ದೇವರಬೆಳಕೆರೆ ಸರ್ಕಾರಿ ಶಾಲೆಯಲ್ಲಿ ವಲಯಮಟ್ಟದ ಕಲಿಕಾ ಹಬ್ಬ ಸಂಭ್ರಮ

| Published : Mar 06 2025, 12:36 AM IST

ದೇವರಬೆಳಕೆರೆ ಸರ್ಕಾರಿ ಶಾಲೆಯಲ್ಲಿ ವಲಯಮಟ್ಟದ ಕಲಿಕಾ ಹಬ್ಬ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿಗೆ ಸಮೀಪದ ದೇವರಬೆಳಕೆರೆ ವಲಯಮಟ್ಟದ ಕಲಿಕಾ ಹಬ್ಬವು ದೇವರಬೆಳಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೀತಮ್ಮ ಅಧ್ಯಕ್ಷತೆಯಲ್ಲಿ ಜರುಗಿತು

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಇಲ್ಲಿಗೆ ಸಮೀಪದ ದೇವರಬೆಳಕೆರೆ ವಲಯಮಟ್ಟದ ಕಲಿಕಾ ಹಬ್ಬವು ದೇವರಬೆಳಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೀತಮ್ಮ ಅಧ್ಯಕ್ಷತೆಯಲ್ಲಿ ಜರುಗಿತು. ಶಿಕ್ಷಣ ಸಂಯೋಜಕ ಬಸವರಾಜಪ್ಪ ಮಾತನಾಡಿ ಮಕ್ಕಳಿಗೆ ಕಥೆ ಹೇಳುವುದು , ಶುದ್ಧ ಬರವಣಿಗೆ, ಪೋಷಕರ ಆಟ, ಮೋಜಿನ ಗಣಿತ, ರಸ ಪ್ರಶ್ನೆ, ಜ್ಞಾಪಕಶಕ್ತಿ ಹಾಗೂ ಒಟ್ಟು ೨೦ ಕಲಿಕೆಯ ಏಳು ಚಟುವಟಿಕೆಗಳ ಬಗ್ಗೆ ಮಾಹಿತಿ ನೆನಪಿಸುವುದೇ ಕಲಿಕಾ ಹಬ್ಬವಾಗಿದೆ ಎಂದರು.

ಮಲ್ಲನಾಯಕನಹಳ್ಳಿ ಶಾಲೆ ಮುಖ್ಯ ಶಿಕ್ಷಕ ಮಠ ಮಾತನಾಡಿ, 3ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಬುನಾದಿ ಸಾಮರ್ಥ್ಯಗಳ ಕಲಿಕೆಯೇ ಮುಖ್ಯವಾಗಿದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ನಿಂಗರಾಜ್, ಸದಸ್ಯರಾದ ಇಂದ್ರಮ್ಮ, ಜ್ಯೋತಿ, ಬಸಮ್ಮ, ಗದಿಗೇಶ್, ಗ್ರಾ.ಪಂ ಸದಸ್ಯೆ ರತ್ನಮ್ಮ, ವಿವಿಧ ಶಾಲೆಗಳ ಹನುಮಂತ ನಾಯ್ಕ್, ಗಂಗಾಧರಪ್ಪ, ಶಿವಣ್ಣ, ಮುಖ್ಯ ಶಿಕ್ಷಕಿ ಭಾಗ್ಯಜ್ಯೋತಿ ಸಭೆಯಲ್ಲಿ ವಿಷಯ ಹಂಚಿಕೊಂಡರು.

ಸಮೂಹ ಸಂಪನ್ಮೂಲ ವ್ಯಕ್ತಿ ಸತೀಶ್, ಕರಿಬಸಪ್ಪ ಬಸಲಿ, ಮಲ್ಲಿಕಾರ್ಜುನ್, ಶಾಲೆಯ ರಶ್ಮಿ, ಆಯಿಷಾ ಸಿದ್ದಿಕಾ, ಕೆ ಪ್ರಕಾಶ್ ಕರಡಿ ಮತ್ತಿತರರು ಮಕ್ಕಳ ಚಟುವಟಕೆಗಳ ಜವಾಬ್ದಾರಿ ನಿರ್ವಹಿಸಿದರು. ಗ್ರಾಮದ ಬಸವೇಶ್ವರ ದೇವಾಲಯದಿಂದ ಶಾಲೆವರೆಗೆ ಎತ್ತಿನ ಬಂಡಿಗೆ ಅಲಂಕಾರ ಮಾಡಿ, ಮಕ್ಕಳು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಆಗಮಿಸಿದರು. ಮಕ್ಕಳು ಕನ್ನಡ ಕವಿಗಳ ಭಾವಚಿತ್ರ ಹಿಡಿದು ಮೆರವಣಿಗೆಯಲ್ಲಿ ಸಾಗಿದರು.

ಸಾಲಕಟ್ಟೆ, ಸಂಕ್ಲೀಪುರ, ಗುಳದಹಳ್ಳಿ, ಆದಾಪುರ, ಮಿಟ್ಲಕಟ್ಟೆ, ಸತ್ಯನಾರಾಯಣಪುರ. ಬೂದಿಹಾಳು, ಮಲ್ಲನಾಯ್ಕನಹಳ್ಳಿ, ಶ್ರೀನಿವಾಸನಗರ ಗ್ರಾಮಗಳ ನೂರಾರು ಶಾಲಾ ಮಕ್ಕಳು ಮತ್ತು ಪೋಷಕರು, ಕಲಿಕಾ ಹಬ್ಬದಲ್ಲಿ ಭಾಗವಹಿಸಿದ್ದರು. ವರ್ಗಾವಣೆಗೊಂಡ ಉಪಾಧ್ಯಾಯರನ್ನು ಗೌರವಿಸಲಾಯಿತು.

- - - -ಚಿತ್ರ-೫ಎಂಬಿಆರ್೨.:

ದೇವರಬೆಳಕೆರೆ ವಲಯಮಟ್ಟದ ಕಲಿಕಾ ಹಬ್ಬದಲ್ಲಿ ಮಕ್ಕಳು ಪೂರ್ಣಕುಂಭ ಹೊತ್ತು ಎತ್ತಿನ ಬಂಡಿಯೊಂದಿಗೆ ಮೆರಣಿಗೆಯಲ್ಲಿ ಸಾಗಿದರು.