ಸಾರಾಂಶ
ದೇವದುರ್ಗ ಸಮೀಪದ ಮೇದಿನಪುರು ಗ್ರಾಮದಲ್ಲಿ ಅಮೃತ ಸಂಜೀವಿನಿ ಒಕ್ಕೂಟ ವತಿಯಿಂದ ರಂಗೋಲಿ ಹಾಕುವ ಮೂಲಕ ಮತದಾನ ಜಾಗೃತಿ ಅಭಿಯಾನಕ್ಕೆ ಮಾರ್ಕಂಡಯ್ಯ ಚಾಲನೆ ನೀಡಿದರು.
ದೇವದುರ್ಗ: ಮೇ 7ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಹಕ್ಕನ್ನು ಚಲಾಯಿಸಬೇಕು ಎಂದು ಎನ್ಆರ್‌ಲ್ಎಂ ಯೋಜನೆ ವ್ಯವಸ್ಥಾಪಕ ಮಾರ್ಕಂಡಯ್ಯ ಹೇಳಿದರು.
ತಾಲೂಕಿನ ಮೇದಿನಪುರು ಗ್ರಾಮದಲ್ಲಿ ಕರಡಿಗುಡ್ಡ ಗ್ರಾಪಂ ಅಮೃತ ಸಂಜೀವಿನಿ ಒಕ್ಕೂಟ ವತಿಯಿಂದ ಆಯೋಜಿಸಿದ್ದ ರಂಗೋಲಿ ಹಾಕುವ ಮೂಲಕ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯುವಕರ ಮತದಾನ ಅತ್ಯಮೂಲ್ಯ ಎಂದರು. ಸಾರ್ವಜನಿಕರು ಯಾವುದೇ ಆಮಿಷ ಹಾಗೂ ಭಯಕ್ಕೆ ಒಳಗಾಗದೇ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿಯಬೇಕಿದೆ. ಮತದಾನ ಪ್ರಮಾಣ ಹೆಚ್ಚಳ ಕುರಿತು ಈಗಾಗಲೇ ಹಲವು ಒಕ್ಕೂಟ ಮೂಲಕ ಜಾಗೃತಿ ಮೂಡಿಸಲಾಗಿದೆ. ಅಭಿವೃದ್ಧಿ ವಿಚಾರ ಚಿಂತನೆಯ ವ್ಯಕ್ತಿಯನ್ನು ಆಯ್ಕೆ ಮಾಡುವುದ್ದರಿಂದ ದೇಶ ಅಭಿವೃದ್ಧಿ ಪತ್ತ ಸಾಗುತ್ತದೆ ಎಂದು ಹೇಳಿದರು.ವಲಯ ಮೇಲ್ವಿಚಾರಕಿ ಎನ್.ನಾಗರತ್ನ ಮಾತನಾಡಿದರು. ಇದೇ ಸಂದರ್ಭದಲ್ಲಿ ಒಕ್ಕೂಟ ಕಾರ್ಯದರ್ಶಿ ಲಕ್ಷ್ಮೀ, ಅಂಗನವಾಡಿ ಕಾರ್ಯಕರ್ತೆ ಶ್ರೀದೇವಿ, ಆಶಾ ಕಾರ್ಯಕರ್ತೆ ಚೆನ್ನಮ್ಮ ಗ್ರಾಪಂ ಸದಸ್ಯೆ ಗಂಗಮ್ಮ, ಎಲ್ಸಿಆರ್‌ಪಿ ಶಿವಕಾಂತಮ್ಮ, ಕೃಷಿ ಸಖಿ, ಪಶುಸಖಿ, ಸಸ್ವಹಾಯ ಗುಂಪುಗಳ ಸದಸ್ಯರು ಹಾಗೂ ಗ್ರಾಮದ ಮುಖಂಡರು ಪಾಲ್ಗೊಂಡಿದರು.