

ನಗರದ ನಂಜನಗೂಡು ರಸ್ತೆಯಲ್ಲಿ ಇರುವ ಸಿಂಹ ಮೂವೀಪ್ಯಾರಡೆಸ್ ಸಭಾಗೃಹದಲ್ಲಿ ನಡೆದ ಚಾಮರಾಜನಗರ ಸಣ್ಣ ಕೈಗಾರಿಕೆಗಳ ಸಂಘದ (ಚಾಸಿಯ) ವಾರ್ಷಿಕೋತ್ಸವದ ಸಮಾರಂಭದಲ್ಲಿ ಮಾತನಾಡಿ, ಸಣ್ಣ ಕೈಗಾರಿಕೆ ಹಾಗೂ ದೊಡ್ಡ ಕೈಗಾರಿಕೆಗಳ ಸ್ಥಾಪನೆಯಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗುತ್ತದೆ. ಜತೆಗೆ ಯುವಕರಿಗೆ ಉದ್ಯೋಗ ಅವಕಾಶಗಳು ಸಿಗಲಿದೆ. ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಂದಿನ ಉಸ್ತುವಾರಿ ಮಂತ್ರಿ ದಿವಂಗತ ಎಚ್.ಎಸ್. ಮಹದೇವ ಪ್ರಸಾದ್, ಅಂದಿನ ಸಂಸದ ದಿವಂಗತ ಆರ್. ಧ್ರುವನಾರಾಯಣ ಮತ್ತು ಜಿಲ್ಲೆಯ ಎಲ್ಲಾ ಶಾಸಕರಿಗೆ ಸಲ್ಲುತ್ತದೆ ಎಂದು ಹೇಳಿದರು.

ಕಾಡ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ ಚಾಮರಾಜನಗರ ಹಿಂದುಳಿದ ಜಿಲ್ಲೆಯಾದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಆಸಕ್ತಿ ವಹಿಸಿ ಅಭಿವೃದ್ಧಿಗೆ ಸಹಕಾರ ನೀಡಿದ್ದರ ಪರಿಣಾಮ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿ ಸಾಧ್ಯವಾಯಿತು ಎಂದು ತಿಳಿಸಿದರು.

ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ರವರು ೫೦-೫೦ ಅನುಪಾತದಲ್ಲಿ ನಿವೇಶನಗಳನ್ನು ಚೂಡಾ ವತಿಯಿಂದ ಹಂಚಲಾಗುವುದು ಎಂದರು.

ನಿವೃತ್ತ ಜಂಟಿ ನಿರ್ದೇಶಕ ರಾಜೇಂದ್ರ ಪ್ರಸಾದ್, ಮಹಮದ್ ಅಸ್ಗರ್, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಕೇಂದ್ರದ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ರಾಜೇಂದ್ರ ಪ್ರಸಾದ್ ದರವರಿಗೆ ಗೌರವಿಸಿ ಸನ್ಮಾನಿಸರಾಯಿತು.

ನೂತನವಾಗಿ ವರ್ತಕರ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎನ್. ಶಂಕರ್, ಗೌರವ ಕಾರ್ಯದರ್ಶಿಗಳಾದ ಚಿದಾನಂದ ಗಣೇಶ್‌ರನ್ನು ಗೌರವಿಸಲಾಯಿತು.

ಚಾಮರಾಜನಗರ ಸಣ್ಣ ಕೈಗಾರಿಕೆಗಳ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಸದಸ್ಯರು ಇದ್ದರು.