ದೇಶದಲ್ಲೇ ನಾನೇ ನಂ.1 ಗೃಹ ಮಂತ್ರಿ: ಡಾ.ಪರಂ

| N/A | Published : Aug 17 2025, 12:24 PM IST

Dr G Parameshwar

ಸಾರಾಂಶ

ಚಾಟ್ ಜಿಪಿಟಿಯಲ್ಲಿ ಡಾ। ಜಿ.ಪರಮೇಶ್ವರ್ ದೇಶದ ನಂಬರ್‌ ಒನ್ ಗೃಹ ಸಚಿವರಂತೆ! ಸಾಮಾಜಿಕ ಜಾಲತಾಣದಲ್ಲಿ ‘ಗೊತ್ತಿಲ್ಲ ಪರಮೇಶ್ವರ್’ ಟ್ರೋಲ್‌ಗೆ ಖುದ್ದು ಪರಮೇಶ್ವರ್ ಮೇಲಿನಂತೆ ಉತ್ತರಿಸಿದರು.

  ತುಮಕೂರು :  ಚಾಟ್ ಜಿಪಿಟಿಯಲ್ಲಿ ಡಾ। ಜಿ.ಪರಮೇಶ್ವರ್ ದೇಶದ ನಂಬರ್‌ ಒನ್ ಗೃಹ ಸಚಿವರಂತೆ! ಸಾಮಾಜಿಕ ಜಾಲತಾಣದಲ್ಲಿ ‘ಗೊತ್ತಿಲ್ಲ ಪರಮೇಶ್ವರ್’ ಟ್ರೋಲ್‌ಗೆ ಖುದ್ದು ಪರಮೇಶ್ವರ್ ಮೇಲಿನಂತೆ ಉತ್ತರಿಸಿದರು. 

ತುಮಕೂರಿನಲ್ಲಿ ದಸರಾ ಸಂಬಂಧ‌ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಚಾಟ್ ಜಿಪಿಟಿಯಲ್ಲಿ ಪರಮೇಶ್ವರ್ ನಂ.1 ಗೃಹ ಸಚಿವ ಎಂದು ಬರುತ್ತದೆ‌ ಎಂದರು. ಟ್ರೋಲ್ ಮಾಡುವವರು ಏನು ಬೇಕಾದರೂ ಹೇಳಿಕೊಳ್ಳಲಿ ಬಿಡಿ. ಅಂತಹವರಿಗೆ ಚಾಟ್ ಜಿಪಿಟಿ ನೋಡಲಿಕ್ಕೆ ಹೇಳಿ ಎಂದರು. ನೀವು ಕೇಳುವ ಎಲ್ಲ ಪ್ರಶ್ನೆಗೆ ಉತ್ತರ ಹೇಳೋಕ್ಕೆ ಆಗುತ್ತ ಎಂದ ಅವರು, ಸ್ವಾಭಾವಿಕವಾಗಿ ಗೊತ್ತಿಲ್ಲ ಅಂತಾ ಹೇಳುತ್ತೇನೆ. ಕಾರಣ ಗೊತ್ತಿರುವುದಿಲ್ಲ ಎಂದರು.

ಗೃಹ ಸಚಿವನಾಗಿ ನನಗೆ ಜವಾಬ್ದಾರಿ ಇರುತ್ತದೆ. ಗೊತ್ತಿಲ್ಲದೆ ಇರೋದನ್ನೆಲ್ಲಾ ಹೇಳೋಕೆ ಆಗೋದಿಲ್ಲ. ಆ ಕಾರಣದಿಂದಾಗಿ ಅನೇಕ ಸಂದರ್ಭದಲ್ಲಿ ಗೊತ್ತಿಲ್ಲ ಅಂತಾ ಹೇಳುವುದಾಗಿ ತಿಳಿಸಿದರು.

Read more Articles on