ಸಾರಾಂಶ
ಮಗ್ಗೆಯಲ್ಲಿ ರೆಡ್ ಕ್ರಾಸ್‌ನಿಂದ ರಕ್ತದಾನ ಶಿಬಿರಕನ್ನಡಪ್ರಭ ವಾರ್ತೆ ಆಲೂರು
ಯುವಜನತೆ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಮುಂದೆ ಬರುವ ಮೂಲಕ ರಕ್ತದ ಕೊರತೆಯನ್ನುನೀಗಿಸಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಪತಿ ಎಚ್.ಪಿ.ಮೋಹನ್ ಹೇಳಿದರು.ತಾಲೂಕಿನ ಮಗ್ಗೆ ಗ್ರಾಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಲಯನ್ಸ್ ಸೇವಾ ಸಂಸ್ಥೆ ಮಗ್ಗೆ ರಾಯರಕೊಪ್ಪಲು ಮತ್ತು ಹಾಸನ ರಕ್ತನಿಧಿ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಯಾವುದೇ ವಸ್ತುಗಳನ್ನು ಕೃತಕ ಸೃಷ್ಟಿ ಮಾಡಬಹುದು. ಅದರೆ ರಕ್ತವನ್ನು ಕೃತಕ ಸೃಷ್ಟಿ ಮಾಡಲು ಇಂದಿಗೂ ಸಾದ್ಯವಾಗಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಭಾರತದಲ್ಲಿ ರಕ್ತದ ಕೊರತೆ ಇದ್ದು ರಕ್ತ ಹೀನತೆ, ವಿವಿಧ ಕಾಯಿಲೆಗಳಿಂದ ಬಳಲುವವರು ಮತ್ತು ಅಪಘಾತದಂತಹ ತುರ್ತು ಸಂದರ್ಭಗಳನ್ನು ನಿಭಾಯಿಸಲು ರಕ್ತ ಸಂಗ್ರಹದ ಅಗತ್ಯವಿರುತ್ತದೆ. ಹೀಗಾಗಿ ಪರೋಪಕಾರದ ಉದ್ದೇಶವುಳ್ಳ ಇಂತಹ ರಕ್ತದಾನ ಶಿಬಿರಗಳು ಹೆಚ್ಚೆಚ್ಚು ನಡೆಯಬೇಕು ಎಂದು ಸಲಹೆ ನೀಡಿದರು.ರಕ್ತದಾನ ಮಾಡುವುದರಿಂದ ಇತರ ಕಾಯಿಲೆಗಳು ಬರುತ್ತದೆ ಎಂಬುದನ್ನು ದೂರ ಮಾಡಬೇಕು. ರಕ್ತ ನೀಡುವುದರಿಂದ ಅಷ್ಟೇ ಪ್ರಮಾಣದಲ್ಲಿ ರಕ್ತ ಉತ್ಪತ್ತಿಯಾಗುತ್ತದೆ. ರಕ್ತದಾನ ಮಾಡುವುದರಿಂದ ವ್ಯಕ್ತಿಯ ಅರೋಗ್ಯ ಕೂಡ ಸುಧಾರಿಸುತ್ತದೆ. ಜನರು ಬೇರೆ ಯಾವುದೇ ಮಾತುಗಳಿಗೂ ಕಿವಿ ಕೊಡದೆ ಇನ್ನೊಬ್ಬರ ಜೀವ ಉಳಿಸುವ ಅವಶ್ಯಕತೆಗೆ ಇಂತಹ ಶಿಬಿರಗಳ ಅಗತ್ಯ ಇದೆ ಎಂದರು.
ಭಾರತೀಯ್ರ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಸಭಾಪತಿ ಕೆ.ಎನ್.ಕಾಂತರಾಜ್ ಮಾತನಾಡಿ, ರಕ್ತದಾನ ಮಾಡುವ ಮನೋಭಾವನೆ ಬೆಳೆಯುತ್ತಿರುವುದು ಉತ್ತಮ ಬೆಳವಣಿಗೆ. ರಕ್ತದಾನದಂತೆಯೇ ಮರಣದ ಬಳಿಕ ಅಮೂಲ್ಯವಾದ ದೇಹದ ಅಂಗಾಂಗಗಳನ್ನು ಅವಶ್ಯಕತೆ ಇರುವವರಿಗೆ ದಾನ ಮಾಡುವ ಮೂಲಕ ಅವರ ಬಾಳಲ್ಲಿ ಬೆಳಕನ್ನು ತೋರುವಂತಾಗಬೇಕು ಎಂದರು.ಮಗ್ಗೆ-ರಾಯರಕೊಪ್ಪಲು ಲಯನ್ಸ್ ಕ್ಲಬ್ ಅಧ್ಯಕ್ಷ ಧರ್ಮಪ್ಪ ಮಾತನಾಡಿ, ರಕ್ತದಾನದ ಬಗ್ಗೆ ಇದ್ದ ಭಯ, ಆತಂಕ ದೂರ ಮಾಡುವ ಅನಿವಾರ್ಯ ಇದೆ. ರಕ್ತದಾನದಿಂದ ರಕ್ತದ ಆವಶ್ಯಕತೆ ಇರುವವರಿಗೆ ಹಾಗೂ ರಕ್ತ ನೀಡುವ ವ್ಯಕ್ತಿಗೂ ಲಾಭ ಇದೆ ಎನ್ನುವ ಸತ್ಯಾಂಶಗಳನ್ನು ತಿಳಿ ಹೇಳುವ ಕಾರ್ಯ ನಡೆಯುತ್ತಿರುವುದು ರಕ್ತದಾನ ಮಹತ್ವದ ಬಗ್ಗೆ ಜಾಗೃತಿ ಮೂಡಲು ಸಾಧ್ಯವಿದೆ ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಕಾರ್ಯದರ್ಶಿ ವೀರಭದ್ರಸ್ವಾಮಿ, ಸುನಿಲ್, ಲೋಹಿತಾಶ್ವ, ರಾಜ್‌ಕುಮಾರ್, ಚಂದ್ರೇಗೌಡ, ಶಶಿಧರ, ರಘು, ಆಜರ್, ಪ್ರವೀಣ, ಪ್ರಸನ್ನ ಹಾಗೂ ಇತರರು ಉಪಸ್ಥಿತರಿದ್ದರು.ಮಗ್ಗೆಯಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಸ್ಥಳೀಯ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.