ವಿದ್ಯಾವಂತ ನಿರುದ್ಯೋಗಿಗಳಿಗೆ ಯುವನಿಧಿ ಸಹಕಾರಿ

| Published : Jan 13 2024, 01:32 AM IST

ಸಾರಾಂಶ

ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ ಘೋಷಣೆಯಂತೆ ಈಗಾಗಲೇ ನಾಲ್ಕು ಗ್ಯಾರಂಟಿ ಅನುಕೂಲಗಳು ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು ತಲುಪುತ್ತಿದ್ದು ,ಈಗ ಐದನೇ ಯೋಜನೆ ಯುವನಿಧಿ ಗ್ಯಾರಂಟಿ ಇಂದು ಮಾನ್ಯ ಮುಖ್ಯಮಂತ್ರಿ ಗಳಿಂದ ಶಿವಮೊಗ್ಗದ ಪ್ರೀಡಂ ಪಾರ್ಕ್ನಲ್ಲಿ ಲೋಕಾರ್ಪಣೆಯಾಗಿದೆ.

ಕನ್ನಡಪ್ರಭ ವಾರ್ತೆ ಮಾಲೂರುರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯಿಂದ ವಿದ್ಯಾವಂತ ನಿರುದ್ಯೋಗಿ ಫಲಾನುಭವಿಗಳಿಗೆ ಪ್ರತಿ ತಿಂಗಳು ನಗದು ವರ್ಗಾವಣೆಯಾಗಿದ್ದು,ದೇಶದಲ್ಲೇ ಮೊದಲು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಪಟ್ಟಣದ ಬಸ್ ನಿಲ್ದಾಣ ಬಳಿಯ ಪುರಸಭೆ ಉದ್ಯಾನವನದಲ್ಲಿ ರಾಷ್ಟ್ರೀಯ ಯುವದಿನದ ಅಂಗವಾಗಿ ವಿವೇಕಾನಂದ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ ಘೋಷಣೆಯಂತೆ ಈಗಾಗಲೇ ನಾಲ್ಕು ಗ್ಯಾರಂಟಿ ಅನುಕೂಲಗಳು ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು ತಲುಪುತ್ತಿದ್ದು ,ಈಗ ಐದನೇ ಯೋಜನೆ ಯುವನಿಧಿ ಗ್ಯಾರಂಟಿ ಇಂದು ಮಾನ್ಯ ಮುಖ್ಯಮಂತ್ರಿ ಗಳಿಂದ ಶಿವಮೊಗ್ಗದ ಪ್ರೀಡಂ ಪಾರ್ಕ್ನಲ್ಲಿ ಲೋಕಾರ್ಪಣೆಯಾಗಿದೆ, ೨೦೨೩-೨೪ ನೇ ಸಾಲಿನಲ್ಲಿ ಈಗಾಗಲೇ ನೋಂದಣಿ ಆಗಿರುವ ೬೯ ಸಾವಿರ ನಿರುದ್ಯೋಗಿ ಯುವಕ-ಯುವತಿಯರಿಗೆ ಹಾಗೂ ೩೯ ಸಾವಿರ ಡಿಪ್ಲೋಮಾ ಶಿಕ್ಷಣ ಪಡೆದವರಿಗೆ ೨೫೦ ಕೋಟಿ ಹಣ ನೇರವಾಗಿ ಖಾತೆ(ಡಿಬಿಟಿ)ಮೂಲಕ ಸಂದಾಯವಾಗುತ್ತದೆ ಎಂದರು.ತಹಸೀಲ್ದಾರ್ ರಮೇಶ್,ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಚ್.ಹನುಮಂತಪ್ಪ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಧುಸೂಧನ್,ಎಚ್.ಎಂ.ವಿಜಯನರಸಿಂಹ ,ಮುಖಂಡರಾದ ವೀರಭದ್ರಪ್ಪ,ಎಂ.ವಿ.ಹನುಮಂತಪ್ಪ,ಬಾಳಿಗಾನಹಳ್ಳಿ ಶ್ರೀನಿವಾಸ್,ಎ.ಅಶ್ವಥ ರೆಡ್ಡಿ,ವಿಜಯಲಕ್ಷ್ಮೀ ಸಿಂಗ್,ಬೆಡಶೆಟ್ಟಿಹಳ್ಳಿ ರಮೇಶ್,ನವೀನ್ ಕುಮಾರ್,ಸತೀಶ್,ಗೋಪಿನಾಥ್,ಜಾಕಿ ಮಂಜುನಾಥ್,ಮೈಲಾಂಡಹಳ್ಳಿ ನಾರಾಯಣಸ್ವಾಮಿ,ಪುರಸಭೆ ಸದಸ್ಯ ಆರ್.ವೆಂಕಟೇಶ್,ಇಂತಿಯಾಜ್ ಖಾನ್ ಇನ್ನಿತರರು ಇದ್ದರು.