ಭಾರತ ಉಜ್ವಲಗೊಳಿಸಲು ಯುವ ಸಮೂಹ ಕೈಜೋಡಿಸಬೇಕು : ಸಿ.ಟಿ.ರವಿ

| Published : Oct 08 2024, 01:10 AM IST

ಭಾರತ ಉಜ್ವಲಗೊಳಿಸಲು ಯುವ ಸಮೂಹ ಕೈಜೋಡಿಸಬೇಕು : ಸಿ.ಟಿ.ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಭವ್ಯ ಭಾರತವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಇಂದಿನ ಯುವ ಸಮೂಹ ಸ್ವಯಂ ಪ್ರೇರಿತರಾಗಿ ಬಿಜೆಪಿ ಸದಸ್ಯತ್ವ ಹೊಂದುವ ಮೂಲಕ ರಾಷ್ಟ್ರದ ಹಿತಚಿಂತನೆಗೆ ಕೈ ಜೋಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಬಿಜೆಪಿ ಯುವ ಮೋರ್ಚಾದಿಂದ ಸದಸ್ಯತ್ವ ಅಭಿಯಾನ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಭವ್ಯ ಭಾರತವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಇಂದಿನ ಯುವ ಸಮೂಹ ಸ್ವಯಂ ಪ್ರೇರಿತರಾಗಿ ಬಿಜೆಪಿ ಸದಸ್ಯತ್ವ ಹೊಂದುವ ಮೂಲಕ ರಾಷ್ಟ್ರದ ಹಿತಚಿಂತನೆಗೆ ಕೈ ಜೋಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ನಗರದ ಐಡಿಎಸ್‌ಜಿ ಕಾಲೇಜು ಸಮೀಪ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಸೋಮವಾರ ಏರ್ಪಡಿಸಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿದರು. ಜಗತ್ತಿನಲ್ಲೇ ಅತ್ಯಂತ ಹೆಚ್ಚು ಯುವಕರು ಹೊಂದಿರುವ ದೇಶ ಭಾರತ. ಯುವ ಭಾರತವನ್ನು ಸುಶಿಕ್ಷಿತ, ಕೌಶಲ್ಯವಂತ, ಸ್ವಾಭಿಮಾನ ಹಾಗೂ ಸ್ವಾವಲಂಬಿ ಭಾರತನ್ನಾಗಿ ನಿರ್ಮಿಸುವುದೇ ಪ್ರಧಾನಿ ನರೇಂದ್ರ ಮೋದಿ ಸಂಕಲ್ಪ. ಆ ನಿಟ್ಟಿನಲ್ಲಿ ಬಿಜೆಪಿ ಸದಸ್ಯತ್ವ ಹೊಂದುವ ಮೂಲಕ ರಾಷ್ಟ್ರ ಮೊದಲು ಎಂಬ ತತ್ತ್ವಕ್ಕೆ ಶಕ್ತಿ ಕೊಡಬೇಕು ಎಂದು ಹೇಳಿದರು.ಇಂದಿನ ಯುವಕರು ರಾಷ್ಟ್ರ ಮೊದಲು ಎಂಬುವ ಶಕ್ತಿ ಬಲಗೊಳಿಸಿದರೆ ಮಾತ್ರ ದೇಶ ಸದೃಢಗೊಳ್ಳಲು ಸಾಧ್ಯ. ಕೆಲವು ರಾಜಕೀಯ ಪಕ್ಷಗಳು ವೈಯಕ್ತಿಕ ಲಾಭದ ದೃಷ್ಟಿಯಿಂದ ಜಾತಿ ಜಾತಿಗಳ ನಡುವೆ ವಿಷ ಭಿತ್ತಿ ದೇಶವನ್ನು ದುರ್ಬಲಗೊಳಿಸಲು ಮುಂದಾಗುತ್ತಿರುವುದು ಸರಿಯಲ್ಲ ಎಂದರು.ತಾತ್ಕಾಲಿಕ ರಾಜಕಾರಣಕ್ಕೆ ದೇಶ ದುರ್ಬಲಗೊಳಿಸುವುದು ಸೂಕ್ತವಲ್ಲ. ರಾಜಕೀಯ ಮೀರಿ ದೇಶ ಪ್ರಬಲಗೊಳ್ಳಬೇಕು. ದೇಶ ಪ್ರಬಲಗೊಳ್ಳಲು ಭಾರತೀಯ ಜನತಾ ಪಕ್ಷಕ್ಕೆ ಯುವ ಸಮೂಹ ಸೇರ್ಪಡೆಗೊಂಡು ದೇಶದ ಒಳಿತಿಗೆ ಮುಂದಾದರೆ ಸದೃಢ ರಾಷ್ಟ್ರ ನಿರ್ಮಿಸಲು ಸಾಧ್ಯ ಎಂದು ಹೇಳಿದರು.ಜಿಲ್ಲಾ ಬಿಜೆಪಿ ಯುವ ಮೊರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ಕಾಲೇಜಿನಲ್ಲಿ 18 ವರ್ಷ ಮೇಲ್ಪಟ್ಟ ಯುವಕ, ಯುವತಿಯರನ್ನು ಬಿಜೆಪಿ ಸದಸ್ಯರಾಗಿಸುವ ಮೂಲಕ ಪ್ರಧಾನಿ ಆಶಯ ಈಡೇರಿಸಲಾಗುತ್ತಿದೆ. ಅದರಂತೆ ಇಂದು ಕಾಲೇಜಿನ ಕ್ಯಾಂಪಸ್‌ನಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಸದಸ್ಯರಾಗಿ ರಾಷ್ಟ್ರದ ಹಿತಚಿಂತನೆಗೆ ಕೈಜೋಡಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಸತತ ಮೂರನೇ ಬಾರಿ ಪ್ರಧಾನಿಗಳಾಗಿ ಅಧಿಕಾರ ನಿರ್ವಹಿಸುತ್ತಿರುವ ನರೇಂದ್ರ ಮೋದಿಗಳ ಸಂಕಲ್ಪದಂತೆ ವಿದ್ಯಾರ್ಥಿಗಳನ್ನು ಸ್ವಇಚ್ಛೆಯಿಂದ ಸದಸ್ಯರನ್ನಾಗಿಸುತ್ತಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಕಾಲೇಜುಗಳ ಸಮೀಪದಲ್ಲಿ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷ ಪುಷ್ಪರಾಜ್, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಚಿನ್‌ಗೌಡ, ಕಾರ್ಯದರ್ಶಿ ರಾಜೇಶ್, ಶಶಿ ಆಲ್ದೂರು, ಯುವ ಮೋರ್ಚಾ ನಗರ ಅಧ್ಯಕ್ಷ ಜೀವನ ಕೋಟೆ, ಪ್ರಮುಖರಾದ ಪುನೀತ್, ಕಿಟ್ಟಿ, ಕಿಶೋರ್, ತಿಲಕ್ ರಾಜ್ ಅರಸ್, ಜೀವನ್, ದೀಪಕ್ ಸುವರ್ಣ, ಪ್ರಶಾಂತ್ ಹಾಜರಿದ್ದರು.

7 ಕೆಸಿಕೆಎಂ 3ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜು ಬಳಿ ಸೋಮವಾರ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯಿತು. ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ, ಸಂತೋಷ್‌ ಕೋಟ್ಯಾನ್‌, ಸಚಿನ್‌ಗೌಡ ಹಾಗೂ ಕಾರ್ಯಕರ್ತರು ಇದ್ದರು.