ಸಾರಾಂಶ
ಮಾದಕ ವಸ್ತುಗಳು ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತವೆ. ಕೊಳಚೆ ಪ್ರದೇಶ ಹಾಗೂ ಯುವ ಜನತೆ ಮಾದಕವಸ್ತು ಚಟಕ್ಕೆ ಬಲಿಯಾಗುತ್ತಿದ್ದಾರೆ. ಇಂದಿನ ಮಕ್ಕಳು ಮಾದಕ ವಸ್ತುಗಳಿಗೆ ಬಲಿಯಾಗಿ ದಿಕ್ಕು ತಪ್ಪುತ್ತಿರುವುದು ಕಳವಳಕಾರಿ
ಕನ್ನಡಪ್ರಭ ವಾರ್ತೆ ಕೋಲಾರ
ಯುವ ಜನತೆಯನ್ನು ವ್ಯಸನ ಮುಕ್ತ ಮಾಡಲು ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಪಟ್ಟ ಶ್ರಮ ಮತ್ತು ಅವರು ನೀಡಿದಂಥ ಮಹತ್ವವಾದ ಸಂದೇಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾರ್ಥಕತೆ ಪಡೆಯುವಂತಾಗಬೇಕೆಂದು ಜಿಲ್ಲಾಧಿಕಾರಿ ಅಕ್ರಂಪಾಷ ಹೇಳಿದರು.ನಗರದ ರಂಗಮಂದಿರದಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ವ್ಯಸನ ಮುಕ್ತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾದಕ ವಸ್ತು ಬಳಸಬೇಡಿಮಾದಕ ವಸ್ತುಗಳು ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತವೆ. ಕೊಳಚೆ ಪ್ರದೇಶ ಹಾಗೂ ಯುವ ಜನತೆ ಮಾದಕವಸ್ತು ಚಟಕ್ಕೆ ಬಲಿಯಾಗುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಹಲವಾರು ಕನಸುಗಳನ್ನು ಕಟ್ಟಿಕೊಂಡು ಅವರ ಭವಿಷ್ಯ ರೂಪಿಸಲು ಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ. ಆದರೆ, ಇಂದಿನ ಮಕ್ಕಳು ಮಾದಕ ವಸ್ತುಗಳಿಗೆ ಬಲಿಯಾಗಿ ದಿಕ್ಕು ತಪ್ಪುತ್ತಿರುವುದು ಕಳವಳಕಾರಿ ಎಂದರು.
ಗುಟ್ಕಾ, ಪಾನ್ ಪರಾಗ್, ಡ್ರಗ್ಸ್, ಗಾಂಜಾ, ಸಿಗರೇಟ್, ಬೀಡಿ ಸೇರಿ ಮಾದಕ ಪದಾರ್ಥಗಳಿಂದ ಮುಕ್ತಿಗೊಳಿಸುವಂತ ಸಂದೇಶಗಳನ್ನು ಶಿಕ್ಷಕರು ಸಮಾಜಕ್ಕೆ ಸಾರಬೇಕು. ಮಾದಕ ವಸ್ತುಗಳು ನೀಡುವಂತ ಕ್ಷಣಿಕ ಸುಖಕ್ಕಾಗಿ ಜೀವನ ಪರ್ಯಂತ ನೋವುಗಳನ್ನು ಅನುಭವಿಸಬೇಕು, ಇವರನ್ನು ನಂಬಿ ಕೊಂಡಿರುವ ಕುಟುಂಬಗಳು ಇದರಿಂದ ಕಷ್ಟಕ್ಕೆ ಸಿಲುಕಲಿವೆ. ಕೆಟ್ಟವರ ಸಹವಾಸ ದೋಷಗಳಿಂದಾಗಿ ಜೀವನವು ಸಂಕಷ್ಟಕ್ಕೆ ಸಿಲುಕಲಿದೆ, ಹಾಗಾಗಿ ಮಾದಕ ವಸ್ತುಗಳಿಂದ ದೂರವಿರಲು ಜಾಗೃತರಾಗಬೇಕೆಂದು ಕಿವಿಮಾತು ಹೇಳಿದರು.ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀನಿವಾಸ್, ಚೆನ್ನಬಸಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರಿ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ, ವಾರ್ತ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆ ಸಹಾಯಕ ನಿರ್ದೇಶಕ ಚೇತನ್ ಕುಮಾರ್ ಇದ್ದರು. ಆರೋಗ್ಯ ಇಲಾಖೆಯ ಶಿಕ್ಷಣಾಧಿಕಾರಿ ಎಂ.ಪ್ರೇಮ ನಿರೂಪಿಸಿದರು.