ಯುವಕರು ರಚನಾತ್ಮಕ ಕಾರ್ಯಕ್ರಮ ಮೂಲಕ ಅಭಿವೃದ್ಧಿಗೆ ಶ್ರಮಿಸಬೇಕು: ಮಧು ಜಿ.ಮಾದೇಗೌಡ

| Published : Dec 03 2024, 12:32 AM IST

ಯುವಕರು ರಚನಾತ್ಮಕ ಕಾರ್ಯಕ್ರಮ ಮೂಲಕ ಅಭಿವೃದ್ಧಿಗೆ ಶ್ರಮಿಸಬೇಕು: ಮಧು ಜಿ.ಮಾದೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಯಂ ಸೇವಕರು ತಮ್ಮ ಜೀವನದಲ್ಲಿ ಶಿಸ್ತು ಮತ್ತು ಗುರಿಯನ್ನು ಅಳವಡಿಸಿಕೊಳ್ಳಬೇಕು. ಗಾಂಧಿಕಂಡ ಗ್ರಾಮ ಸ್ವಾರಾಜ್ಯದ ಕನಸ್ಸನ್ನು ನನಸು ಮಾಡಬೇಕಾದರೆ ಗ್ರಾಮದ ಪ್ರತಿಯೊಬ್ಬರು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡದೆ ಒಗ್ಗಟ್ಟಿನಿಂದ ಇರಬೇಕೆಂದರು. ಗ್ರಾಮದ ಅಭಿವೃದ್ಧಿಗಾಗಿ ಇಂದಿನ ಯುವಕರು ಪಣತೊಡಬೇಕಾಗಿದೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಯುವಕರು ಅನೇಕ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಶಾಸಕ ಮಧು ಜಿ.ಮಾದೇಗೌಡ ತಿಳಿಸಿದರು.

ಕೂಳಗೆರೆ ಗ್ರಾಮದಲ್ಲಿ ಭಾರತೀ ಪದವಿಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯಿಂದ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಯುವಕರು ಈ ದೇಶದ ಸಂಪತ್ತು. ಯುವಕರಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.

ಹಳ್ಳಿಗಳಲ್ಲಿ ಸಾಮಾಜಿಕ ಮೌಲ್ಯಗಳು ಮರೆಯಾಗುತ್ತಿವೆ, ಹಳ್ಳಿಯ ಸಂಸ್ಕೃತಿ ಮರೆತು ವಿಲಾಸಿ ಜೀವನಕ್ಕೆ ಮಾರು ಹೋಗಿ ವಿದೇಶಿ ಸಂಸ್ಕೃತಿಯ ಅನುಕರಣೆಯ ಪ್ರಭಾವದಿಂದ ಆರೋಗ್ಯ ಮತ್ತು ಮೌಲ್ಯ ಎರಡನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.

ಸ್ವಯಂ ಸೇವಕರು ತಮ್ಮ ಜೀವನದಲ್ಲಿ ಶಿಸ್ತು ಮತ್ತು ಗುರಿಯನ್ನು ಅಳವಡಿಸಿಕೊಳ್ಳಬೇಕು. ಗಾಂಧಿಕಂಡ ಗ್ರಾಮ ಸ್ವಾರಾಜ್ಯದ ಕನಸ್ಸನ್ನು ನನಸು ಮಾಡಬೇಕಾದರೆ ಗ್ರಾಮದ ಪ್ರತಿಯೊಬ್ಬರು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡದೆ ಒಗ್ಗಟ್ಟಿನಿಂದ ಇರಬೇಕೆಂದರು. ಗ್ರಾಮದ ಅಭಿವೃದ್ಧಿಗಾಗಿ ಇಂದಿನ ಯುವಕರು ಪಣತೊಡಬೇಕಾಗಿದೆ. ಸಮುದಾಯ ಭವನಕ್ಕೆ ನನ್ನ ಅನುದಾನದಲ್ಲಿ 5 ಲಕ್ಷ ರು. ನೀಡುವುದಾಗಿ ಘೋಷಣೆ ಮಾಡಿದರು.

ಭಾರತೀ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಶ್ರಮದಾನರಿಂದ ಸ್ವಚ್ಛ ಗ್ರಾಮವಾಗುತ್ತದೆ. ಎಲ್ಲಾ ಗ್ರಾಮಗಳು ಅಭಿವೃದ್ಧಿಗೊಂಡ ಗಾಂಧೀಜಿಯವರು ಕಂಡ ಸ್ವಚ್ಛ ಭಾರತದ ಪರಿಕಲ್ಪನೆ ಸಾಕಾರಗೊಳ್ಳಲಿದೆ ಎಂದರು.

ಗ್ರಾಮ ಮುಖಂಡ ಕೆ.ಟಿ.ಶೇಖರ್ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಶಾಸಕ ಮಧುಜಿಮಾದೇಗೌಡ ಅವರಿಗೆ ಗ್ರಾಮಸ್ಥರು ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು. ಭಾರತೀ ಕಾಲೇಜು ಪ್ರಾಂಶುಪಾಲೆ ಜಿ.ಬಿ.ಪಲ್ಲವಿ, ಪದವಿಪೂರ್ವ ಕಾಲೇಜಿನ ಆಡಳಿತ ಅಧಿಕಾರಿ ಎಸ್.ಜವರೇಗೌಡ, ಸಹಾಯಕ ಪ್ರಾಧ್ಯಾಪಕ ಜಿ.ಕೆ.ಕೃಷ್ಣ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಎಸ್.ಬಸವರಾಜು, ಸಹ ಶಿಬಿರಾಧಿಕಾರಿ ಪಿ.ಎ.ಶ್ರೀದತ್, ನಾಡಗೌಡ ಮಲ್ಲಪ್ಪ, ಡಿ.ಸ್ವಾಮಿ, ಸಿದ್ದೇಗೌಡ, ಅಶೋಕ, ಉಪನ್ಯಾಸಕ ರವಿಕಿರಣ್ ಕೊಳಗೆರೆ, ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.