ದೇವದುರ್ಗ: ತಾಲೂಕಿನ ಹದ್ದಿನಾಳ ಗ್ರಾಮದ ಯುವಕ ಭೂಮಾನಂದನ ಕೊಲೆ ಆ.4ರಂದು ಸುಂಕೇಶ್ವರಹಾಳ ರಸ್ತೆ ಮಾರ್ಗದಲ್ಲಿ ಜರುಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಹಳೇ ವೈಷಮ್ಯವೇ ಕೊಲೆಗೆ ಕಾರಣ ಎಂದು ಗೊತ್ತಾಗಿದ್ದು, ದೇವಪ್ಪ ರಾಮಸ್ವಾಮಿ, ಅಮರೇಶಗೌಡ ಕಲ್ಲಪ್ಪ ಗೌಡ,ಗುರು ಆಲಿಯಾಸ್ ಗುರುರಾಜ, ಶಿವು ಅಲಿಯಾಸ್ ಶಿವುಕುಮಾರ, ತಮ್ಮಣ್ಣ ಮಲದಕಲ್, ಬಸನಗೌಡ ಸಿದ್ದಪ್ಪಗೌಡ ಪರೆಡ್ಡಿ, ಶರಣಬಸವ ಬಸವರಾಜ ಇರಬಗೇರಾ ಹಾಗೂ ಭೀಮರಾಯ ವಿರುದ್ಧ ಕೊಲೆ ಮೊಕದ್ದಮೆ, ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದು, ದೇವಪ್ಪ, ಅಮರೇಶಗೌಡ, ಶರಣಬಸವ, ಶಿವರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ದೇವಪ್ಪ ಹಾಗೂ ಆತನ ಸಹಚರರು ಅಕ್ರಮ ಕೂಟ ರಚಿಸಿ ಕೊಂಡು ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿದೆ ಎಂದು ಮೃತನ ಪತ್ನಿ ಗೌರಮ್ಮ ಭೂಮಾನಂದ ಹದ್ದಿನಾಳ, ನೀಡಿದ ದೂರು ಆಧರಿಸಿ ಗಬ್ಬೂರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.