ಸಾರಾಂಶ
ರಾಮನಗರ: ಜಾನಪದ ಅತ್ಯಂತ ಪುರಾತನ ಕಲಾ ಪ್ರಕಾರವಾಗಿದ್ದು, ಹಲವು ರೀತಿಯಲ್ಲಿ ಪ್ರಕಟಗೊಂಡಿದೆ. ಅದನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಾನಂದೂರು ಕೆಂಪಯ್ಯ ಹೇಳಿದರು.
ರಾಮನಗರ: ಜಾನಪದ ಅತ್ಯಂತ ಪುರಾತನ ಕಲಾ ಪ್ರಕಾರವಾಗಿದ್ದು, ಹಲವು ರೀತಿಯಲ್ಲಿ ಪ್ರಕಟಗೊಂಡಿದೆ. ಅದನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಾನಂದೂರು ಕೆಂಪಯ್ಯ ಹೇಳಿದರು.
ನಗರದ ಹೊರ ವಲಯದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಾನಪದ ಲೋಕದ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಜನಪದ ಗೀತ ಗಾಯನ ಸ್ಪರ್ಧೆ-2024 ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ನಮ್ಮ ಭಾಷೆಯ ಜಾನಪದ ಸಂಸ್ಕೃತಿಯು ಪ್ರದೇಶವಾರು ಅಲ್ಲಿನ ಸ್ಥಳೀಯತೆಗೆ ತಕ್ಕಂತೆ ಹಲವು ವಿವಿಧ ರೀತಿಯ ಜಾನಪದಗಳನ್ನು ನೋಡುತ್ತೇವೆ ಎಂದರು.ಜಾನಪದ ಕಲೆಗಳನ್ನು ಮುಂದಿನ ತಲೆಮಾರುಗಳಿಗೆ ಉಳಿಸಿ-ಬೆಳೆಸುವ ಕಾರ್ಯ ಮಾಡಬೇಕು. ಜಾನಪದ ಗೀತೆಗಳಲ್ಲಿ ಹಲವು ರೀತಿಯ ವಾದ್ಯಗಳಿವೆ. ಅವುಗಳನ್ನು ಯಾವ ರೀತಿಯಲ್ಲಿ ನುಡಿಸಿ, ತಾಳಕ್ಕೆ ತಕ್ಕಂತೆ ಯಾವ ರೀತಿಯಲ್ಲಿ ಲಯಬದ್ಧವಾಗಿ ಹಾಡುಗಳನ್ನು ಹಾಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಜನಪದ ಗೀತ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಲಾವಿದರಿಗೆ ಬಹುಮಾನ ವಿತರಿಸಲಾಯಿತು. ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.26ಕೆಆರ್ ಎಂಎನ್ 2.ಜೆಪಿಜಿರಾಮನಗರದ ಹೊರ ವಲಯದ ಜಾನಪದ ಲೋಕದಲ್ಲಿ ರಾಜ್ಯ ಮಟ್ಟದ ಜನಪದ ಗೀತ ಗಾಯನ ಸ್ಪರ್ಧೆ-2024 ಕಾರ್ಯಕ್ರಮವನ್ನು ಬಾನಂದೂರು ಕೆಂಪಯ್ಯ ಉದ್ಘಾಟಿಸಿದರು.